ಮನರಂಜನೆ

ಹಿರಿಯ ಕಲಾವಿದ ಅಶೋಕ್‌ ರಾವ್‌ ನಿಧನ

ಹಿರಿಯ ಕಲಾವಿದ ಅಶೋಕ್‌ ರಾವ್‌ ನಿಧನ

ಬೆಂಗಳೂರು: ಫೆಬ್ರವರಿ ೦೨   ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಅಶೋಕ್‌ ರಾವ್‌ ಅವರು ಇಂದು ಬೆಳಗ್ಗಿನ ಜಾವ ನಿಧನರಾಗಿದ್ದಾರೆ.

ಅವರಿಗೆ ೭೨ ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್‌ ನಿಂದ ಬಳಲುತ್ತಿದ್ದರು. ತಜ್ಞವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗಿನ ಜಾವ ಹೃದಯಾಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಡಾ. ರಾಜಕುಮಾರ್‌ ಅಭಿನಯದ ಪರಶುರಾಮ ಚಲನಚಿತ್ರದಿಂದ ಅವರು ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಬಹುಬೇಗನೇ ತಮ್ಮ ವಿಶಿಷ್ಟ ಅಭಿನಯದಿಂದ ಬೇಡಿಕೆಯ, ಜನಪ್ರಿಯ ಪೋಷಕ ಕಲಾವಿದರಾಗಿ ಹೊರಹೊಮ್ಮಿದ್ದರು.

ಸುದ್ದಿ ಓದಿ