ರಾಣೆಬೆನ್ನೂರ

ರಾಷ್ಟ್ರೀಯ ಶಿಷ್ಯವೇತನಕ್ಕೆ ನೇಮಕ

ರಾಷ್ಟ್ರೀಯ ಶಿಷ್ಯವೇತನಕ್ಕೆ ನೇಮಕ
ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಏರಿ​‍್ಡಸಿದ್ದ ಈರುಳ್ಳಿ ಮತ್ತು ಬೆಳ್ಳುಳ್ಳಿ ಸಮಗ್ರ ನಿರ್ವಹಣೆ ಕುರಿತು ಅಂ

ರಾಣಿಬೆನ್ನೂರ 11:  ಪ್ರಸ್ತುತ ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಳೆಗಳ ಸರಾಸರಿ ಉತ್ಪಾದಕತೆ ಕಡಿಮೆಯಿದೆ. ಇದನ್ನು ಹೆಚ್ಚಿಸಲು ಹೊಸ ತಳಿಗಳ ಬಳಕೆ, ಹನಿ ನೀರಾವರಿ ಪದ್ಧತಿ ಅಳವಡಿಕೆ, ಏರು ಮಡಿ ಪದ್ಧತಿ, ರಸಾವರಿ ವಿಧಾನ ಅಳವಡಿಕೆ, ಕಳೆನಾಶಕಗಳ ಬಳಕೆ ಮಾಡಬೇಕು ಜೊತೆಗೆ ಪ್ರಮುಖ ರೋಗವಾದ ಮಜ್ಜಿಗೆ ರೋಗ ಮತ್ತು ಸುಳಿ ತಿರುವು ಸಮಸ್ಯೆಯನ್ನು ನಿಯಂತ್ರಣ ಮಾಡಬೇಕು ಎಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ಶ್ರೀಪಾದ ಕುಲಕರ್ಣಿ ಹೇಳಿದರು. 

ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ  ಏರಿ​‍್ಡಸಿದ್ದ ಈರುಳ್ಳಿ ಮತ್ತು ಬೆಳ್ಳುಳ್ಳಿ ಸಮಗ್ರ ನಿರ್ವಹಣೆ ಕುರಿತು ಅಂತರ್ಜಾಲ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಳೆಯುವುದರ ಜೊತೆಗೆ ಶೇಖರಣೆ ಮತ್ತು ಸಂಸ್ಕರಣೆಗೂ ಮಹತ್ವ ನೀಡಬೇಕು ಎಂದರು.  

ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಅಶೋಕ ಪಿ. ಮಾತನಾಡಿ, ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಳೆಗಳು ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಸಹಕಾರಿಯಾಗಿವೆ. ಕಡೆಮೆ ಖರ್ಚಿನ ತಾಂತ್ರಿಕತೆಗಳನ್ನು ಬಳಸಿ ಉತ್ಪಾದಕತೆ ಹೆಚ್ಚಿಸಬೇಕು ಎಂದರು.  

ಧಾರವಾಡದ ಕೃಷಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾಽ ಎಸ್‌.ಎಂ. ಹಿರೇಮಠ ಮಾತನಾಡಿ, ಸಾವಯವ ಗೊಬ್ಬರ, ಜೈವಿಕ ಗೊಬ್ಬರ ಜೊತೆಗೆ ರಸಾಯನಿಕ ಗೊಬ್ಬರ ಕಡಿಮೆ ಬಳಸಬೇಕು. ಬೆಳೆಯ ಹಂತದಲ್ಲಿ ಮಳೆಯ ಪ್ರಮಾಣ ಹೆಚ್ಚಾದಲ್ಲಿ ಪೋಟ್ಯಾಷ್ ಕೊರತೆ ಕಂಡು ಬರುತ್ತದೆ. ಇದನ್ನು ನಿಯಂತ್ರಿಸಲು ಒಂದು ಗ್ರಾಂ ಬೊರಾ​‍್ಯಕ್ಸ್‌ ಮತ್ತು ಒಂದು ಗ್ರಾಂ ಪೋಟ್ಯಾಷಿಯಂ ಸಲ್ಫೇಟ್‌ನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎಂದರು. 

ಬೊರ್ಯಾ ಕ್ಸ್‌ನ್ನು (2.5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ) 30 ಮತ್ತು 45 ದಿನಗಳ ನಂತರ ಸಿಂಪರಣೆ ಮಾಡುವುದರಿಂದ ಉತ್ತಮ ಬೆಳೆಯನ್ನು ಕಾಣಬಹುದು. ಕಳೆ ನಿರ್ವಹಣೆಗೆ ಬಿತ್ತಿದ 45 ರಿಂದ 50 ದಿನಗಳ ನಂತರ ಆಕ್ಸಿಪ್ಲೋರ್‌ಫೆನ್ 23.5 ಇ.ಸಿ. (175 ಮಿ.ಲೀ ಪ್ರತಿ ಎಕರೆಗೆ) ಬಳಸಬೇಕು. ಸಸ್ಯ ಪ್ರಚೋದಕವಾದ ಮಿರಾಕ್ಯಲಾನ್ (2 ಮಿ.ಲೀ. ಪ್ರತಿ ಲೀಟರ್ ನೀರಿಗೆ) ಸಿಂಪರಣೆಯನ್ನು ಬೀಜ ಹಾಕಿದ 50 ದಿನಗಳ ನಂತರ ಮಾಡಬೇಕು ಎಂದರು. ಸುಳಿ ತಿರಿಪಿನ ನಿರ್ವಹಣೆಗೆ ಶೀಲಿಂದ್ರನಾಶಕ ಹೆಕ್ಸಾಕೋನೊಜೋಲ್ (1 ಮಿ. ಲೀ. ಪ್ರತಿ ಲೀಟರ್ ನೀರಿಗೆ) ಸಿಂಪರಣೆಯೊಂದಿಗೆ ಲಘು ಪೋಷಕಾಂಶಗಳ ನಿರ್ವಹಣೆ ಮಾಡಬೇಕು ಎಂದರು. 

ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ. ಪ್ರಸನ್ನ ಪಿ. ಎಂ ಮಾತನಾಡಿ, ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಳೆಗೆ ಬಾಧಿಸುವ ಕೀಟಗಳಾದ ಥ್ರೀಪ್ಸ್‌ ನುಶಿ, ಈರುಳ್ಳಿ ಗಡ್ಡೆ ನೊಣ ಮತ್ತು ಕರ್ಣ ಕೀಟಗಳ ಹಾನಿ ಪ್ರಮಾಣ ಮತ್ತು ಬಾಧೆ ಲಕ್ಷಣಗಳು ಕಂಡು ಬಂದಲ್ಲಿ ಹೊಲದ ಸುತ್ತಲೂ ಸ್ವಚ್ಛತೆ ಕಾಪಾಡುವುದು ಜೊತೆಗೆ ಕೀಟನಾಶಕಗಳಾದ 0.25 ಮಿ.ಲೀ ಇಮಿಡಾಕ್ಲೋಪ್ರಿಡ್ 18.5 ಅ ಎಸ್‌. ಸಿ / 1.7 ಮಿ. ಲೀ. ಡೈಮಿಥೊಯೇಟ್ 80 ಇ. ಸಿ. ಅಥವಾ 1.3 ಮಿ. ಲೀ. ಆಕ್ಸಿಡೆಮೇಡಾನ್ ಮಿಥೈಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದರು. 

ಡಾ. ನೂರುಲ್ಲಾ ಹಾವೇರಿ, ತೋಟಗಾರಿಕೆ ತಜ್ಞ ಡಾ. ಸಂತೋಷ,  ಹೊಸ ತಳಿಗಳು ಮತ್ತು ಸಂಕರಣ ತಳಿಗಳ ಬಗ್ಗೆ ಪರಿಚಯ ಮಾಡಿದರು. ಜಿಲ್ಲೆಯ ಸುಮಾರು 64 ಜನ ರೈತರು ಭಾಗವಹಿಸಿ ತರಬೇತಿಯ ಪ್ರಯೋಜನೆ ಪಡೆದರು.  

ಸುದ್ದಿ ಓದಿ