ಸಂಗೀತ ಜ್ಞಾನ ಪರಂಪರೆಯನ್ನು ಉಳಿಸಿ, ಬೆಳಸಿ: ಶಿವರುದ್ರಪ್ಪಾ
ಹೊಸಪೇಟೆ 14: ಸಂಗೀತ ಜ್ಞಾನ ಪರಂಪರೆಯನ್ನು ಉಳಿಸಿ, ಬೆಳಸುವ ಕೆಲಸವನ್ನು ಯುವ ವಿದ್ಯಾರ್ಥಿಗಳು ಮಾಡಬೇಕು. ಹಾಗೆಯೇ ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ರಿಜಿಸ್ಟರ್ ಎಸ್.ಎಚ್ ಶಿವರುದ್ರ್ಪ ತಿಳಿಸಿದರು.
ಅವರು ನಗರದ ಶಂಕರ್ ಆನಂದ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಮತ್ತು ವಾಲ್ಮೀಕಿ ಮಹಿಳಾ ಕಲಾ ಸಂಘ ಹೊಸಪೇಟೆ ಗಿರಿಜನ ಉಪಯೋಜನೆ ಪ್ರಾಯೋಜಕತ್ವದಲ್ಲಿ ಗುರು ಶಿಷ್ಯ ಪರಂಪರೆ, 5ತಿಂಗಳ ಸುಗಮ ಸಂಗೀತ ತರಬೇತಿ ಶಿಬಿರದ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಂಗಸಂಸ್ಥೆಗಳು ಕಾಲೇಜು ವಿದ್ಯಾರ್ಥಿಗಳಿಗೆ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸುತ್ತಿದ್ದು ವಿದ್ಯಾರ್ಥಿಗಳು ಅದರಲ್ಲಿ ಪಾಲ್ಗೊಂಡು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಕಾಲೇಜಿನ ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಯಬೇಕು ಎಂದು ತಿಳಿಸಿದರು. ಅಕಾಡೆಮಿಯಿಂದ ವಿದ್ಯಾರ್ಥಿಗಳಿಗೆ ಸಹಕಾರ ದೊರೆಯುತ್ತದೆ, ಫಲಾನುಭವಿಗಳಿಗೆ ಪ್ರತಿ ತಿಂಗಳು 1ಸಾವಿರ ರೂಪಾಯಿ ಗೌರವಧನದೊಂದಿಗೆ 10ವಿದ್ಯಾರ್ಥಿಗಳಿಗೆ 5 ತಿಂಗಳ ತರಭೇತಿ ನೀಡಲಾಗುತ್ತದೆ ಎಂದರು.
ವೇದಿಕೆ ಮೇಲಿನ ಎಲ್ಲಾ ಗಣ್ಯರೊಂದಿಗೆ ಕಾಲೇಜಿನ ಅಭಿವೃದ್ಧಿಸಮಿತಿಯ ಸದಸ್ಯರಾದ ಶ್ರೀ ಪ್ರಕಾಶ್ ಗುಡಿ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಕೋರಿದರು. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ಮಲ್ಲಿಕಾರ್ಜುನ ಟಿ ತುರುವನೂರು ಮಾತನಾಡಿ. ಸಂಗೀತ ಕೇಳುವುದರಿಂದ ಬುದ್ಧಿಶಕ್ತಿ ಹೆಚ್ಚಾಗುತ್ತದೆ ಎಂದು ತಿಳಿಸಿದರು. ಈ ಸಮಯದಲ್ಲಿ ಸುಗಮಸಂಗೀತದ ಕೆಲ ಪಲ್ಲವಿಗಳನ್ನು ಹಾಡಿ ಜಾಗೃತಿ ಮೂಡಿಸದರು. ಪ್ರಾಂಶುಪಾಲ ನಟರಾಜ್ ಪಾಟೀಲ್ ಅಧ್ಯಕ್ಷೀಯ ನುಡಿಯಲ್ಲಿ ಐದು ತಿಂಗಳ ಸುಗಮ ಸಂಗೀತ ತರಬೇತಿ ನಡೆಯಲ್ಲು ನಮ್ಮ ಕಾಲೇಜುನಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದನ್ನು ಬಳಸಿಕೊಂಡು ಕಾಲೇಜಿಗೆ ಒಳ್ಳೆಯ ಹೆಸರನ್ನು ತರುವ ಕೆಲಸ ಮಾಡಿ ಎಂದು ಹಾರೈಸಿದರು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಹಂಪಿ ಕನ್ನಡ ವಿವಿಯ ಸಂಗೀತ ವಿಭಾಗದ ಇಟಿಗಿ ವಿರೂಪಾಕ್ಷಪ್ಪ, ಕಾಲೇಜಿನ ಸಾಂಸ್ಕೃತಿಕ ವಿಭಾಗದ ಸಂಚಾಲಕ ಡಾ. ನಾಗಣ್ಣ ಕಿಲಾರಿ, ಐಕ್ಯುಎಸಿ ಸಂಚಾಲಕರು ಡಾ. ಟಿ.ಎಚ್ ಬಸವರಾಜ್, ಮಂಜುನಾಥ ಆರೆಂಟನೂರ ಮತ್ತು ವಿದ್ಯಾರ್ಥಿಗಳು ಭಾಗವಹಿದ್ದರು. ತರಭೇತುದಾರರಾದ ಅನುರಾಧ.ವಿ. ಸಾವಗತಿಸಿದರು. ಕು. ಪ್ರಿಯಾಂಕಾ ಮತ್ತು ಕು. ಶಿಲ್ಪ ಪ್ರಾರ್ಥಿಸಿದರು, ರಘು ಪ್ರಸಾದ್ ಕನ್ನಡ ಪ್ರಾಧ್ಯಪಕರು ನಿರೂಪಿಸಿದರು.