ಹಿರಿಯ ನಿರ್ದೇಶಕ ಕೆ.ಎಸ್.ಸೇತುಮಾಧವನ್ ವಿಧಿವಶ
ಚೆನ್ನೈ, ಡಿ ೨೪ - ಮಲಯಾಳಂ ಚಿತ್ರರಂಗದ ಹಿರಿಯ ನಿರ್ದೇಶಕ ಕೆ.ಎಸ್.ಸೇತುಮಾಧವನ್ (೯೦) ಅವರು ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ.
೧೦ ರಾಷ್ಟ್ರ ಪ್ರಶಸ್ತಿಗಳು, ೯ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿದ್ದ ಕೆ.ಎಸ್.ಸೇತುಮಾಧವನ್ ಅತ್ಯಂತ ಪ್ರತಿಭಾವಂತ ನಿರ್ದೇಶಕರಾಗಿದ್ದರು.
ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಚೆನ್ನೈನಲ್ಲಿ
ಕೊನೆಯುಸಿರೆಳೆದಿದ್ದಾರೆ. ಸೇತುಮಾಧವನ್ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ
ವಿಜಯನ್ ಹಾಗೂ ಮಲೆಯಾಳಂ ಚಿತ್ರರಂಗ ಕಂಬನಿ ಮಿಡಿದಿದೆ. ಸೇತುಮಾಧವನ್ ಅವರು ಮಲಯಾಳಂ
ಮಾತ್ರವಲ್ಲದೇ, ಹಿಂದಿ, ತಮಿಳು ಹಾಗೂ ತೆಲುಗು ಸೇರಿ ಒಟ್ಟು ೭೦ ಚಿತ್ರ
ನಿರ್ದೇಶಿಸಿದ್ದರು. ೧೯೬೦ರಲ್ಲಿ ತೆರೆಕಂಡ ’ಜ್ಞಾನ ಸುಂದರಿ’ ಅವರ ಮೊದಲ ಸಿನಿಮಾವಾಗಿದೆ.
೧೯೯೧ರಲ್ಲಿ ಬಿಡುಗಡೆಯಾದ ’ವೇನಲ್ಕಿನಾವುಗಳ್’ ಅವರ ನಿರ್ದೇಶನದಲ್ಲಿ ಮೂಡಿ ಬಂದ ಕೊನೆಯ
ಚಿತ್ರವಾಗಿದೆ.