ಗೊಬ್ಬರ ಹೆಚ್ಚಿನ ದರಕ್ಕೆ ಮಾರಾಟ: ಕ್ರಮಕ್ಕೆ ಮನವಿ
ರಾಣೇಬೆನ್ನೂರು 19: ತಾ:ನಲ್ಲಿ ಮುಂಗಾ ರು ಮಳೆ ಆರಂಭವಾಗಿದ್ದು ರೈತಾಪಿ ವರ್ಗವು ಬಿತ್ತನೆ ಕಾರ್ಯಗಳಿಗಾಗಿ ಬೀಜಗೊಬ್ಬರ ಖರೀ ದಿಯಲ್ಲಿ ತೊಡಗಿರುವುದು ನಿತ್ಯದ ಸಂಗತಿ ಯಾಗಿದೆ.ಕೋವಿಡ್ನಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ರೈತ ಸಮುದಾ ಯಕ್ಕೆ ಬೀಜ ಗೊಬ್ಬರ ವ್ಯಾಪಾರಸ್ಥರು ಸರ್ಕಾರದ ನಿಯಮಾ ವಳಿ ಗಾಳಿಗೆ ತೂರಿ ಉದ್ದೇಶ ಪೂರ್ವ ಕವಾಗಿ ಅಭಾವ ಸೃಷ್ಟಿಸಿ ಬೆಲೆ ಏರಿಕೆ ಮಾಡುತ್ತಾ ಗಾಯದ ಮೇಲೆ ಬರೆ ಎಳೆದಿದ್ದಾರೆ. ಅಧಿಕಾರಿಗಳು ಕೂಡ ಲೇ ಮುಂದಾಗಿ ಹೆಚ್ಚಿನ ದರಕ್ಕೆ ಮಾರಾಟ ಮಾಡು ವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗುರುವಾರ ರಾಜ್ಯ ರೈತ ಸಂಘದ ತಾಲೂಕ ಘಟಕದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ನೇತೃತ್ವದಲ್ಲಿ ಕೃಷಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತಾ:ನಲ್ಲಿ ಕಳೆದೊಂದು ವಾರದಿಂದ ರೈತರು ಬೀಜ-ಗೊಬ್ಬರ ಖರೀದಿ ಯಲ್ಲಿ ಮುಗಿಬಿದ್ದಿದ್ದಾರೆ. ಇದನ್ನೇ ಬಂಡವಾಳವಾಗಿ ಇಟ್ಟುಕೊ ಂಡು ಅಂಗಡಿ ಮಾಲೀಕರು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಸರ್ಕಾರದ ನಿಯಮದಂತೆ ಅಂಗಡಿ ಮುಂಭಾಗ ದಲ್ಲಿ ಯಾವುದೇ ದರ ಪಟ್ಟಿ ಅಳವಡಿಸದೇ ರೈತರಿಗೆ ಮೋಸ ಮಾಡುವಲ್ಲಿ ಮುಂದಾಗಿದ್ದಾ ರೆಂದು ಅಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಹನುಮಂತಪ್ಪ ಕಬ್ಬಾರ ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಮನವಿ ಸಲ್ಲಿಸುವ ಮುಂಚೂಣಿ ಯಲ್ಲಿ ಸಂಘಟನೆಯ ಅನೇಕ ಪದಾಧಿಕರಿಗಳು ವಿವಿಧ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.