ಸಿಂಧಗಿ

ಆರೋಗ್ಯ ಇಲಾಖೆ ಸಹಯೋಗದಿಂದ ಹಿರಿಯ ನಾಗರಿಕರ ದಿನಾಚರಣೆ

ಆರೋಗ್ಯ ಇಲಾಖೆ ಸಹಯೋಗದಿಂದ ಹಿರಿಯ ನಾಗರಿಕರ ದಿನಾಚರಣೆ

ಸಿಂದಗಿ 30: ಮಾನಸಿಕ ಸಿಮೀತ ಕಳೆದಕೊಂಡಾಗಾ ಅಪರಾಧಗಳು ಹೆಚ್ಚೆಚ್ಚು ನಡೆಯುತ್ತಿವೆ ಅದಕ್ಕೆ ಪ್ರತಿ ತಿಂಗಳು ಮೊದಲ ಮಂಗಳವಾರ ತಾಲೂಕು ಆಸ್ಪತ್ರೆಯಲ್ಲಿ ಮಾನಸಿಕ ಆರೋಗ್ಯ ಪಡೆದುಕೊಳ್ಳಬೇಕಲ್ಲದೆ ಮಾನಸಿಕ ಕಿನ್ನತೆಗೊಳಗಾದವರು ಮಂತ್ರಕ್ಕಿಂತ ಮಾತ್ರೆ ಮುಖ್ಯ ಅದನ್ನು ಅನುಸರಿಸಬೇಕು ಮತ್ತು ಹಿರಿಯರ ಮಾರ್ಗದರ್ಶನ ಯುವಜನತೆಯ ಶಕ್ತಿ ಕ್ರೂಡಿಕರಣವಾದರೆ ಸುಬಧ್ರ್ರ ದೇಶ ಕಟ್ಟಲು ಸಾಧ್ಯ ಎಂದು ಮನೋರೋಗ ತಜ್ಞ ಡಾ. ಮಂಜುನಾಥ ಮಸಳಿ  ಹೇಳಿದರು. 

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಕಾನೂನು ಸೇವಾ ಸಮೀತಿ, ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡ ಮಾನಸಿಕ ಆರೋಗ್ಯ ದಿನ ಹಾಗೂ ಹಿರಿಯ ನಾಗರಿಕರ ದಿನಾಚರಣೆಯಲ್ಲಿ  ಮಾತನಾಡಿ, 2016ರಲ್ಲಿ ಕೆಲವೊಂದು ಜಿಲ್ಲೆಗಳಲ್ಲಿ ಕೆವಲ 36 ಸಾವಿರ ರೋಗಿಗಳು ಚಿಕಿತ್ಸೆ ದೊರಕುತ್ತಿತ್ತು ಅ. 10 ರಂದು ಮಾನಸೀಕ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತಿತ್ತು ಅದನ್ನು  ಎಲ್ಲ ಜಿಲ್ಲೆಗಳಲ್ಲಿ ಮಾನಸಿಕ ಆರೋಗ್ಯ ಕಾಳಜಿ ಎಲ್ಲರ ದೇಹವಾಗಬೇಕೆನ್ನುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಿ 8 ರಿಂದ 10 ಲಕ್ಷ ಜನರಿಗೆ ಮಾನಸೀಕ ಚಿಕಿತ್ಸೆ ನೀಡಲಾಗುತ್ತಿದೆ ಅದಕ್ಕೆ ನೆರೆಹೊರೆಯವರಲ್ಲಿ ಮಾನಸಿಕ ಆರೋಗ್ಯ ಕಾಪಾಡಲು ಎಲ್ಲ ಆರೋಗ್ಯ ಪ್ರಾಥಮಿಕ ಕೇಂದ್ರಗಳಲ್ಲಿ ಚಿಕಿತ್ಸೆ ಸಿಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕಲ್ಲದೆ 14416 ಟೇಲಿಮನಸ್ಸು ಸಹಾಯವಾಣಿಗೆ ಕರೆ ಮಾಡಿ  ಸಲಹೆ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. 

ಕಾರ್ಯಕ್ರಮವನ್ನು ಉದ್ಘಾಟಿಸಿದ ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ಶ್ರೇಣಿ ಹೆಚ್ಚುವರಿ ನ್ಯಾಯಾದೀಶ ನಾಗೇಶ ಮೋಗೇರ ಮಾತನಾಡಿ,  ಬೇಗ ಗೋತ್ತಾಗದ ಮಾನಸೀಕ ಆರೋಗ್ಯ ಅನೇಕ ತೊಂದರೆಗಳು ಒಂದಲ್ಲ ರೀತಿಯಲ್ಲಿ ಬಂದೋಗುತ್ತದೆ ಇದನ್ನು ಸರಿಯಾದ ಚಿಕಿತ್ಸೆ ಪಡೆದುಕೊಳ್ಳಬೇಕು. ನೆರೆ ಹೊರೆಯವರಲ್ಲಿ ಕಾಣಿಸಿಕೊಂಡರೆ ಸೂಕ್ತವಾದ ಚಿಕಿತ್ಸೆ ನೀಡಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕು. ಮತ್ತು ಹಿರಿಯ ನಾಗರಿಕರನ್ನು ಗೌರವದಿಂದ ಕಾಣಬೇಕು, ಅತೀಯಾದ ಕಾಳಜಿ ಹೊಂದುವದಲ್ಲದೆ ಆರೋಗ್ಯಕ್ಕೆ ಸರಿಯಾದ ಉಪಚಾರಕೊಡಿಸಬೇಕು ಎಂದು ಸಲಹೆ ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಕೀಲರ ಸಂಘದ ಅಧ್ಯಕ್ಷ ಎಸ್‌.ಬಿ.ದೊಡಮನಿ, ಸರಕಾರಿ ಅಭಿಯೋಜಕರಾದ ಆನಂದ ರಾಠೋಡ, ಆನಂದ ದೇಸಾಯಿ ಮಾತನಾಡಿದರು. 

ಅಪರ ಸರಕಾರಿ ವಕೀಲ ಎಂ.ಎಸ್‌.ಪಾಟೀಲ, ಡಾ. ವಿಜಯ ಮಹಾಂತೇಶ, ಡಾ. ಪೂಜಾ, ಡಾ. ಎಂ.ಆರ್‌.ಬಡಿಗೇರ ವೇದಿಕೆ ಮೇಲಿದ್ದರು. 

ಈ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು, ಮಾನಸೀಕ ರೋಗಿಗಳು ಹಾಗೂ ಯುವಕರು, ಮಹಿಳೆಯರು ಉಪಸ್ಥಿತರಿದ್ದರು.  

ಆರೋಗ್ಯ ಶಿಕ್ಷಣಾಧಿಕಾರಿ ಎಸ್‌.ಡಿ.ಕುಲಕರ್ಣಿ ಸ್ವಾಗತಿಸಿದರು. ರಕ್ತ ಪರೀ​‍್ವಕ್ಷಕ ರಾಜಶೇಖರ ನರಗೋದಿ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ