ರಾಷ್ಟ್ರಮಟ್ಟದ ಹ್ಯಾಂಡ್ಬಾಲ್ಗೆ ಆಯ್ಕೆ
ರಾಣೇಬೆನ್ನೂರು 11: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎಸ್ಸಿ. ವಿದ್ಯಾರ್ಥಿನಿ ತನುಜಾ ಚಂದ್ರಪ್ಪಾ ಲಮಾಣಿ ಇವರು 44ನೇ ರಾಷ್ಸ್ರೀಯ ಕಿರಿಯ ಮಹಿಳಾ ಹ್ಯಾಂಡ್ಬಾಲ್ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದಾರೆ.
ರಾಣೇಬೆನ್ನೂರು ತಾಲ್ಲೂಕಿನ ಹುಲ್ಲತ್ತಿ ಥಾಂಡಾ ನಿವಾಸಿ ತನುಜಾ ಉತ್ತರಪ್ರದೇಶದ ಲಖನೌನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿಲಿದ್ದಾರೆ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಘವೇಂದ್ರ ಕೆ. ಅವರು ತರಬೇತಿ ನೀಡಿದ್ದು, ಈ ಆಯ್ಕೆ ಗ್ರಾಮೀಣ ಮಟ್ಟದ ಕ್ರೀಡಾಪ್ರತಿಭೆಗೆ ದೊರೆತ ಫಲವಾಗಿದೆ.
ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ರಾಣೇಬೆನ್ನೂರಿನ ಕಿರೀಟಕ್ಕೆ ಗರಿ ತಂದಿದ್ದಕ್ಕೆ ತನುಜಾ ಲಮಾಣಿ ಅವರನ್ನು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಶಾಸಕ ಅರುಣಕುಮಾರ ಪೂಜಾರ, ಪ್ರಾಂಶುಪಾಲ ಪ್ರೊ.ಎಲ್.ವಿ.ಸಂಗಳದ, ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಅರುಣಕುಮಾರ ಚಂದನ್ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿವರ್ಗ ಅವರನ್ನು ಹಾಗೂ ಆಟಗಾರರನ್ನು ಹಾಗೂ ಕೋಚ್ ಡಾ. ರಾಘವೇಂದ್ರ ಕೆ. ಅವರನ್ನು ಅಭಿನಂದಿಸಿದ್ದಾರೆ.