ಚಿಕ್ಕೋಡಿ

‘ಸಾವಿತ್ರಿಬಾಯಿ ಪುಲೆ ಮಹಿಳೆಯರಿಗೆ ಸ್ಫೂರ್ತಿ’

‘ಸಾವಿತ್ರಿಬಾಯಿ ಪುಲೆ ಮಹಿಳೆಯರಿಗೆ ಸ್ಫೂರ್ತಿ’


 ಚಿಕ್ಕೋಡಿ 13: ಮಹಿಳೆಯರಿಗೆ ಮೊದಲ ಬಾರಿಗೆ ಅಕ್ಷರಭ್ಯಾಸ ಮಾಡಿದ ಅಕ್ಷರದಾತೆ ಸಾವಿತ್ರಿಬಾಯಿ ಪುಲೆ ದೇಶದ ಮೊದಲ ಮಹಿಳಾ ಶಿಕ್ಷಕಿಯಾಗಿದ್ದರು. ಅವರು ಮಹಿಳೆಯರಿಗೆ ಸ್ಫೂರ್ತಿ. ನಾವೆಲ್ಲಾ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹಿರೇಕೋಡಿ ಗ್ರಾಮ ಪಂಚಾಯತ ಉಪಾಧ್ಯಕ್ಷೆ ಅನೀತಾ ಭರತ ದೇವಕಡರ ಹೇಳಿದರು. 

    ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ಸಾವಿತ್ರಿಬಾ ಪುಲೆ ಅವರ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾವಿತ್ರಿ ಬಾ ಪುಲೆಯರ ಜೀವನದ ಬಗ್ಗೆ ಇಂದಿನ ಯುವತಿಯರಿಗೆ ತಿಳಿಸುವ ಕಾರ್ಯ ಮಾಡಬೇಕಾಗಿದೆ. ಯಾವುದೆ ಮಹಾತ್ಮರನ್ನು ಕೇವಲ ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಿದೆ ಅವರ ತತ್ವಾದರ್ಶಗಳನ್ನು ನಾವೆಲ್ಲಾ ಅಳವಡಿಸಿಕೊಂಡು ಹೋಗುವಂತೆ ಕರೆ ನೀಡಿದರು. ಸಾವಿತ್ರಿ ಬಾ ಪುಲೆ ದಂಪತಿಗಳು ಸಮಾಜದಲ್ಲಿನ ಮೂಢನಂಬಿಕೆಗಳನ್ನು ಹೋಗಲಾಡಿಸಲು ತಮ್ಮ ಜೀವನ ಪರ್ಯಂತ ಹೋರಾಟ ಮಾಡಿದ್ದರು ಎಂದರು. 

    ಕಾರ್ಯಕ್ರಮದಲ್ಲಿ ವಂದನಾ ಭೋಸಲೆ, ಮನಿಷಾ ದೇವಡಕರ, ತೇಜನಾ ದೇವಕಡರ, ವಿಮಲಾ ದೇವಡಕರ, ಕರುಣಾ ದೇವಡಕರ, ಆಶಾ ದೇವಡಕರ, ತೇಜಸ್ವಿನಿ ಮಾಯನ್ನವರ, ಕರುಣಾ ದೇವಡಕರ, ಆರತಿ ಮೆಕ್ಕಳಿಕೆ, ವಿದ್ಯಾ ಮತ್ತಿತರರು ಭಾಗವಹಿಸಿದ್ದರು. 

ಸುದ್ದಿ ಓದಿ