ರಾಣೆಬೆನ್ನೂರ

ಅಪಘಾತಗಳು ಸಂಭವಿಸಿದಾಗ ಪ್ರಾಣ ಉಳಿಸಲು ರಕ್ತ ಅವಶ್ಯ: ಸಾಹುಕಾರ

ಅಪಘಾತಗಳು ಸಂಭವಿಸಿದಾಗ ಪ್ರಾಣ ಉಳಿಸಲು ರಕ್ತ ಅವಶ್ಯ: ಸಾಹುಕಾರ

ರಾಣೇಬೆನ್ನೂರು 17:  ಇಲ್ಲಿನ ಪಿ.ಬಿ. ರಸ್ತೆಯ ವೇಮನ ವಿಧ್ಯಾವರ್ಧಕ ಸಂಘದ ಆವರಣದಲ್ಲಿ ರವಿವಾರ ಮುಂಜಾನೆ ಮಹಾಯೋಗಿ ವೇಮನ ಜಯಂತೋತ್ಸವದ ನಿಮಿತ್ತ. ಸ್ಥಳೀಯ ವೇಮನ ವಿಧ್ಯಾವರ್ಧಕ ಸಂಘವು ರಾಣೇಬೆನ್ನೂರು, ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತಧಾನ ಶಿಬಿರವು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಮುಖಂಡ ಸುಭಾಷ್, ಸಾಹುಕಾರ ಅವರು ವೇಮನ ವಿಧ್ಯಾವರ್ಧಕ ಸಂಘವು ಈ ಭಾರಿ ವಿನೂತನವಾದ ಮತ್ತು ಸಮಾಜಮುಖಿಯಾದ ರಕ್ತಧಾನ ಶಿಬಿರವು ಹಾಕಿಕೊಂಡಿದ್ದು ಇದರಿಂದ ಸಾರ್ವಜನಿಕರಿಗೆ ಅತ್ಯಂತ ಸಹಕಾರಿಯಾಗಲಿದೆ ಎಂದರು.  

ಬಹುಮುಖಿ ಸೇವೆ ನಮ್ಮೆಲ್ಲರ ಗುರಿಯಾಗಬೇಕು. ಇದರಿಂದ ಸಮಾಜದ ಯುವಜನತೆ ಸ್ಪೂರ್ತಿದಾಯಾಕವಾಗಿ ಭಾಗವಹಿಸುವುದರ ಮೂಲಕ ಸಾಮಾಜಿಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಹಾಗೂ ಧಾರ್ಮಿಕವಾಗಿ ಸೇವೆಸಲ್ಲಿಸಲು ಮುಂದಾಗಲು ಇಂತಹ ಕಾರ್ಯಕ್ರಮಗಳು ಸಮುದಾಯಕ್ಕೆ ಪ್ರೇರಣೆ ನೀಡಲಿವೆ ಎಂದ ಅವರು ಸಂಘವು ಅತ್ಯಂತ ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸಿದ್ದು ತಮಗೆ ಸಂತೋಷ ತಂದಿದೆ. ಎಂದು ಅಭಿನಂದಿಸಿದರು.  

ಹಾವೇರಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ ಗಿರೆಡ್ಡಿ,ಅವರು ಮಾತನಾಡಿ ಅಪಘಾತಗಳು ಸಂಭವಿಸಿದಾಗ ಅಮೂಲ್ಯವಾದ ಪ್ರಾಣ ಉಳಿಸಲು ರಕ್ತದ ಅವಶ್ಯಕತೆ ತುಂಬಾ ಇರುತ್ತದೆ. ರಕ್ತನಿಧಿಕೇಂದ್ರವು ನಗರದಲ್ಲಿ ಇರುವುದರಿಂದ ಅಗತ್ಯವಿರುವವರೆಗೆ  ರಕ್ತ ದೊರುಕುತ್ತಿರುವುದು ಸಂತೋಷದ ಸಂಗತಿ. ಸಂಘವು ವಿಶೇಷವಾಗಿ ಈ ಕಾರ್ಯಕ್ರಮ ಆಯೋಜಿಸಿದ್ದು ಮುಂದಿನ ದಿನಮಾನಗಳಲ್ಲಿ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಶಿಬಿರ ಮಾಡಲು ಮುಂದಾಗಬೇಕು ಎಂದು ಅವರು ಕರೆ ನೀಡಿದರು.  

ಸಂಘದ ಅಧ್ಯಕ್ಷ ರಾಮಚಂದ್ರ​‍್ಪ ರಾಯರೆಡ್ಡಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಆರ್ ಹೆಚ್‌. ಬಾನುವಳ್ಳಿ, ವರ್ತಕ ಎಸ್‌.ಕೆ. ಗಿರೆಡ್ಡಿ , ಕೆ.ಡಿ. ಸಾಹುಕಾರ ಡಾ. ಎಂ. ಎಂ. ಅನಂತರೆಡ್ಡಿ , ಆರ್‌.ಎಂ.ಭೋಗೇಶರೆಡ್ಡಿ , ಯಲ್ಲಪ್ಪರೆಡ್ಡಿ ರೆಡ್ಡೇರ್ , ಸಿ.ವಿ.ಹಾದಿಮನಿ ಮೊದಲಾದವರು ಮಹಾಯೋಗಿ ವೇಮನರ ಜಯಂತೋತ್ಸವದ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಆರ್‌.ಎನ್‌. ಹೊಂಬರಡಿ, ಶಿವಾನಂದ ಮೇಟಿ,  ಜಿ.ಎಲ್‌. ಬಲ್ಲೂರ್, ಲಕ್ಷ್ಮಣ ಸಾಹುಕಾರ , ರಘು ಜೀವನಗೌಡ್ರ, ಮಧು ಕೋಳಿವಾಡ, ಎ.ಎಸ್‌. ರಾಕೇಶ್, ಎಂ.ಎನ್‌. ಕೋಳಿವಾಡ, ಚೆನ್ನಪ್ಪ ಶಿಡಗನಾಳ, ಸೇರಿದಂತೆ ಮತ್ತಿತರ ಗಣ್ಯರು ಸಮಾಜದ ಮುಖಂಡರು ಉಪಸ್ಥಿತರಿದ್ದರು. ರಕ್ತನಿಧಿಕೇಂದ್ರದ ವ್ಯವಸ್ಥಾಪಕ ಶ್ರೀಧರ್ ಅವರು ಸ್ವಾಗತಿಸಿ ನಿರೂಪಿಸಿದರು. ಶಿಬಿರದಲ್ಲಿ 150 ಕ್ಕೂ ಹೆಚ್ಚು ಫಲಾನುಭವಿಗಳು ಭಾಗವಹಿಸಿ ಆರೋಗ್ಯದ ತಪಾಸಣೆಗೊಳಪಟ್ಟರು. 50ಕ್ಕೂ ಹೆಚ್ಚು ಯುವ ಸಮುದಾಯವು ಸ್ವಯಂ ಪ್ರೇರಿತ ರಕ್ತಧಾನ ಮಾಡಿ ತಮ್ಮ ಮಾನವೀಯ ಸೇವಾ ಕಾರ್ಯ ಮೆರೆದರು. 


ಸುದ್ದಿ ಓದಿ