‘ಭಾರತ್ ಬಂದ್’ ಗೆ ಮೊದಲೇ ನೊಯಿಡಾದಲ್ಲಿ ಸೆಕ್ಷನ್ 144... ಧರಣಿ ನಿಷೇಧ....!
ನವದೆಹಲಿ, ಡಿಸೆಂಬರ್ 7: ರಾಷ್ಟ್ರ ರಾಜಧಾನಿ ದೆಹಲಿಯ ಗಡಿಯಲ್ಲಿ ರೈತರು ಪ್ರತಿಭಟನೆಯ ನಡುವೆ ಗೌತಮಬುದ್ಧ ನಗರದಲ್ಲಿ ಸೆಕ್ಷನ್
144 ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಗೌತಮ ಬುದ್ಧ ನಗರ ಆಡಳಿತ ಕೊರೊನಾ ಸಾಂಕ್ರಾಮಿಕ ಹರಡುವುದನ್ನು ತಡೆಯುವ ಕ್ರಮವಾಗಿ ನಿಷೇಧಾಜ್ಞೆ 144 ಅನ್ನು ಜಾರಿಮಾಡಿದೆ.
ಇದು 2021ರ ಜನವರಿ 2, ರವರೆಗೆ ಮುಂದುವರಿಯಲಿದೆ. ಇದರಿಂದಾಗಿ ಗೌತಮ ಬುದ್ಧ ನಗರದಲ್ಲಿ ಯಾವುದೇ ಸಾಮೂಹಿಕ ಕಾರ್ಯಕ್ರಮ ನಡೆಸಲು ಸಾಧ್ಯವಿಲ್ಲ.
ರೈತರು ಈ ತಿಂಗಳ 8 ರಂದು ‘ಭಾರತ್ ಬಂದ್’ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಗೌತಮ ಬುದ್ಧನಗರ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ, ಈ ನಿರ್ಣಯ ಕೈಗೊಂಡಿದ್ದಾರೆ ಎನ್ನಲಾಗಿದೆ. ಡಿಸೆಂಬರ್ 23 ರಂದು ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನ, ಡಿಸೆಂಬರ್ 25 ರಂದು ಕ್ರಿಸ್ಮಸ್, ಜನವರಿ 31 ವರ್ಷದ ಕೊನೆಯ ದಿನ, ಜನವರಿ 1 ರಂದು ಹೊಸವರ್ಷ ಹೀಗೆ ಹಲವಾರು ಕಾರ್ಯಕ್ರಮ ನಡೆಯಲಿರುವ ಹಿನ್ನಲೆಯಲ್ಲಿ ಕೊರೊನಾ ಹಿನ್ನಲೆಯಲ್ಲಿ ಅವುಗಳನ್ನು ತಡೆಯಲು ಅಧಿಕಾರಿಗಳು ಮುನ್ನೆಚ್ಚರಿಕೆಯ ಕ್ರಮವಾಗಿ ಸೆಕ್ಷನ್ 144 ಜಾರಿಗೊಳಿಸಿದ್ದಾರೆ.