ಕಾಗವಾಡ

ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್; ಉತ್ತಮ ಶಾಲೆಗಳಿಗೆ ಪ್ರಶಸ್ತಿ ಪ್ರಧಾನ ಮತ್ತು ಶೈಕ್ಷಣಿಕ ವಿಚಾರಗೋಷ್ಠಿ ಸಂಪನ್ನ..!

ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್; ಉತ್ತಮ ಶಾಲೆಗಳಿಗೆ ಪ್ರಶಸ್ತಿ ಪ್ರಧಾನ ಮತ್ತು ಶೈಕ್ಷಣಿಕ ವಿಚಾರಗೋಷ್ಠಿ ಸಂಪನ್ನ..!
Savitribai Phule National Teachers' Federation; Awards for good schools and educational seminars org

ಕಾಗವಾಡ 01 :  ಪ್ರಪಂಚದಲ್ಲಿ ಗುರು ಎನ್ನುವ ಶಬ್ದಕ್ಕೆ ಅಪಾರವಾದ ಗೌರವವಿದೆ. ಭಾರತದಲ್ಲಿ ಗುರುಮಾತೆ, ಅಕ್ಷರದ ಅವ್ವ ಎಂದೇ ಖ್ಯಾತಿಯಾದ ಸಾವಿತ್ರಿಬಾಯಿ ಪುಲೆಯವರು ತಾವು ಸಾಕಷ್ಟು ನೋವು, ಅವಮಾನ, ನಿಂದನೆ ಹಾಗೂ ದೈಹಿಕ ಹಿಂಸೆಗಳನ್ನು ಅನುಭವಿಸಿ, ಮಹಿಳೆಯರಿಗೆ ಶಿಕ್ಷಣ ನೀಡುವುದೊಂದೇ ತನ್ನ ಗುರಿ ಎಂದು ತಿಳಿದು, ತನ್ನ ಎಲ್ಲ ವಿದ್ಯೆಯನ್ನು ದೇಶದ ಮಹಿಳೆಯರಿಗೆ ಧಾರೆಯೆರಿದು, ಜಗತ್ತಿನ ಶ್ರೇಷ್ಠ ಮಹಿಳೆ ಎಂದು ಖ್ಯಾತಿ ಪಡೆದಿದ್ದಾರೆಂದು ಐನಾಪೂರ-ಕೃಷ್ಣಾಕಿತ್ತೂರು ಗುರುದೇವ ಆಶ್ರಮದ ಪಪೂ ಶ್ರೀ ಬಸವೇಶ್ವರ ಮಹಾಸ್ವಾಮಿಗಳು ಹೇಳಿದ್ದಾರೆ. 

ಅವರು, ರವಿವಾರ ದಿ. 01 ರಂದು ತಾಲೂಕಿನ ಉಗಾರ ಖುರ್ದ ಪಟ್ಟಣದ ಶ್ರೀ ಮಹಾದೇವ ಮಂದಿರದ ಸಭಾಭವನದಲ್ಲಿ ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ ಕಾಗವಾಡ ತಾಲೂಕ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ, ಉತ್ತಮ ಶಾಲೆಗಳಿಗೆ ಪ್ರಶಸ್ತಿ ಪ್ರಧಾನ ಮತ್ತು ಶೈಕ್ಷಣಿಕ ವಿಚಾರಗೋಷ್ಠಿ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ, ಆಶೀರ್ವಚನ ನೀಡುತ್ತಾ ಮಾತನಾಡುತ್ತಿದ್ದರು. ಇಂದು ದೇಶದಲ್ಲಿ ಸಾಕಷ್ಟು ಮಹಿಳೆಯರು ಶಿಕ್ಷಣ ಪಡೆದು, ಉನ್ನತ ಸ್ಥಾನಗಳನ್ನು ಪಡೆಯಬೇಕಾದರೆ ಹಾಗೂ ಸ್ವಾವಲಂಬಿ ಬದುಕು ರೂಪಿಸಿಕೊಂಡಿದ್ದರೆ ಸಾವಿತ್ರಿಬಾಯಿ ಫುಲೆ ಅವರೇ ಕಾರಣ, ಈ ಸಂಘಟನೆಗೆ ಸಾವಿತ್ರಿಬಾಯಿ ಪುಲೆ ಶಿಕ್ಷಕರ ಫೆಡರೇಶನ್ ಅಂತಾ ಹೆಸರಿಟ್ಟಿರುದು ಅತ್ಯಂತ ಶ್ಲಾಘನೀಯವಾಗಿದೆ ಎಂದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲತಾ ಮುಳ್ಳೂರು ಮಾತನಾಡಿ, ಸಾವಿತ್ರಿಬಾಯಿ ಪುಲೆ ರಾಷ್ಟ್ರೀಯ ಮಹಿಳಾ ನೌಕರರ ಸಂಘಟನೆಯ ಮುಖ್ಯ ಉದ್ದೇಶ ಎಂದರೆ ಸ್ತ್ರೀ ಸಬಲೀಕರಣ, ಮಹಿಳೆಯರ ಹಿತಾಶಕ್ತಿ ಕಾಪಾಡುವುದು. ಅವರ ಪ್ರಾಮಾಣಿಕ ಬೇಡಿಕೆಗಳನ್ನು ಈಡೇರಿಸುವುದು. ಮಹಿಳಾ ನೌಕರರಿಗೆ ಸಾಮಾಜಿಕ ಹಾಗೂ ರಾಜಕೀಯವಾಗಿ ತೊಂದರೆಗಳಿಗೆ ಒಳಗಾಗಿದ್ದರೆ ಅವರ ಬೆನ್ನೆಲುಬಾಗಿ ನಿಲ್ಲುವದೇ ಸಂಘಟನೆಯ ಮುಖ್ಯ ಉದ್ದೇಶವಾಗಿದ್ದು, ಸಂಘಟನೆಯಲ್ಲಿ ಸರ್ಕಾರಿ ಶಾಲೆ, ಅನುದಾನಿತ ಶಾಲೆ, ಪ್ರೌಢಶಾಲೆ, ಪ್ರಾಥಮಿಕ ಶಾಲೆ, ಹಾಗೂ ಎಲ್ಲ ಮಹಾವಿದ್ಯಾಲಯಗಳ ಮಹಿಳಾ ಶಿಕ್ಷಕಿಯರು ಈ ಸಂಘಟನೆಯಲ್ಲಿ ಭಾಗಿಯಾಗಿರುತ್ತಾರೆ ಎಂದರು.  

ಕಾರ್ಯಕ್ರಮದಲ್ಲಿ ತಾಲೂಕ ಸಾವಿತ್ರಿಬಾಯಿ ಫುಲೆ ಮಹಿಳಾ ನೌಕರರ ಫೆಡರೇಶನ್ ಅನ್ನು ಅಧಿಕೃತವಾಗಿ ಪ್ರಾರಂಭಿಸಿ, ಪದಾಧಿಕಾರಿಗಳಿಗೆ ಪದಗ್ರಹಣ ಮಾಡಲಾಯಿತು. ಮತ್ತು ಕಾಗವಾಡ ವಲಯದ ಸಿಆರ್‌ಸಿ ಮಟ್ಟದ 10 ಶಾಲೆಗಳಿಗೆ ಉತ್ತಮ ಶಾಲೆ, ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಈ ಸಂದರ್ಭದಲ್ಲಿ ಡಿ.ಕೆ. ಹಿರೇಮಠ, ಎನ್‌.ಕೆ. ಮಾಕಾಳಿ, ರಾಜು ಕೋಳಿ, ಕುಮಾರ ಗಾಣಿಗೇರ, ಅಶೋಕ್ ಮಗದುಮ್ಮ ಮಹೇಶ ಹಳ್ಳೊಳ್ಳಿ, ಎಸ್‌.ಜಿ. ಸನಕರಿ, ಶೋಭಾ ಬಾಳಪ್ಪಗೋಳ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್‌.ಎಸ್‌. ಭಾವಿ, ಪ್ರಾಥಮಿಕ ಶಿಕ್ಷಕರ ಸಂಘದ ಮಾರುತಿ ಸಂಕಪಾಳ, ಸಾವಿತ್ರಬಾಯಿ ಫುಲೆ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗಾಯತ್ರಿ ಮಾಳಗೆ, ಖಜಾಂಜಿ ಸುರೇಖಾ ಗಡನ್ನೇವರ, ರೈತ ಮಹಿಳೆ ದುಂಡವ್ವಾ ಸೇರಿದಂತೆ ಬಿಆರ್‌ಪಿ, ಸಿಆರ್‌ಪಿಗಳು, ವಿವಿಧ ಸಂಘಟನೆಗಳು ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 




ಸುದ್ದಿ ಓದಿ