ಚಿಕ್ಕೋಡಿ

ಭವಿಷ್ಯದ ಭವ್ಯ ಭಾರತದ ಶಿಲ್ಪಿಗಳು ಇಂದಿನ ಮಕ್ಕಳು : ಮಗ್ಗೆನ್ನವರ

ಭವಿಷ್ಯದ ಭವ್ಯ ಭಾರತದ ಶಿಲ್ಪಿಗಳು ಇಂದಿನ ಮಕ್ಕಳು : ಮಗ್ಗೆನ್ನವರ

ಮಾಂಜರಿ: ಭಾರತ ವಿಶ್ವಗುರು ಆಗುತ್ತಿದೆ ಎನ್ನುವ ಹೊತ್ತಲ್ಲಿ ನಾನಾ ಆಂತರಿಕ ಸಾಮಾಜಿಕ ಸಮಸ್ಯೆಗಳು ಉಲ್ಪಣಿಸುತ್ತಿವೆ. ಇಂದಿನ ಮಕ್ಕಳಲ್ಲಿ ರಾಷ್ಟ್ರೀಯತೆಯ ಅರಿವು ಮೂಡಿಸಿದಲ್ಲಿ ಭವಿಷ್ಯದ ಸುಂದರ ಭಾರತ ಸಾಧ್ಯ ಎಂದು ಸಗಲಗಾ ಮಾಜಿ ಶಾಸಕ ಕಲ್ಲಪ್ಪಣ್ಣ ಮಗ್ಗಣ್ಣವರ  ಅಭಿಪ್ರಾಯ ಪಟ್ಟರು. 

ಇಂದು ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಶಾಂತಿ ಸಾಗರ ಶಿಕ್ಷಣ ಪ್ರಸಾರಕ ಮಂಡಳದ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಹಾಗೂ ಸ್ನೇಹ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಾಂಜರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಅನ್ನ ಸಾಹೇಬ ಯಾದವ್ ಸಿ ಆರ್ ಸಿ ಮುಖ್ಯಸ್ಥ ಮಂಜುನಾಥ್ ಕರ್ನಿ ಹಾಜರಿದ್ದರು 

ಇಂದಿನ ಮಕ್ಕಳ ಮೇಲೆ ಬಹಳ ಒತ್ತಡವಿದೆ. ಪೋಷಕರು ಮತ್ತು ಶಿಕ್ಷಕರ ಮಹದಾಸೆ ನೆರವೇರಿಸುವ, ಕನಸು ನನಸು ಮಾಡುವ ಜವಾಬ್ಧಾರಿಗಳಿವೆ. ಆದರೆ ಪೂರಕ ವಾತಾವರಣ ಇಲ್ಲ. ಕಲಿಕೆಯ ಒತ್ತಡದೊಳಗೆ ಸಾಮಾಜಿಕ ಅರಿವು, ದೇಶ ಪ್ರಜ್ಞೆಯ ಕೊರತೆ ಎದ್ದು ಕಾಣುತ್ತಿದೆ. ಸಹಜ ಸ್ವಾತಂತ್ರ್ಯ ಇಲ್ಲದೇ ನಿಯಮಗಳೊಳಗೆ ಭವಿಷ್ಯ ಕಟ್ಟಿಕೊಳ್ಳುವ ಆತುರದಲ್ಲಿ ಎಲ್ಲವನ್ನೂ ಕಳೆದುಕೊಳ್ಳುವ ಬೀತಿ ಇದೆ. ಇಂದು ಕುಟುಂಬದ ಎಲ್ಲರೂ ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸುವ ಹಂತದಲ್ಲಿ ಮಕ್ಕಳಲ್ಲಿ ಬಂಧಿಯಾಗಿರುವ ಭಾವನೆಗಳು ಮನಸ್ಸಿನೊಳಗೆ ಕುಳಿತು ಮುಂದಿನ ದಿನಗಳಲ್ಲಿ ಬೇರೆ ರೀತಿಯಲ್ಲಿ ಪ್ರಕಟಿಸುವ ಅಪಾಯಗಳ ಬಗ್ಗೆ ನಾವು ಎಚ್ಚರವಹಿಸಬೇಕಾದ್ದು ತೀರಾ ಅನಿವಾರ್ಯ. ನಮ್ಮ ಕನಸುಗಳ ಸಕಾರಕ್ಕಾಗಿ ಮಕ್ಕಳ ಭವಿಷ್ಯಕ್ಕೆ ಪೆಟ್ಟು ಬೀಳುವ ಬಗ್ಗೆ ಪೋಷಕರು ಚಿಂತಿಸಬೇಕಾದ್ದು ತೀರಾ ಅಗತ್ಯ ಎಂದ ಅವರು ಮಕ್ಕಳಲ್ಲಿ ಸದ್ಗುಣಗಳ ಜೊತೆಗೆ ಸಾಮಾಜಿಕ ಪ್ರಜ್ಞೆ ಮತ್ತು ಜವಾಬ್ಧಾರಿ ಮೂಡಿಸಿ, ಭವಿಷ್ಯದ ಒಳ್ಳೆಯ ಪ್ರಜೆಗಳಾಗಿ ರೂಪಿಸುವ ಮೂಲಕ ಭವ್ಯ ಭಾರತದ ಕನಸು ನನಸು ಮಾಡಬೇಕೆಂದ ಕಲ್ಲಪ್ಪಣ್ಣ ಮಗ್ಗೆನ್ನವರ್ ಹೇಳಿದರು 

ಸಮಾಜದಲ್ಲಿ ಈಗ ಸ್ವಾರ್ಥ, ಅವಕಾಶವಾದಿತನಗಳು ಹೆಚ್ಚಿವೆ. ಸಮಾಜದಿಂದ ಏನೆಲ್ಲಾ ಪಡೆದ ನಾವು ಹಿಂತಿರುಗಿಸುವ ಮನೋಭಾವದಿಂದ ವಂಚಿತರಾಗುತ್ತಿದ್ದೇವೆ. ಎಂದಿಗೂ ಕೃತಜ್ಞತಾ ಮನೋಭಾವ ಶ್ರೇಯಸ್ಕರ ಎಂಬ ಸಾಮಾನ್ಯ ಜ್ಞಾನ ನಮ್ಮಲ್ಲಿರಬೇಕು. ಸಮಾಜದ ಪ್ರತಿ ಆಗುಹೋಗುಗಳಿಗೆ ಸ್ಪಂದಿಸಬೇಕು ಎಂದ ಅವರು ಸಾಧನೆಗೆ ಸುಲಭವಾದ, ಅಡ್ಡವಾದ ಯಾವುದೇ ಮಾರ್ಗಗಳಿಲ್ಲ. ಪರಿಶ್ರಮ ಸರಳೀಕರಣಕ್ಕೆ ಪರ್ಯಾಯವಿಲ್ಲ, ಸಾಧನೆಯ ಮಾರ್ಗದ ವಿಫಲತೆಗೆ ಕ್ಷಮೆ ಇಲ್ಲ. ಅರ್ಥಾತ್ ಸತತ ಪರಿಶ್ರಮ, ತ್ಯಾಗ, ಸತತ ಪ್ರಯತ್ನದ ಮೂಲಕ ಗುರಿ ಸಾಧಿಸಲೇ ಬೇಕು. ಆಗ ಮಾತ್ರ ಯಶಸ್ಸು, ಸನ್ಮಾನ ನಮ್ಮ ಹುಡುಕಿ ಬರುತ್ತದೆ ಎಂದು ಮಾಂಜರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಅನ್ನ ಸಾಹೇಬ್ ಯಾದವ್ ಹೇಳಿದರು 

ಸಂಸ್ಥೆಯ ಅಧ್ಯಕ್ಷ ಸನತ್ ಕುಮಾರ್ ಪಾಟೀಲ್  ಸಂಸ್ಥೆಯ ಪ್ರಗತಿ ಬಗ್ಗೆ ಸವಿವರವಾದ ವರದಿ ಓದಿ, ಶಾಲೆಯಲ್ಲಿ ಶೈಕ್ಷಣಿಕ ಪ್ರಗತಿ ಜೊತೆಗೆ ಮಕ್ಕಳ ಸವಾಂರ್ಗೀಣ ಬೆಳವಣಿಗೆಗೆ ಸಾಕಷ್ಟು ಒತ್ತುಕೊಟ್ಟು ಶಕ್ತಿ ಮೀರಿ ಪ್ರಗತಿ ಸಾಧಿಸಲಾಗಿದೆ. ಮಕ್ಕಳಲ್ಲಿ ಪಠ್ಯ, ಪಠ್ಯೇತರ ಚಟುವಟಿಕೆ ಜೊತೆಗೆ ಸಾಮಾಜಿಕ ಸೇವಾಕಾರ್ಯಗಳ ಪರಿಚಯ ಮಾಡಿಕೊಡಲಾಗಿದೆ ಎಂದ ಅವರು 20  ವರ್ಷಗಳಲ್ಲಿ ಶಾಲೆ ಮಹತ್ತರ ಹೆಜ್ಹೆಗಳನ್ನು ಇಟ್ಟು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುವಲ್ಲಿ ಪೋಷಕರು, ಹಿತೈಷಿಗಳ ಸಹಕಾರ, ಪ್ರೋತ್ಸಾಹ ಅವಿಸ್ಮರಣೀಯವಾದುದು ಎಂದು ಶ್ಲಾಘಿಸಿದ ಅವರು ಎಲ್ಲರಿಗೂ ಕೃತ???ತತೆಗಳನ್ನು ಸಲ್ಲಿಸಿದರು. ಈ ವೇಳೆ ಅತಿಥಿಯಾಗಿ ಆಗಮಿಸಿದ ಮಂಜುನಾಥ್ ಕರ್ಣಿ ತಮ್ಮ ಅನಿಸಿಕೆ ಮತ್ತು ಪಡಿಸಿದರು 

ಚಿಕ್ಕೋಡಿ ತಾಲೂಕಿನ ಮಾಂಜರಿ  ಗ್ರಾಮದ ಶಾಂತಿ ಸಾಗರ ಶಿಕ್ಷಣ ಪ್ರಸಾರಕ ಮಂಡಳದ ಪ್ರತಿಭವನ್ ವಿದ್ಯಾರ್ಥಿಗಳ ಸನ್ಮಾನಿಸುವಾಗ ಮಾಜಿ ಶಾಸಕ ಕಲ್ಲಪ್ಪಣ್ಣ ಮಗನ್ನವರ  ಮತ್ತು ಇನ್ನಿತರರು 


ಸುದ್ದಿ ಓದಿ