ರಾಣೆಬೆನ್ನೂರ

ಬಿ.ಎ.ಜೆ.ಎಸ್‌.ಎಸ್‌. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ

ಬಿ.ಎ.ಜೆ.ಎಸ್‌.ಎಸ್‌. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ

ರಾಣೀಬೆನ್ನೂರ 21: ಬಿ.ಎ.ಜೆ.ಎಸ್‌.ಎಸ್ ಸ್ವತಂತ್ರ ಪದವಿ-ಪೂರ್ವ ಮಹಿಳಾ ಕಾಲೇಜಿನ 2020-21ನೇ ಸಾಲಿನ  ದ್ವಿತೀಯ ಪಿ,ಯು,ಸಿ ಫಲಿತಾಂಶವು 100ಅ ಆಗಿದ್ದು ಇದರಲ್ಲಿ 7 ಅತ್ತ್ಯುನ್ನತ  110 ಪ್ರಥಮ 10 ದ್ವಿತೀಯ ಸ್ಥಾನ  5 ತೃತಿಯ ಸ್ಥಾನ  ಪಡೆದುಕೊಂಡು ಉತ್ತೀರ್ಣರಾಗಿರುತ್ತಾರೆ.  

ಕಾಲೇಜಿಗೆ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರ ವಿವರ ಈ ಕೆಳಗಿನಂತಿವೆ. 

ಯಶಸ್ವಿನಿ ಬತ್ತಿಕೊಪ್ಪ -586(ಕಲಾವಿಭಾಗ) ಕನ್ನಡ ವಿಷಯದಲ್ಲಿ 100 ಕ್ಕೆ 100, ನಿಂಗಮ್ಮ ಕಾಳಪ್ಪನವರ -556(ಶಿಕ್ಷಣ ವಿಭಾಗ), ಸುಧಾ ಅಗಸಿಬಾಗಿಲ -540(ಶಿಕ್ಷಣ ವಿಭಾಗ), ಸ್ನೇಹಾ ಬ್ಯಾಡಗಿ -537 (ಶಿಕ್ಷಣ ವಿಭಾಗ), ಶೃತಿ ಗೌಳಿ-524 (ವಾಣಿಜ್ಯ ವಿಭಾಗ), ಸಹನಾ ಬೀಳಣ್ಣನವರ-524(ವಾಣಿಜ್ಯ ವಿಭಾಗ), ನಾಗವೇಣಿ ಸುಂಕದ-524(ವಾಣಿಜ್ಯ ವಿಭಾಗ), ಸೇವಂತಿ ಕಮದೊಡ -508(ಕಲಾವಿಭಾಗ), ಪ್ರೀತಿ ನಿಟ್ಟೂರು-508(ಕಲಾವಿಭಾಗ), ಕಾವ್ಯಾ  ಐರಣಿ-500(ಕಲಾ ವಿಭಾಗ), ಗೌರಮ್ಮ ಕಿಟ್ಟದ 495(ವಾಣಿಜ್ಯ ವಿಭಾಗ) ಕನ್ನಡ ವಿಷಯದಲ್ಲಿ 100 ಕ್ಕೆ 100, ಸುಧಾ ಕಡೇಮನಿ-494 (ವಾಣಿಜ್ಯ ವಿಭಾಗ) ಕನ್ನಡ ವಿಷಯದಲ್ಲಿ 100 ಕ್ಕೆ 100 

ಕಾಲೇಜಿಗೆ ಅತಿ ಹೆಚ್ಚು ಅಂಕಗಳಿಸುವುದರ ಮೂಲಕ ಕಾಲೇಜಿಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿನಿಯರಿಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಶ್ರೀ ರುದ್ರ​‍್ಪ ಎಂ ಲಮಾಣಿ, ಸಂಸ್ಥೆಯ ಆಡಳಿತಾಧಿಕಾರಿಗಳು ಹಾಗೂ ಕೆ.ಪಿ.ಸಿ.ಸಿ. ಶಿಕ್ಷಕರು ಹಾಗೂ ಪದವೀಧರ ಘಟಕದ ರಾಜ್ಯಾಧ್ಯಕ್ಷರು ಆದ ಡಾಽಽ ಆರ್‌.ಎಮ್‌.ಕುಬೇರ​‍್ಪ, ಪಿಯುಸಿ ವಿಭಾಗದ ಆಡಳಿತಾಧಿಕಾರಿಗಳಾದ ಪ್ರೋ ಎಸ್‌.ಎ. ತಾಂಬೆ ಹಾಗೂ ಪ್ರಾಚಾರ್ಯರಾದ ಶ್ರೀ ಹೆಚ್‌.ಬಿ.ಪಟ್ಟಣಶೆಟ್ಟಿ ಹಾಗೂ ಎಲ್ಲಾ ಬೋಧಕ ಬೋಧಕೇತರ ವರ್ಗದವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ. 


ಸುದ್ದಿ ಓದಿ