ಸವದತ್ತಿಯ ಟಿಎಪಿಸಿಎಮ್ಎಸ್ ಸೊಸೈಟಿ ವಾರ್ಷಿಕ ಸಭೆ
ಸವದತ್ತಿ 18: ಸುಮಾರು 66 ವರ್ಷಗಳ ಇತಿಹಾಸವನ್ನು ಹೊಂದಿರುವ ಸವದತ್ತಿ ತಾಲೂಕಾ ಒಕ್ಕುಲತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘವು ರೈತರಿಗೆ ಅನೇಕ ಸೌಲಭ್ಯತೆಗಳನ್ನು ಕಲ್ಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತ ಬಂದಿದೆ ಎಂದು ಟಿಎಪಿಸಿಎಮ್ಎಸ್ ಅಧ್ಯಕ್ಷ ರವೀಂದ್ರ ಯಲಿಗಾರ ಹೇಳಿದರು. ಸ್ಥಳೀಯ ಟಿಎಪಿಸಿಎಮ್ಎಸ್ ಸೊಸೈಟಿಯಲ್ಲಿ 67ನೇ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸೊಸೈಟಿಯು ರೈತರು ಬೆಳೆದ ಉತ್ಪನ್ನವನ್ನು ಸರಕಾರವು ನಿಗದಿ ಪಡಿಸಿದ ಬೆಂಬಲ ಬೆಲೆಯಲ್ಲಿ ಖರೀದಿಸಿ ರೈತರಿಗೆ ಸಹಕಾರಿಯಾಗಿದ್ದು, ರೈತರಿಗೆ ಒಳ್ಳೆಯ ಗುಣಮಟ್ಟದ ರಸಗೊಬ್ಬರ ಮತ್ತು ಬೀಜಗಳನ್ನು ಪೂರೈಸುವ ಮೂಲಕ ರೈತರ ಆರ್ಥಿಕ ಅಭಿವೃದ್ದಿಗೆ ಪ್ರೋತ್ಸಾಹ ನೀಡುತ್ತ ಬಂದಿದೆ ಎಂದರು. ಪ್ರಸಕ್ತ ಸಾಲಿನಲ್ಲಿ 3700 ಮೆಟ್ರಿಕ್ ಟನ್ಗಳಷ್ಟು ರಸಗೊಬ್ಬರವನ್ನು ರೈತರಿಗೆ ಪೂರೈಸುವ ಮೂಲಕ ಸಾಧನೆ ಮಾಡಿದೆ ಎಂದರು. ರೈತರ ಕ್ಷೇಮಾಭಿವೃದ್ದಿಗೋಸ್ಕರ ಪ್ರಾರಂಭಗೊಂಡ ಈ ಸಂಸ್ಥೆಯನ್ನು ಇನ್ನಷ್ಟು ಸಭಲಗೊಳಿಸಲು ಪ್ರತಿಯೊಬ್ಬ ಸದಸ್ಯರ ಸಹಕಾರ ಬಹುಮುಖ್ಯವಾಗಿದೆ ಎಂದರು.
ವೀರನಗೌಡ ಸಂಗಣ್ಣವರ, ಕಾಶೆಪ್ಪ ಕಾರ್ಲಕಟ್ಟಿ, ರಾಮನಗೌಡ ತಿಪರಾಶಿ, ಫಕ್ಕೀರ್ಪ ಹದ್ದನ್ನವರ, ಪ್ರಕಾಶ ಮೂಗಬಸವ, ಮಹಾದೇವ ಪ್ರಭುನವರ, ಗುರುಲಿಂಗಯ್ಯ ಹೊಸಪೇಟಿಮಠ, ಪ್ರಕಾಶ ಕಾಮಣ್ಣವರ, ಚಾಂದಬೀಬಿ ಬೋದ್ಲೇಖಾನ, ಸುಜಾತ ಪ್ರಭುನವರ, ಯಲ್ಲಪ್ಪ ಭಜಂತ್ರಿ, ಹೊನ್ನಪ್ಪ ಖಂಡ್ರಿ ಉಪಸ್ಥಿತರಿದ್ದರು. ವ್ಯವಸ್ಥಾಪಕ ಪ್ರಕಾಶ ಯಲಿಗಾರ ಸ್ವಾಗತಿಸಿದರು.