ರಾಷ್ಟ್ರೀಯ

ಹಿರಿಯ ಪತ್ರಕರ್ತ ಹೇಮಂತ್ ವಿಷ್ಣೋಯ್ ನಿಧನ

ಹಿರಿಯ ಪತ್ರಕರ್ತ ಹೇಮಂತ್ ವಿಷ್ಣೋಯ್ ನಿಧನ

ನವದೆಹಲಿ, ನವೆಂಬರ್ 7: ಹಿರಿಯ ಪತ್ರಕರ್ತ ಹೇಮಂತ್ ವಿಷ್ಣೋಯಿ ಶನಿವಾರ ಬೆಳಿಗ್ಗೆ ಇಲ್ಲಿನ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. 

ಅವರಿಗೆ 67 ವರ್ಷ ವಯಸ್ಸಾಗಿತ್ತು. ಕಿಡ್ನಿ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ವಿಷ್ಣೋಯ್ ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.ವಿಷ್ಣೋಯ್ ಅವರು ಕಾಲೇಜು ದಿನಗಳಲ್ಲಿ ಎಬಿವಿಪಿಯಲ್ಲಿ ಸಕ್ರಿಯರಾಗಿದ್ದರು. 1974 ರಲ್ಲಿ ಬಿಜೆಪಿ ನಾಯಕ ಅರುಣ್ ಜೇಟ್ಲಿ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದಾಗ ವಿಷ್ಣೋಯ್ ಅವರು ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. 

ವಿಷ್ಣೋಯ್ ಅವರು  ನವಭಾರತ್ ಟೈಮ್ಸ್ ಪತ್ರಿಕೆಯಲ್ಲಿ ದೀರ್ಘಕಾಲ ಕೆಲಸ ಮಾಡಿದ್ದರು. ನಂತರ ಹಿಂದೂಸ್ತಾನ್ ಸಮಾಚಾರ್ ಗೆ ಸೇರಿ  ಸಂಪಾದಕರಾಗಿ ಕೆಲಸ ಮಾಡಿದ್ದರು. ರಾಷ್ಟ್ರೀಯ ಪತ್ರಕರ್ತರ ಒಕ್ಕೂಟ (ಭಾರತ) ಮತ್ತು ದೆಹಲಿ ಪತ್ರಕರ್ತರ ಸಂಘದದಲ್ಲೂ ಸೇವೆ ಸಲ್ಲಿಸಿದ್ದ  ವಿಷ್ಣೋಯ್  ತುರ್ತು ಪರಿಸ್ಥಿತಿಯಲ್ಲಿ 19 ತಿಂಗಳು ಜೈಲು ವಾಸ ಅನುಭವಿಸಿದ್ದರು. 

ಮೃತರ ಪಾರ್ಥಿವ ಶರೀದ ಅಂತಿಮ ವಿಧಿ-ವಿಧಾನಗಳನ್ನು ಗೀತಾ ಕಾಲೋನಿ ಸ್ಮಶಾನದಲ್ಲಿ ನಡೆಯಿತು. ಅವರ ಕುಟುಂಬ ಸದಸ್ಯರು ಮತ್ತು ಕೇಂದ್ರ ಸಚಿವ ಡಾ.ಹರ್ಷ್ ವರ್ಧನ್ ಮತ್ತು ಇತರ ಸ್ನೇಹಿತರು ಮತ್ತು ಹಿತೈಷಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. 

ಸುದ್ದಿ ಓದಿ