ಶಿಗ್ಗಾವ್

ಸ್ವಾವಲಂಬಿ ಬದುಕಿಗೆ ಮುನ್ನುಡಿಯಾಗಿದೆ: ಶಿವಲಿಂಗೇಶ್ವರ ಶಿವಾಚಾರ್ಯ ಶ್ರೀ

ಸ್ವಾವಲಂಬಿ ಬದುಕಿಗೆ ಮುನ್ನುಡಿಯಾಗಿದೆ: ಶಿವಲಿಂಗೇಶ್ವರ ಶಿವಾಚಾರ್ಯ ಶ್ರೀ

ಲೋಕದರ್ಶನ ವರದಿ

ಶಿಗ್ಗಾವಿ 21: ಧಾರ್ಮಿಕ ಕ್ಷೇತ್ರ ಧರ್ಮಸ್ಥಳವು ಇಂದು ನಾಡಿನ ಜನತೆಯ ಸಾಮಾಜಿಕ ಆರ್ಥಿಕ ಬದಲಾವಣೆಗೆ ನೀಡಿರುವ ಕೊಡುಗೆ ಅಪಾರ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಲ್ಲಿ ಉಳಿತಾಯ ಮನೋಭಾವನೆ ಆಥರ್ಿಕ ಸಹಕಾರ ಪಡೆದು ಸ್ವಾವಲಂಬಿ ಬದುಕಿಗೆ ಮುನ್ನುಡಿಯಾಗಿರುವುದು ಅತ್ಯಂತ ಸಂತೋಷ ಎಂದು ಗಂಜಿಗಟ್ಟಿ  ಶಿವಲಿಂಗೇಶ್ವರ ಶಿವಾಚಾರ್ಯ ಶ್ರೀ ಹೇಳಿದರು.

 ತಾಲೂಕಿನ ಗಂಜಿಗಟ್ಟಿ ಮಠದ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬನ್ನೂರು ವಲಯದ ಸ್ವಸಹಾಯ ಸಂಘಗಳ ಸಮಾವೇಶ ಮತ್ತು ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಆಶೀರ್ವದಿಸಿ ಮಾತನಾಡಿದ ಅವರು ಮಹಿಳೆಯರಿಗೆ ಶಿಕ್ಷಣ ಮತ್ತು ಆರ್ಥಿಕ ಸಹಕಾರ ನೀಡಿದಲ್ಲಿ ಸಮರ್ಪಕವಾಗಿ ಬಳಕೆ ಮಾಡುವುದಲ್ಲದೆ ದುಂದುವೆಚ್ಚವಿಲ್ಲದೆ ಮನೆ ನಡೆಸುವ ಶಕ್ತಿಯೂ ಇದೆ ಹಾಗಾಗಿ ಮಹಿಳಾ ಸಂಘಗಳು ಯಶಸ್ವಿಯಾಗಿ ನಡೆದಿದ್ದು ಅಭಿವೃದ್ಧಿ ಕಾರ್ಯಕ್ರಮಗಳು ಇದೇ ರೀತಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.

ಸಾಹಿತಿ ಶಿವಾನಂದ ಮ್ಯಾಗೇರಿ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ  ತಾಯಂದಿರು ಜಾತಿ ಮತ ಬೇದವಿಲ್ಲದೆ ಸಂಘಗಳ ಮೂಲಕ ಸಂಘಟಿತರಾಗಿರುವುದು ಅಭಿವೃದ್ಧಿಗೆ ಕಾರಣವಾಗಿದೆ ವಿವಿಧ ಕಾರ್ಯಕ್ರಮಗಳ ಮೂಲಕ ಹೆಣ್ಣುಮಕ್ಕಳಿಗೆ ಸ್ವಾವಲಂಬಿಯಗಲು ಶಕ್ತಿ ನೀಡಿದ ವೀರೇಂದ್ರ ಹೆಗ್ಗಡೆಯವರಿಗೆ ಕೃತಜ್ಞತೆಗಳನ್ನು ಅಪರ್ಿಸಿದರು. 

ವಿರೂಪಾಕ್ಷ ಬೆನಕನಕೊಂಡ ಗಾಯನಸುಧೆ ಮತ್ತು ಸ್ಥಳೀಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಹಿರೇಮಲ್ಲೂರ ಗ್ರಾ.ಪಂ. ಅಧ್ಯಕ್ಷೆ ಜಯವ್ವ ಸಾವಕ್ಕನವರ ಅಧ್ಯಕ್ಷತೆವಹಿಸಿದ್ದರು ಹಾವೇರಿ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ, ಮಾಜಿ ಜಿ.ಪಂ. ಅಧ್ಯಕ್ಷೆ ಪ್ರೇಮಾ ಪಾಟೀಲ್, ಭಾರತ ಸೇವಾಸಂಸ್ಥೆ ಅಧ್ಯಕ್ಷ ಶ್ರೀಕಾಂತ್ ದುಂಡಿಗೌಡ್ರ, ಗ್ರಾಮ ಪಂಚಾಯತ್ ಒಕ್ಕೂಟಗಳ ಅಧ್ಯಕ್ಷ ಸಂತೋಷ ದೊಡ್ಡಮನಿ, ತಾಲೂಕ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಂತೋಷ ಪಾಟೀಲ್ ಉಪಸ್ಥಿತರಿದ್ದರು.

 ಯೋಜನಾಧಿಕಾರಿ ಉಮಾ ಎನ್. ಜಿ. ಪ್ರಸ್ತಾವನೆಗೈದು ಸ್ವಾಗತಿಸಿದರು, ಬನ್ನೂರು ವಲಯ ಮೇಲ್ವಿಚಾರಕ ಕೃಷ್ಣಮೂರ್ತಿ ಪ್ರಗತಿ ವರದಿ ವಾಚಿಸಿದರು, ಮೈಲಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು 

ಸುದ್ದಿ ಓದಿ