ಸ್ತ್ರೀ ರೋಗ ತಜ್ಞರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ರಾಣಿಬೆನ್ನೂರ:15 ನಗರದ ಐಎಂಎ ಸಭಾಂಗಣದಲ್ಲಿ ಹಾವೇರಿ ಜಿಲ್ಲೆ ಸ್ತ್ರೀ ರೋಗ ತಜ್ಞರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಪ್ರಮಾಣ ವಚನ ಸಮಾರಂಭ ನಡೆಯಿತು.
ಹಾವೇರಿ ಜಿಲ್ಲೆ ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷೆಯಾಗಿ ಡಾ.ವಿದ್ಯಾ ವಾಸುದೇವಮೂರ್ತಿ, ಕಾರ್ಯದರ್ಶಿಯಾಗಿ ಡಾ.ಬಿ.ಕೆ. ನೆಗಳೂರ ಹಾಗೂ ಖಜಾಂಚಿಯಾಗಿ ಡಾ.ಸಂತೋಷಕುಮಾರ ಜಿ ಅವರು ಅಧಿಕಾರ ವಹಿಸಿಕೊಂಡರು.
ಜಿಲ್ಲೆ ಸ್ತ್ರೀರೋಗ ತಜ್ಞರ ಸಂಘದ ಮಾಜಿ ಪದಾಧಿಕಾರಿಗಳಾದ ಡಾ.ಸುರೇಖಾ ಹಂದ್ರಾಳ, ಡಾ.ಬಸವರಾಜ ಕೊಳ್ಳಿ ಮತ್ತು ಡಾ.ತ್ರಿವೇಣಿ ಹೆಗ್ಗೇರಿ ಅವರು ಅಧಿಕಾರ ಹಸ್ತಾಂತರಿಸಿದರು. ದಾವಣಗೆರೆಯ ಡಾ. ಕಿಶನ್ ಭಾಗವತ್ ಅವರು ಫೀಟಲ್ ಅನಾಮಲಿ ವಿಷಯವಾಗಿ ಉಪನ್ಯಾಸ ನೀಡಿದರು.
ನಂತರ ಮಾತನಾಡಿದ ಜಿಲ್ಲೆ ಸ್ತ್ರೀರೋಗ ತಜ್ಞರ ಸಂಘದ ನೂತನ ಅಧ್ಯಕ್ಷೆ ಡಾ.ವಿದ್ಯಾ ವಾಸುದೇವಮೂರ್ತಿ ಮಾತನಾಡಿ, ಹಾವೇರಿ ಆಬ್ಸ್ಟೆಟ್ರಿಕ್ಸ್ ಮತ್ತು ಗೈನಕಲಜಿಸ್ಟ್ ಸೊಸೈಟಿ(ಪಾಕ್ಸಿ) ಸ್ತ್ರೀರೋಗ ತಜ್ಞರ ಸಂಘವು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಅಸ್ತಿತ್ವದಲ್ಲಿದೆ. ಹಾಗೇಯೇ ಹಾವೇರಿ ಜಿಲ್ಲಾ ಸಂಘವು ಒಂದು ಎಂದರು.
ಮಹಿಳೆಯರ ಪ್ರಸೂತಿ ಮತ್ತು ಸ್ತ್ರೀರೋಗ ಆರೋಗ್ಯದಲ್ಲಿ ಶ್ರೇಷ್ಠತೆ ಮತ್ತು ಪ್ರಗತಿ. ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯರಿಗೆ ಇತ್ತೀಚಿನ ಸಂಶೋಧನೆಗಳ ಕುರಿತು ಕಾರ್ಯಾಗಾರ, ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುವುದು. ಮಕ್ಕಳ ಲೈಂಗಿಕ ಕಿರುಕುಳ ವಾಸ್ತವಿಕತೆ-ವಿಚಾರ ಗೋಷ್ಠಿ ನಡೆಸಲಾಗುವುದು. ಜೊತೆಗೆ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದರು.
ಮಹಿಳೆಯರಿಗೆ ಮತ್ತು ಮಕ್ಕಳಿಗೆ ಆರೋಗ್ಯ ಶಿಕ್ಷಣ ನೀಡಲಾಗುವುದು. ಮಹಿಳೆಯರಿಗೆ ಕಾಡುವ ಕ್ಯಾನ್ಸರ್ ಪೈಕಿ ಸ್ತನ ಕ್ಯಾನ್ಸರ್, ಗರ್ಭಕೊರಳಿನ ಕ್ಯಾನ್ಸರ್ ಪತ್ತೆ ಶಿಬಿರ, ಶಾಲಾ ಮಕ್ಕಳ ಆರೋಗ್ಯ ತಪಾಸಣೆ, ವಿವಿಧ ವ್ಯಾಕ್ಸಿನ್ಗಳ ಬಗ್ಗೆ, ಸಾಂಕ್ರಾಮಿಕ ರೋಗಗಳ ಹರಡಂತೆ ಎಚ್ಚರಿಕೆ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.
ಡಾ.ಹೇಮಾ ಪಾಟೀಲ, ಡಾ.ಜ್ಯೋತಿ ಥಂಡಿ, ಹಿರಿಯ ತಜ್ಞ ವೈದ್ಯರಾದ ಡಾ.ಬಸವರಾಜ ಎಸ್. ಕೇಲಗಾರ, ಡಾ.ಮೋಹನ ಹಂಡೆ, ಐಎಂಎ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಅಭಿನಂದನ ಸಾವಕಾರ ಹಾಗೂ ಕಾರ್ಯದರ್ಶಿ ಡಾ.ಪುಟ್ಟರಾಜು ಉಪಸ್ಥಿತರಿದ್ದರು.