ರಾಣೆಬೆನ್ನೂರ

ಖೋ-ಖೋ ತಂಡಕ್ಕೆ ಆಯ್ಕೆ

ಖೋ-ಖೋ ತಂಡಕ್ಕೆ ಆಯ್ಕೆ

ರಾಣೀಬೆನ್ನೂರ 09: ಸ್ಥಳೀಯ ಕೆಎಲ್‌ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಾದ ಕುಮಾರಿ. ಮಮತಾ ಪಿ ಬಿ.ಎ ದ್ವಿತೀಯ, ಅಂಜಲಿ ಜೆ, ಬಿ.ಎ ದ್ವಿತೀಯ ಶೃತಿ ಎಮ್, ಬಿಕಾಂ ದ್ವಿತೀಯ  ಇವರು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರದ 2021-22 ನೇ ಸಾಲಿನ ಸೌತ್ ಝೇನ್ ಅಂತರ್ ವಿಶ್ವವಿದ್ಯಾನಿಲಯಗಳ ಖೋ-ಖೊ  ತಂಡಕ್ಕೆ ಆಯ್ಕೆಯಾಗಿದ್ದಾರೆ. ಹಾಗೂ ಇವರು  ದಿನಾಂಕ 17-03-2022 ರಿಂದ 20-03-2022 ರ ವರೆಗೆ  ಪಂದ್ಯಾವಳಿಯು ಕಾಕತೀಯ ವಿಶ್ವವಿದ್ಯಾಲಯ ವಾರಂಗಲ್ ದಲ್ಲಿ  ನಡೆಯುವದು. ಕ್ರೀಡಾಪಟುವಿನ ಸಾಧನೆಗೆ ಸ್ಥಾನಿಕ ಅಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಶ್ರೀ ವ್ಹಿ.ಪಿ. ಲಿಂಗನಗೌಡ್ರ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ