ಶಿಗ್ಗಾವ್

ಸ್ವಸಹಾಯ ಸಂಘಗಳ ಸಾಲ ಮೇಳ- ಜಾಗೃತಿ ಶಿಬಿರ

ಸ್ವಸಹಾಯ ಸಂಘಗಳ ಸಾಲ ಮೇಳ- ಜಾಗೃತಿ ಶಿಬಿರ

ಶಿಗ್ಗಾವಿ 12: ಸ್ವಸಹಾಯ ಸಂಘಗಳ ಸಾಲ ಮೇಳ ಮತ್ತುಜಾಗೃತಿ ಶಿಬಿರವನ್ನು ಕೆನರಾ ಬ್ಯಾಂಕ್ ಮತ್ತು ಪುರಸಭೆ ಶಿಗ್ಗಾವ್ ಸಹಯೋಗದಲ್ಲಿ ಸ್ವ ಸಹಾಯ ಸಂಘಗಳಿಗೆ ಸಾಲ ನೀಡುವ ಕಾರ್ಯಕ್ರಮವನ್ನು ಪುರಸಭೆ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಯಿತು. 

ಪಂಚಾಯತ್‌ರಾಜ್ ಸಹಾಯಕ ನಿರ್ದೇಶಕ ಪ್ರಕಾಶ್ ಓಂಧಕರ ಮಾತನಾಡಿದ ಅವರು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮತ್ತು ಪಂಚಾಯತ್‌ಗಳ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. 

ಕೆನರಾ ಬ್ಯಾಂಕ್ ಪ್ರಾದೇಶಿಕ ಅಧಿಕಾರಿ ಪ್ರಶಾಂತ್‌ಮಾತನಾಡಿ ಬ್ಯಾಂಕ್ ಸಾಲಗಳ ಬಗ್ಗೆ ಮತ್ತು ಸಾಮಾಜಿಕ ಭದ್ರತೆಗಳ ಬಗ್ಗೆ ಮಾಹಿತಿಯನ್ನು ತಿಳಿಸಿದರು. 

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಡಿವಿಜನಲ್ ಮ್ಯಾನೇಜರ್ ಹರಿ ಓಂ ಸೋನು ಮತ್ತು ಅನುಪ್ ಕುಮಾರ್ ರೀಜನಲ್ ಆಫೀಸ್ ಹುಬ್ಬಳ್ಳಿ ಇವರು ಸ್ವಸಹಾಯ ಗುಂಪುಗಳಿಗೆ ಸಾಲ ಮಂಜೂರಾತಿ ಪ್ರಮಾಣ ಪತ್ರಗಳನ್ನು ವಿತರಿಸಿದರು 

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕೃಷಿ ಇಲಾಖೆಯ ಶಿವನಗೌಡ ಪಾಟೀಲ್ ಪುರಸಭೆಯ ಸಮುದಾಯ ಸಂಘಟನಾ ಅಧಿಕಾರಿ ಶೈಲಜಾ ಪಾಟೀಲ್ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಸಂಯೋಜಕ ರಾಜೇಶ್ವರಿ ಶಿಬಿರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. 

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ರಾಜು ಕೆಂಭಾವಿ ಮಾತನಾಡಿದರು, ಕಾರ್ಯಕ್ರಮದ ಅಧ್ಯಕ್ಷತೆ ಕೆನರಾ ಬ್ಯಾಂಕ್ ಮ್ಯಾನೇಜರ್ ತ್ರಿಪಾಠಿ, ಪುರಸಭೆ ಸದಸ್ಯರಾದ ಗೌಸ್ಕಾನ್ ಮುನಶಿ,  ಜಾಫರಖಾನ್ ಪಠಾಣ್,  ಮುಸ್ತಾಕ್‌ಅಹಮದ್ ತಹಶೀಲ್ದಾರ್ ಮತ್ತು ಪುರಸಭೆಯ ಅಧಿಕಾರಿ ವಿ ಎಸ್ ಪಾಟೀಲ್, ಕೆನರಾ ಬ್ಯಾಂಕಿನ ಅಧಿಕಾರಿ ಜೋತ್ನಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಗಹೇಮಾ ಕಲಿವಾಲ್, ಶಿಲ್ಪ ಮಂಡಗನಳ್ಳಿ, ದ್ರಾಕ್ಷಾಯಿಣಿ ಅಜ್ಜಂಪುರ್ ಮುಂತಾದವರು ಪಾಲ್ಗೊಂಡಿದ್ದರು. 

ಕಾರ್ಯಕ್ರಮದ ಬಸವರಾಜ್ ಸ್ವಾಹಗತಿಸಿದರು. ಕಾರ್ಯಕ್ರಮವನ್ನು ಪುರಸಭೆ ಅಧಿಕಾರಿ ಶೈಲಜಾ ಪಾಟೀಲ್ ನಿರ್ವಹಿಸಿದರು. 


ಸುದ್ದಿ ಓದಿ