ಹಸ್ತಶಿಲ್ಪಿಯಿಂದ ಸಿಲ್ಕ್ ಇಂಡಿಯಾ ಮೇಳಕ್ಕೆ ಸೀಮಾ ಲಾಟ್ಕರ್ ಚಾಲನೆ

ಹಸ್ತಶಿಲ್ಪಿಯಿಂದ ಸಿಲ್ಕ್ ಇಂಡಿಯಾ ಮೇಳಕ್ಕೆ ಸೀಮಾ ಲಾಟ್ಕರ್ ಚಾಲನೆ

ಲೋಕದರ್ಶನ ವರದಿ 

ಬೆಳಗಾವಿ : ನಗರದ ಮರಾಠ ಮಂದಿರದಲ್ಲಿ ಹಸ್ತಶಿಲ್ಪಿ ವತಿಯಿಂದ 6 ದಿನಗಳ ಕಾಲ ಆರಂಭವಾದ ಸಿಲ್ಕ್ ಇಂಡಿಯಾ ಮೇಳಕ್ಕೆ ನಗರದ ಕಾನೂನು ಸುವ್ಯಸ್ಥೆ ವಿಭಾಗದ ಉಪಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಹಾಗೂ ಮಹಾನಗರ ಪಾಲಿಕೆಯ ಉಪ ಮೇಯರ್ ಮಧುಶ್ರೀ ಪೂಜಾರಿ ಅವರು ಬುಧವಾರ ಚಾಲನೆ ನೀಡಿದರು.

ಇಲ್ಲಿನ ಖಾನಾಪುರ ರಸ್ತೆಯ ಮರಾಠಾ ಮಂದಿರದಲ್ಲಿ ಜುಲೈ 18ರಿಂದ 23ರವರೆಗೆ ಆರು ದಿನಗಳ ಮೇಳ ಆಯೋಜಿಸಲಾಗಿದ್ದು, 50ಕ್ಕೂ ಹೆಚ್ಚು ಮಳಿಗೆಗಳಲ್ಲಿ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳನ್ನು ಬೆಳಗಾವಿ ಹಾಗೂ ಸುತ್ತಮುತ್ತಲಿನ ಜನರಿಗಾಗಿ ಬೆಳಿಗ್ಗೆ 10.30ರಿಂದ ರಾತ್ರಿ 8.30ರವರೆಗೆ ಆಯೋಜಿಸಲಾಗಿದೆ ಎಂದು ವ್ಯವಸ್ಥಾಪಕ ನಿದರ್ೇಶಕರಾದ ಟಿ. ಅಭಿನಂದ್ ತಿಳಿಸಿದ್ದಾರೆ.

ಮಧ್ಯ ವತರ್ಿಗಳ ಹಾವಳಿ ತಪ್ಪಿಸಿ ಉತ್ಪಾದಕರೇ ನೇರವಾಗಿ ಗ್ರಾಹಕರಿಗೆ ಈ ಉತ್ಪನ್ನಗಳನ್ನು ತಲುಪಿಸುವುದರಿಂದ ಗ್ರಾಹಕರು ಯೋಗ್ಯ ಬೆಲೆಯಲ್ಲಿ ಉತ್ಪನ್ನಗಳನ್ನು ಪಡೆಯುವಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಹಸ್ತಶಿಲ್ಪಿ ಸಂಸ್ಥೆಯು ಭಾರತ ಸರಕಾರದ ಜವಳಿ ಮಂತ್ರಾಲಯದಲ್ಲಿ ನೋಂದಾಯಿಸಿದ್ದು, ನೇಕಾರರು ಮತ್ತು ಕುಶಲಕಮರ್ಿಗಳು ಉತ್ಪಾದಿಸುವ ಉತ್ಪನ್ನಗಳಿಗೆ ದೇಶದ ಪ್ರಮುಖ ನಗರಗಳಲ್ಲಿ ಮಾರಾಟ ಮೇಳವನ್ನು ಆಯೋಜಿಸುವ ಮೂಲಕ ನೇರವಾಗಿ ಅವರ ಉತ್ಪನ್ನಗಳು ಗ್ರಾಹಕರಿಗೆ ತಲುಪಿಸುವಂತೆ ಮಾಡುವುದು ಸಂಸ್ಥೆಯ ಉದ್ದೇಶ ಎಂದರು.

ಮೇಳದಲ್ಲಿ ತಸ್ಸರ್ ರೇಷ್ಮೆ ಸೀರೆಗಳು, ಕ್ರೇಪ್, ಶಿಫಾನ್ ಮತ್ತು ಜಾಜರ್ೆಟ್ ಸಿಲ್ಕ್ ಸೀರೆಗಳು, ಅರಿಣಿ ರೇಷ್ಮೆ ಸೀರೆಗಳು, ಧಮರ್ಾವರಂ ಸೀರೆಗಳು, ಕಾಂಜಿಪುರಂ ಸಿಲ್ಕ್ ಮತ್ತು ಮದುವೆ ಸೀರೆಗಳು, ರಾ ಸಿಲ್ಕ್ ಮತ್ತು ಕೋಸಾ ಸೀರೆಗಳು, ಕಲ್ಕೋತ್ತಾ ಗಣಪತಿ ಸೀರೆಗಳು, ಢಾಕ ಸೀರೆಗಳು, ಡಿಸೈನರ್ ಎಂಬ್ರಾಯಿಡರಿ ಸೀರೆ, ಮತ್ತು ಡ್ರೆಸ್, ಬಲಚೂರಿ ರೇಷ್ಮೇ, ಮಟ್ಕಾ ಸೀರೆಗಳು ಹಾಗೂ ಪ್ರೀಟೆಂಡ್ ಸೀರೆಗಳು ಹಾಗೂ ಇನ್ನೀತರ ಹಲವು ರೀತಿಯ ಸೀರೆಗಳು ಹಾಗೂ ಇತರ ಉಡುಪು ಬಟ್ಟೆಗಳು ಲಭ್ಯವಿವೆ.

ಈ ಸಿಲ್ಕ್ ಇಂಡಿಯಾ ಮೇಳದಲ್ಲಿ ಜಮ್ಮು ಕಾಶ್ಮೀರ್, ದೆಹಲಿ, ಬಿಹಾರ್, ಪಶ್ಚಿಮ ಬಂಗಾಳ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದ ಅನೇಕ ರಾಜ್ಯಗಳ ಮಳೆಗೆಗಳು ಇಲ್ಲಿ ಪ್ರಾರಂಭವಾಗಿವೆ. 

ಸುದ್ದಿ ಓದಿ