ಗದಗ

ರಾಜ್ಯಮಟ್ಟಕ್ಕೆ ವಿದ್ಯಾರ್ಥಿಗಳ ಆಯ್ಕೆ

ರಾಜ್ಯಮಟ್ಟಕ್ಕೆ ವಿದ್ಯಾರ್ಥಿಗಳ ಆಯ್ಕೆ

ಗದಗ 24: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಗದಗನಲ್ಲಿ  ಜರುಗಿದ ಜಿಲ್ಲಾಮಟ್ಟದ ವಿಜ್ಞಾನ ಮೇಳದಲ್ಲಿ ಗದಗ ಅಲ್ಪಸಂಖ್ಯಾತರ  ಕಲ್ಯಾಣ ಇಲಾಖೆಯ ಮೌಲಾನಾ ಆಜಾದ್ ಆಂಗ್ಲ್‌ ಮಾಧ್ಯಮ  ಶಾಲೆಯ ವಿದ್ಯಾರ್ಥಿಗಳು ಸಿದ್ಧಪಡಿಸಿದ ಆಬ್ಸಟಿಕಲ್ ಅವೈಡಿಂಗ್ ರೋಬೋಟ್ ಮಾದರಿ ವಿಜ್ಞಾನ ಮೇಳದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಾಗೂ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪ್ರಶಾಂತ ವರ್ಗಪ್ಪನವರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಎಂ ಎಂ ತಂಬರಮಟ್ಟಿ ಪ್ರಶಸ್ತಿ ವಿತರಿಸಿದರು.  

ಈ ಸಂದರ್ಭದಲ್ಲಿ  ವಸತಿ ಶಿಕ್ಷಣ ಸಂಸ್ಥೆ ಜಿಲ್ಲಾ ಸಮನ್ವಯ ಅಧಿಕಾರಿ ಅಶೋಕ ಕರ್ಣಿ ಮುಖ್ಯೋಪಾಧ್ಯಾಯರು ದೊಡ್ಡಪ್ಪ ವಾಲ್ಮೀಕಿ, ಶಿಕ್ಷಕರಾದ ಅಶೋಕ ಲಮಾಣಿ, ಯಶವಂತ ಬೇವಿನಕಟ್ಟಿ, ತರಬೇತುದಾರ ಶಿಕ್ಷಕಿ ಜ್ಯೋತಿ ಕಮದೋಡ ಹಾಗೂ ವಿದ್ಯಾರ್ಥಿಗಳಾದ ಮುಜೀಬ ಸಯ್ಯದ, ಸಮರ್ಥ ಜಂಗಮನೆ, ಶೀರಿನ ಕಾಲವಾಡ, ತನವೀರ ನೀರಲಗಿ, ನೀಲುಫರ್ ನವಲಗುಂದ ಉಪಸ್ಥಿತರಿದ್ದರು. 


ಸುದ್ದಿ ಓದಿ