ಶಟಲ್ ಬ್ಯಾಡ್ಮಿಂಟನ್: ತಾಲೂಕು ಮಟ್ಟಕ್ಕೆ ಆಯ್ಕೆ
ಶಿಗ್ಗಾವಿ 21: ಪಟ್ಟಣದ ರಂಭಾಪುರಿ ಮಹಾವಿದ್ಯಾಲಯದಲ್ಲಿ ಜರುಗಿದ ಸರ್ಕಾರದ ಪ್ರಾಥಮಿಕ ಶಾಲಾ ಮಕ್ಕಳ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ಪ್ರತಿಷ್ಠಿತ ಜೆ ಎಂ ಜೆ ಸ್ಕೂಲ್ ವಿದ್ಯಾರ್ಥಿಗಳಾದ ಏಳನೇ ತರಗತಿಯ ವೀನೀತ್ ಮಣ್ಣಣ್ಣವರ, ಪ್ರೀತಮ್ ತಗ್ಗಿನಮನಿ, ಶಟಲ್ ಬ್ಯಾಡ್ಮಿಂಟನ್ನಲ್ಲಿ ಚೆನ್ನಪ್ಪ ಕುನ್ನೂರ ವಿದ್ಯಾರ್ಥಿಗಳ ವಿರುದ್ಧ ಜಯಗಳಿಸಿ ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹೆಚ್ಚುವರಿ ಆಟಗಾರ ಭರತ್ ದುಂಡಿಗೌಡ್ರು ಹಾಗೂ ಸುಹಾಸ್ ಭಾಗವಹಿಸಿದ್ದು ವಿದ್ಯಾರ್ಥಿಗಳಿಗೆ ಜೆಎಂ ಜೆ ಸ್ಕೂಲ್, ಮುಖ್ಯೋಪಾಧ್ಯಾಯರು ಹಾಗೂ ದೈಹಿಕ ಶಿಕ್ಷಕರು ಶಿಕ್ಷಕ ವರ್ಗದವರು ಮಕ್ಕಳ ಗೆಲುವಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.