ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಗೋವಿಂದ ರೆಡ್ಡಿ ನಿಧನ
ಲೋಕದರ್ಶನ ವರದಿ
ಬಳ್ಳಾರಿ 20: ನಗರದ ಅಂದ್ರಾಳ ಏರಿಯಾದ ನಿವಾಸಿ ಹಿರಿಯ ಕಾಂಗ್ರೆಸ್ ಮುಖಂಡ ಬಂಡಿ ಗೋವಿಂದ ರೆಡ್ಡಿ (74) ಮೇ. 20 ಶನಿವಾರರಂದು ಬೆಳಿಗ್ಗೆ ನಗರದ ಒಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಗುರುವಾರ ಸಂಜೆ ಅನಾರೋಗ್ಯಕ್ಕೆ ಗುರಿಯಾಗಿ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ಸೇರಿಸಿರುತ್ತಾರೆ. ಶನಿವಾರ ಬೆಳಿಗ್ಗೆ ಉಪಹಾರ ಮಾಡಿದ ನಂತರ ಹೃದಯಾಘಾತ ನಿಧನ ಹೊಂದಿದ್ದಾರೆ ಎಂದು ವೈದ್ಯರು ತಿಳಿಸಿರುತ್ತಾರೆ.
ಮೂಲತ ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ರಾಯದುರ್ಗ ತಾಲೂಕ ಎಳಂಜಿ ಗ್ರಾಮಕ್ಕೆ ಸೇರಿದ ಗೋವಿಂದ ರೆಡ್ಡಿ 40 ವರ್ಷದ ಹಿಂದೆ ಬಳ್ಳಾರಿಗೆ ಬಂದು ಅಂದ್ರಾಳ್ನಲ್ಲಿ ವ್ಯವಸಾಯ ಮಾಡೊಕೊಂಡು ಇಲ್ಲಿಯ ನಿವಾಸಿಯಾಗಿರುತ್ತಾರೆ. ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯುವ ಮುಖಂಡ ನಾರಾ ಭರತ್ ರೆಡ್ಡಿ ಅವರ ವಿಜಯಕ್ಕೆ ಹಗಲು ರಾತ್ರಿ ಶ್ರಮಿಸಿದ್ದಾರೆ. ಗೋವಿಂದ ರೆಡ್ಡಿ ಮೃತ ಹೊಂದಿದ ಸಮಾಚಾರ ತಿಳಿದು ಕೂಡಲೇ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಅವರು ಆಸ್ಪತ್ರೆಗೆ ಹೋಗಿ ಗೋವಿಂದ ರೆಡ್ಡಿ ಕುಟುಂಬಕ್ಕೆ ಸ್ವಾಂತನ ಹೇಳಿ ಅಂತಿಮ ದರ್ಶನ ಪಡೆದಿರುತ್ತಾರೆ. ಹಾಗೆಯೇ ನಗರಸಭೆ ಮಾಜಿ ಸದಸ್ಯ, ಜನಗಣ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ, ಎನ್ ಗಂಗರೆಡ್ಡಿ ಅವರು ಗೋವಿಂದ ರೆಡ್ಡಿ ಅವರ ಪಾರ್ಥಿವ ಶರೀರಕ್ಕೆ ಹೂ ಮಾಲೆ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದರು. ನಗರದ ಹಿರಿಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಬಂಧು, ಮಿತ್ರರು ಅಂತಿಮ ದರ್ಶನವನ್ನು ಪಡೆದರು.