ರಾಣೆಬೆನ್ನೂರ

ದೇವಾಂಗ ಸಂಘಕ್ಕೆ ನೂತನ ಕಾರ್ಯಕಾರಣಿ ಸದಸ್ಯರ ಆಯ್ಕೆ

ದೇವಾಂಗ ಸಂಘಕ್ಕೆ ನೂತನ ಕಾರ್ಯಕಾರಣಿ ಸದಸ್ಯರ ಆಯ್ಕೆ
ಇತ್ತಿಚಿಗೆ ನಡೆದ ದೇವಾಂಗ ಸಮಾಜದಿಂದ ಆಯ್ಕೆಯಾದ ರಾಜ್ಯ ಪದಾಧಿಕಾರಿಗಳು ಸ್ವಾಮೀಜಿಗಳಿಗೆ ಸನ್ಮಾನಿಸಿದರು.

ರಾಣೇಬೆನ್ನೂರು 19: ದೇವಾಂಗ ಸಮಾಜವು ಅತ್ಯಂತ ಹಿಂದುಳಿದ ಸಮಾಜವಾಗಿದ್ದು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರಬೇಕಾದರೆ ಅದು ಯುವ ಉತ್ಸಾಹಿ ಯುವಕರ ಸಂಘಟನಾತ್ಮಕ ಶಕ್ತಿಯಿಂದ ಮಾತ್ರ ಸಾಧ್ಯ ಎಂದು ಗಾಯಿತ್ರಿಪೀಠ ಸಂಸ್ಥಾನ ಮಠದ ಪೀಠಾಧಿಪತಿಗಳಾದ ದಯಾನಂದಪುರಿ ಸ್ವಾಮೀಜಿಗಳು ಹೇಳಿದರು. 

ಇತ್ತೀಚಿಗೆ ದೇವಾಂಗ ಸಂಘದ ನೂತನ ಕಾರ್ಯಕಾರಿಣಿ ಸದಸ್ಯರನ್ನು ಆಯ್ಕೆ ಮಾಡಿ ಮಾತನಾಡಿದ ಅವರು, ಹಾವೇರಿ ಜಿಲ್ಲೆಯಿಂದ ರಾಣೇಬೆನ್ನೂರಿನ ಸಮಾಜ ಸೇವಕ ಲಕ್ಷ್ಮಿಕಾಂತ ಹುಲಗೂರ ರಾಜ್ಯ ಸಹ ಕಾರ್ಯದರ್ಶಿ, ಬಸವರಾಜ ಮೈಲಾರ ಸಂಘಟನಾ ಕಾರ್ಯದರ್ಶಿ, ಗಣೇಶ ಹಾವನೂರ ಹಾಗೂ ಬ್ಯಾಡಗಿಯ ವಸಂತ ಕುಂಚೂರ ರಾಜ್ಯ ಸಂಘಕ್ಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು. 

ರಾಜ್ಯದಲ್ಲಿ 60 ಲಕ್ಷ ಜನಸಂಖ್ಯೆ ಹೊಂದಿರುವ ದೇವಾಂಗ ಸಮುದಾಯದವರಿಗೆ ಎಲ್ಲ ರೀತಿಯಿಂದಲೂ ಅನ್ಯಾಯವಾಗುತ್ತಿರುವುದು ದುರದೃಷ್ಠಕರ ಸಂಗತಿ. ರಾಜ್ಯದ ವಿಧಾನಸಭಾ ಕ್ಷೇತ್ರಗಳಲ್ಲಿ ದೇವಾಂಗ ಸಮಾಜದವರದು ನಿರ್ಣಾಯಕ ಪಾತ್ರವಿದೆ. ಇಂತಹ ಸಮಾಜಕ್ಕೆ ಸಾಮಾಜಿಕ ನ್ಯಾಯ ದೊರೆಯದಿರುವುದು ವಿಪರ್ಯಾಸ. ದೇವಾಂಗ ಸಮಾಜದ ಅಭಿವೃದ್ದಿ ನಿಗಮ ಸ್ಥಾಪನೆಯಾಗಬೇಕು. ಮಹಾರಾಷ್ಟ್ರ ರಾಜ್ಯದಂತೆ ನಮ್ಮ ರಾಜ್ಯದಲ್ಲಿಯೂ ಶೇ. 2 ರಷ್ಟು ಮೀಸಲಾತಿ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.  

ದೇವಾಂಗ ಸಮಾಜದಲ್ಲಿ ನೆಯ್ಗೆ, ಕೂಲಿ, ವ್ಯಾಪಾರ ಮಾಡಿಕೊಂಡು ಬದುಕುತ್ತಿರುವ ಈ ಸಮಾಜದ ಜನರ ಜೀವನ ದುಸ್ತರವಾಗಿದ್ದು ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರಲು ಹೋರಾಟ ನಿರಂತರವಾಗಿರಬೇಕೆಂದು ಸ್ವಾಮೀಜಿ ಕರೆ ನೀಡಿದರು. 


ಸುದ್ದಿ ಓದಿ