ಜಾತ್ಯತೀತ ನಾಯಕ ಪ್ರಹ್ಲಾದ ಜೋಶಿ
ಶಿಗ್ಗಾವಿ 28 : ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ದೇಯೋದ್ದೇಶ ಇಟ್ಟುಕೊಂಡು ಜಾತ್ಯಾತೀತ ಭಾವದಿಂದ ಭಾವೈಕ್ಯತೆಯ ಜನನಾಯಕರಾಗಿ ಆಡಳಿತ ಮಾಡಿದ ನಾಯಕ ಪ್ರಹ್ಲಾದ ಜೋಶಿ ಎಂದು ತಾಲೂಕ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಹ್ಲಾದ್ ಜೋಶಿಯವರ ಕುರಿತಾಗಿ ದಿಂಗಾಲೇಶ್ವರ ಶ್ರೀಗಳು ನೀಡಿರುವ ಹೇಳಿಕೆ ತಪ್ಪು ತಿಳುವಳಿಕೆಯಿಂದ ಕೂಡಿರಬಹುದು ಜೋಶಿಯವರು ಅನೇಕ ವೀರಶೈವ ಲಿಂಗಾಯತರನ್ನು ಗುರುತಿಸಿ ನಾಯಕರನ್ನಾಗಿ ಮಾಡಿದ್ದಾರೆ ಜಾತ್ಯಾತೀತವಾಗಿ ಎಲ್ಲ ಸಮಾಜಕ್ಕೂ ಸ್ಪಂದಿಸಿದ್ದಾರೆ ಅವರ ನಡೆ-ನುಡಿ ಆಡಳಿತದಲ್ಲಿ ಶೃತಿ ಭದ್ರತೆಯನ್ನು ಎಲ್ಲರೂ ಮೆಚ್ಚಿ ಸಂಸತ್ತಿಗೆ ನಾಲ್ಕು ಬಾರಿ ಆಯ್ಕೆ ಮಾಡಿದ್ದಾರೆ ಕೇಂದ್ರ ಸಚಿವರಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ರಾಷ್ಟ್ರದ ಅಭಿವೃದ್ಧಿಗಾಗಿ ಅಖಂಡತೆಗಾಗಿ ಭದ್ರತೆಗಾಗಿ ಸೇವೆ ಮಾಡಿದ್ದಾರೆ ಕೇಂದ್ರಕ್ಕೂ ಮತ್ತು ರಾಜ್ಯಕ್ಕೂ ಅಭಿವೃದ್ಧಿಯ ಕೊಂಡಿಯಾಗಿ ಸಾವಿರಾರು ಕೋಟಿ ಅನುದಾನವನ್ನು ರಾಜ್ಯಕ್ಕೆ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ತಂದಿದ್ದಾರೆ ಸಾಮಾಜಿಕ ಕಳಕಳಿ, ಅಂತ್ಯೋದಯ ಪರಿಕಲ್ಪನೆ ಅಭಿವೃದ್ಧಿಯ ಚಿಂತನೆ ನೀತಿ ಮತ್ತು ಪ್ರೀತಿ ತುಂಬಿದ ಆಡಳಿತ ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ಮಾಡುತ್ತಾ ಬಂದಿದ್ದಾರೆ ಧಾರವಾಡ ಲೋಕಸಭಾ ಮಂಡಲ ಮತ್ತು ಜಿಲ್ಲಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹೆಚ್ಚು ಲಿಂಗಾಯತರನ್ನೆ ನೇಮಿಸಿದ್ದಾರೆ ಅವರೊಂದಿಗೆ ನಾವೆಲ್ಲರೂ ಗಟ್ಟಿಯಾಗಿ ನಿಲ್ಲುತ್ತೇವೆ ಅವರಿಗೆ ಇಡೀ ಲೋಕ ಸಭಾಧ್ಯಂತ ಜನಬೆಂಬಲ ಇದೆ ಜೋಶಿಯವರ ಬಗ್ಗೆ ಶ್ರೀಗಳಿಗೆ ತಪ್ಪು ಮಾಹಿತಿ ಹೋಗಿರಬಹುದು ನಾವೆಲ್ಲರೂ ಶ್ರೀಗಳಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದರು.