2020 ನೇ ಸಾಲಿನ ಕಾಗದ ಸಾಂಗತ್ಯ ಕಲಾ ಪುರಸ್ಕಾರಕ್ಕೆ ಆಯ್ಕೆ
ರಾಣೆಬೆನ್ನೂರ 02: ಕಲೆ,ಸಾಹಿತ್ಯ,ಸಂಸ್ಕೃತಿ ಮತ್ತು sಸಾಮಾಜಿಕ ಕಳಕಳಿಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಕಾಗದ ಸಾಂಗತ್ಯ ವೇದಿಕೆ ಸೃಜನಶೀಲ ಕಲಾವಿದರನ್ನು ಪ್ರೋತ್ಸಾಹಿಸುವ ಸಲುವಾಗಿ ಪುಸ್ತಕದ ಒಳಪುಟಗಳಿಗೆ ಉತ್ತಮ ಚಿತ್ರ / ರೇಖಾಚಿತ್ರ ರಚಿಸಿದ ರಾಜ್ಯದ ಕಲಾವಿದರಿಂದ 2020 ನೇ ಸಾಲಿನ ಪುಸ್ತಕಗಳನ್ನು ಆಹ್ವಾನಿಸಲಾಗಿತ್ತು.
ಗದಗ ಜಿಲ್ಲೆಯ ನೀರಲಗಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ, ಗದಗ ನಗರದ ಬಣ್ಣದ ಮನೆ ಆರ್ಟ ಅಡ್ಡಾದ ಕಲಾವಿದ ವಿಜಯ ಕಿರೇಸೂರ ಕಾಗದ ಸಾಂಗತ್ಯ ಕಲಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಕವಿ ಎಸ್.ಮಕಾನದಾರ ರಚಿತ ‘ಪ್ಯಾರಿ ಪದ್ಯ’ ಸಂಕಲನಕ್ಕೆ ರಚಿಸಿದ ಚಿತ್ರಗಳಿಗೆ 2020 ಸಾಲಿನÀ ಈ ಪುರಸ್ಕಾರ ಪಡೆದುಕೊಂಡಿರುತ್ತಾರೆ. ಪ್ರಶಸ್ತಿಯು 3ಸಾವಿರ ನಗದು, ಪುರಸ್ಕಾರ ಫಲಕ ಹಾಗೂ ಪುಸ್ತಕಗಳನ್ನು ಒಳಗೊಂಡಿರುತ್ತದೆ. ಇದೇ ಸಂದರ್ಭದಲ್ಲಿ ಮೊಳಕಾಲ್ಮೂರಿನ ಯುವ ಕಲಾವಿದ,ಕವಿ ಜಬೀವುಲ್ಲಾ.ಎಮ್.ಅಸದ್ ರವರಿಗೆ ಗೌರವ ಸನ್ಮಾನ ಮಾಡಲಾಗುವುದು. ಸೆಪ್ಟಂಬರ್ 26ರಂದು ರಾಣೇಬೆನ್ನೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಚಿಂತಕ, ಗುಬ್ಬಚ್ಚಿಗೂಡು ಪತ್ರಿಕೆ ಸಂಪಾದಕ ಶಂಕರ ಹಲಗತ್ತಿ, ಹಿರಿಯ ಕವಿ ಸತೀಶ ಕುಲಕರ್ಣಿ ಇವರುಗಳು ಪುರಸ್ಕಾರ ಪ್ರದಾನ ಮಾಡಲಿದ್ದಾರೆ ಎಂದು ಕಾಗದ ಸಾಂಗತ್ಯದ ಅಧ್ಯಕ್ಷರಾದ ಕಲಾವಿದ ನಾಮದೇವ ಕಾಗದಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.