ರಾಷ್ಟ್ರೀಯ

ಸೆನ್ಸೆಕ್ಸ್: 1066.33 ಅಂಕ ಪತನ

ಸೆನ್ಸೆಕ್ಸ್: 1066.33 ಅಂಕ ಪತನ

ಮುಂಬೈ, ಅ 15  :ಕಳೆದ ಹತ್ತು ದಿನಗಳಿಂದ ಏರುಗತಿ ದಾಖಲಿಸಿದ್ದ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ, ಸೆನ್ಸೆಕ್ಸ್ ದುರ್ಬಲ ಜಾಗತಿಕ ಮಾರುಕಟ್ಟೆಗಳ ವಹಿವಾಟು ಮತ್ತು ವಿವಿಧ ವಲಯಗಳ ಷೇರುಗಳ ಭಾರೀ ಮಾರಾಟ ಒತ್ತಡದಿಂದ  ಗುರುವಾರ ದಿನದ ವಹಿವಾಟಿನ ಅಂತ್ಯಕ್ಕೆ 1066.33 ಅಂಕ ಕುಸಿದು 39,728.41ಕ್ಕೆ ಇಳಿದಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಸಹ 290.70 ಅಂಕ ಕುಸಿದು 11,680.35 ಕ್ಕೆ ಇಳಿದಿದೆ..

ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 254 ಅಂಕ ಏರಿಕೆ ಕಂಡು 41,048ರಲ್ಲಿ ಉತ್ತಮ ಆರಂಭ ಕಂಡಿತ್ತು. ನಂತರ  ಸುಮಾರು 1127 ಅಂಕ ಕುಸಿದು 39,667.47 ಕ್ಕೆ ಇಳಿದಿತ್ತು. ಅಂತಿಮವಾಗಿ ದಿನದ ವಹಿವಾಟಿನ ಕೊವೆಯಲ್ಲಿ 1066.33 ಅಂಕ ಕುಸಿದು  39,728.41ರಲ್ಲಿತ್ತು.  

ಸೆನ್ಸೆಕ್ಸ್, ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 41,048.05 ಮತ್ತು 39,667.47 ರಲ್ಲಿತ್ತು.ನಿಫ್ಟಿ, ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 12,025.45 ಮತ್ತು 11,661.30 ರಲ್ಲಿತ್ತು. ದೂರಸಂಪರ್ಕ, ಬ್ಯಾಂಕಿಂಗ್, ಇಂಧನ, ಹಣಕಾಸು ಮತ್ತು ತಂತ್ರಜ್ಞಾನ ಷೇರುಗಳು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿವೆ.   ಹೆಚ್ಚು ನಷ್ಟ ಕಂಡ ಷೇರುಗಳಲ್ಲಿ ಬಜಾಜ್ ಫೈನಾನ್ಸ್, ಟೆಕ್ ಮಹೀಂದ್ರಾ, ಐಸಿಐಸಿಐ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್ ಮತ್ತು ಕೊಟಕ್ ಬ್ಯಾಂಕ್ ಸೇರಿವೆ. ಪ್ರಮುಖ 30 ಕಂಪೆನಿಗಳ ಷೇರುಗಳ ಪೈಕಿ  29 ಕುಸಿದಿದ್ದರೆ ಒಂದು ಕಂಪೆನಿ ಷೇರು ಮಾತ್ರ ಏರಿಕೆ ದಾಖಲಿಸಿದೆ.   



ಸುದ್ದಿ ಓದಿ