ರಾಜ್ಯ ದೇವಾಂಗ ಸಂಘಕ್ಕೆ ಆಯ್ಕೆ
ರಾಣೇಬೆನ್ನೂರು 17: ರಾಜ್ಯ ದೇವಾಂಗ ಸಂಘದ ಸಭೆಯು ಇತ್ತೀಚಗೆ ನೆಲಮಂಗಲದ ಶಾಖಾಮಠ ದಲ್ಲಿ ದಯಾನಂದಪುರಿ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ಜರುಗಿತು. ದೇವಾಂಗ ಸಮಾಜವು ಬಹಳ ಹಿಂದುಳಿ ದಿದ್ದು ಸಮಾಜದ ಸಂಘಟನೆಗೆ ತಮ್ಮೆಲ್ಲರ ಸಹಕಾರ ಬೇಕು ಶೈಕ್ಷಣಿಕವಾಗಿ, ರಾಜಕೀಯ ವಾಗಿ ಪ್ರಬಲರಾಗಬೇಕಾದ ಇಂದಿನ ಅಗತ್ಯವಿದೆ ಎಂದರು.
ಇದೇ ಸಂದರ್ಭದಲ್ಲಿ ದೇವಾಂಗ ಸಂಘದ ನೂತನ ಕಾರ್ಯ ಕಾರಿಣಿ ಸಮಿತಿ ರಚಿಸಲಾ ಯಿತು. ಹಾವೇರಿ ಜಿಲ್ಲೆ ಯಿಂದ ರಾಜ್ಯ ಸಹಕಾರ್ಯದರ್ಶಿಯಾಗಿ ಬನಶಂಕರಿ ಸೀಡ್ಸ್ ಕಂಪನಿಯ ಮಾಲೀಕರಾದ ಲಕ್ಷೀಕಾಂತ ಹುಲಗೂರ ಅವರು ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡರು.
ಬ್ಯಾಡಗಿಯ ಬಸವರಾಜ ಮೈಲಾರ, ಮತ್ತು ನಗರದ ವಸಂತ ಕುಂಚೂರ ಗಣೇಶ ಹಾವನೂರ ಅವರು ರಾಜ್ಯ ಸಂಘದ ಸದಸ್ಯರನ್ನಾಗಿ ಆಯ್ಕೆಮಾಡಲಾಯಿತು, ನೂತನ ಪದಾಧಿಕಾರಿಗಳು ಸಮಾಜದ ಸಂಘಟನೆಯಲ್ಲಿ ಸಕ್ರಿಯರಾಗಿ ತೊಡಗಿಕೊಂಡು ಕೆಲಸ ಮಾಡಲಿ ಎಂದು ಜಿಲ್ಲಾ ಹಾಗೂ ತಾಲ್ಲೂಕ ದೇವಾಂಗ ಸಂಘದ ಸರ್ವ ಪದಾಧಿಕಾರಿಗಳು ಹಾರ್ಧಿಕವಾಗಿ ಅಭಿನಂದಿಸಿದ್ದಾರೆ.