ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನ ಕೇಂದ್ರ: ಕ್ಷೇತ್ರ ಭೇಟಿ, ತಾಂತ್ರಿಕ ಸಲಹೆ
ರಾಣೇಬೆನ್ನೂರು: ತಾಲೂಕಿನ ಕಮದೂಡ ಗ್ರಾಮದಲ್ಲಿ ಇತ್ತಿಚೇಗೆ ಕೃಷಿ ವಿಜ್ಞಾನ ಕೇಂದ್ರ ಹನುಮನಮಟ್ಟಿ ಇದರ ಆಶ್ರಯದಲ್ಲಿ ಗುಚ್ಛ ಕ್ಷೇತ್ರ ಪ್ರಾತ್ಯೆಕ್ಷೀಕೆಯ ಪ್ರಗತಿ ಪರ ರೈತ ಗಣೇಶ ಆರ್. ಕುಂಟೇರ, ಮತ್ತು ಹನುಮಂತಪ್ಪ ಬಣಕಾರ, ಇವರ ತೂಗರಿ ಬೆಳೆ ಕ್ಷೇತ್ರಕ್ಕೆ ಭೇಟಿ ಕಾರ್ಯಕ್ರಮ ನಡೆಯಿತು. ಅಧಿಕ ಇಳುವರಿಗಾಗಿ ಅನುಸರಿಸಬೇಕಾದ ಕ್ರಮಗಳ ಕುರಿತಂತೆ ಕೇಂದ್ರದ ಮುಖ್ಯಸ್ಥ ಡಾಽಽ ಅಶೋಕ. ಪಿ. ಅವರು ಪ್ರಾತ್ಯೆಕ್ಷೀಕೆಯೋಂದಿಗೆ ಮಾಹಿತಿ ಒದಗಿಸಿ ತಿಳುವಳಿಕೆ ನೀಡಿದರು.
ಕಳೆದ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚಾಗಿ ಮಳೆ ಬಂದಿರುವುದರಿಂದ ತೊಗರಿ ಬೆಳೆ ಹೂವಾಡುವ ಹಂತದಲ್ಲಿರುತ್ತದೆ. ಆದರೆ ಈ ವರ್ಷ ಹಾವೇರಿ ಜಿಲ್ಲೆಯಲ್ಲಿ ಏಕ ಬೆಳೆಯಾಗಿ ಹಾಗೂ ಅಂತರ ಬೆಳೆಗಳಾಗಿ ತೊಗರಿ ಬೆಳೆಯನ್ನು ರೈತರು ಬೆಳೆದಿದ್ದು, ಈ ಬೆಳೆಯು ಕೃಷಿಕರ ಕೈಹಿಡಿಯುವ ಲಕ್ಷಣಗಳು ಗೋಚರಿಸುತ್ತಿವೆ. ತೊಗರಿ ಸದ್ಯ ಹೂವಾಡುವ ಹಂತದಲ್ಲಿದೆ. ಉತ್ತಮ ಮಳೆಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಕೀಟ ಬಾಧೆ ಇಲ್ಲ. ಆದ್ದರಿಂದ ಉತ್ತಮ ಇಳುವರಿ ಬರಬಹುದು ಎನ್ನುವ ನೀರೀಕ್ಷೆ ಪ್ರತಿಯೂಬ್ಬ ರೈತರಲ್ಲಿ ಆತ್ಮವಿಶ್ವಾಸ ಮೂಡಿದೆ ಎಂದರು.
ಪ್ರಗತಿ ಪರ ಕೃಷಿಕ ಗಣೇಶ ಕುಂಟೇರ ಅವರು ಮಾತನಾಡಿ, ವಿಪರೀತ ಮಳೆ ಕಾರಣಕ್ಕೆ ಬಹುತೇಕ ಬೆಳೆಗಳು ಹಾಳಾಗಿದ್ದರೆ ತೊಗರಿ ಬೆಳೆಗೆ ಮಾತ್ರ ಮಳೆ ಪೂರಕವಾಗಿದ್ದು, ನಾಲ್ಕಾರು ವರ್ಷಗಳಲ್ಲಿ ಕಂಡರಿಯದ ರೀತಿಯಲ್ಲಿ ಈ ಬಾರಿ ತೊಗರಿ ಬೆಳೆ ಬಂದಿದೆ ಎಂದ ಅವರು ಈ ತೊಗರಿ ಬೆಳೆಯ ಎಲೆಗಳು ಕಟಾವಿನ ಹಂತದಲ್ಲಿ ಒಣಗಿ ಉದುರಿ ಭೂಮಿಯಲ್ಲಿ ಉಳಿಯುವುದರಿಂದ ಎಲೆಗಳು ಉದುರುವುದರಿಂದ ಭೂಮಿಯ ಭೌತಿಕ ಜೈವಿಕ ಚಟುವಟಿಕೆಗಳಿಗೆ ಚಾಲನೆ ದೊರೆತು ಮಣ್ಣಿನ ಫಲವತ್ತತೆಯಲ್ಲಿ ಸ್ಥಿರತೆಯನ್ನು ಕಾಪಾಡುತ್ತದೆ ಎಂದರು. ಈ ಸಂದರ್ಭದಲ್ಲಿ ಕೇಂದ್ರದ ವಿಜ್ಞಾನಿಗಳಾದ ಡಾ. ಶಾಂತವೀರಯ್ಯ ಸೇರಿದಂತೆ ಮತ್ತಿತರರು ಹಾಗೂ ರೈತರು ಪಾಲ್ಗೊಂಡಿದ್ದರು.