ರಾಷ್ಟ್ರೀಯ

ಸೆನ್ಸೆಕ್ಸ್: ಆರಂಭಿಕ ವಹಿವಾಟಿನಲ್ಲಿ 200 ಅಂಕ ಇಳಿಕೆ

ಸೆನ್ಸೆಕ್ಸ್: ಆರಂಭಿಕ ವಹಿವಾಟಿನಲ್ಲಿ 200 ಅಂಕ ಇಳಿಕೆ

ಮುಂಬೈ, ಅ 14 : ಎಲ್ಲ ವಲಯಗಳ ಷೇರುಗಳಲ್ಲಿ ಮಾರಾಟ ಬಿರುಸಾಗಿದ್ದರಿಂದ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‌ಇ)ದ ಸಂವೇದಿ ಸೂಚ್ಯಂಕ, ಸೆನ್ಸೆಕ್ಸ್ ಬುಧವಾರ 242 ಅಂಕ ಕುಸಿದು 40,382.89 ಕ್ಕೆ ಇಳಿದಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್ಎಸ್ಇ)ದ ಸೂಚ್ಯಂಕ ನಿಫ್ಟಿ ಸಹ 85.55 ಅಂಕ ಕುಸಿದು 11,848.95 ಕ್ಕೆ ಇಳಿದಿದೆ.

ಸೆನ್ಸೆಕ್ಸ್ ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 40,623.19 ಮತ್ತು 40,365.83ರಲ್ಲಿತ್ತು.ನಿಫ್ಟಿ ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 11,919.80 ಮತ್ತು 11,838.35ರಲ್ಲಿತ್ತು. ಪ್ರಮುಖ 30 ಕಂಪೆನಿಗಳ ಷೇರುಗಳ ಪೈಕಿ 21 ಕುಸಿದಿದ್ದರೆ, 9 ಕಂಪೆನಿ ಷೇರುಗಳು ಏರಿಕೆ ಕಂಡಿವೆ. ನಷ್ಟ ಕಂಡ ಷೇರುಗಳ ಪೈಕಿ ಎನ್‌ಟಿಪಿಸಿ,, ಒಎನ್‌ಜಿಸಿ, ಪವರ್‌ಗ್ರಿಡ್ ಮತ್ತು ಐಟಿಸಿ ಸೇರಿವೆ. ಲಾಭ ಗಳಿಸಿದ ಷೇರುಗಳಲ್ಲಿ ಟಾಟಾ ಸ್ಟೀಲ್ , ಬಜಾಜ್ ಆಟೋ, ಹಿಂದ್ ಯೂನಿಲಿವರ್ ಮತ್ತು ಟೈಟಾನ್ ಸೇರಿವೆ.

  


ಸುದ್ದಿ ಓದಿ