ಸೌಂದತ್ತಿ

ಸವದತ್ತಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯ ಶ್ಲಾಘನೀಯ: ಎಸ್‌ಪಿಬಿ ಮಹೇಶ

ಸವದತ್ತಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯ ಶ್ಲಾಘನೀಯ: ಎಸ್‌ಪಿಬಿ ಮಹೇಶ

ಬಂಡೆಗಲ್ಲಿನಿಂದ ಕೂಡಿದ ಗುಡ್ಡದಲ್ಲಿ ಸಾವಿರಾರು ಸಸಿಗಳನ್ನು ನೆಟ್ಟ 

ಉಗರಗೋಳ 07: ಪರಿಸರ ಸಂರಕ್ಷಣೆ ಎಲ್ಲರ ಹೊಣೆ. ಹೀಗಾಗಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆ ಮಾಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಿಸಲು ಶ್ರಮಿಸಬೇಕು ಎಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್‌ಪಿಬಿ ಮಹೇಶ ಹೇಳಿದರು. 

ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ಶುಕ್ರವಾರ ರಂದು ಸವದತ್ತಿ ಪ್ರಾದೇಶಿಕ ಅರಣ್ಯ ವಲಯ ಹಾಗೂ ಸಾಮಾಜಿಕ ಅರಣ್ಯ ವಲಯ ಮತ್ತು  ವೃಕ್ಷ ಸೈನಿಕರು ಹಾಗೂ ಯಲ್ಲಮ್ಮನ ಗುಡ್ಡದ ಸಂಯುಕ್ತ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು 

ಬೆಟ್ಟ, ಗುಡ್ಡ, ಪರ್ವತಗಳಲ್ಲಿ ಸಸಿ ನೆಡುವವರಿಗಿಂತ, ಅದರಿಂದ ದೂರ ಉಳಿಯುವವರೇ ಹೆಚ್ಚು. ಆದರೆ, ಇಲ್ಲಿನ ಅರಣ್ಯ ಇಲಾಖೆಯ ಸಿಬ್ಬಂದಿ ಬಂಡೆಗಲ್ಲಿನಿಂದ ಆವೃತವಾದ ಗುಡ್ಡದ ನಡುವೆಯೂ ಸಾವಿರಾರು ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಎಲ್ಲರಲ್ಲೂ ಬೆರುಗು ಮೂಡಿಸಿದ್ದಾರೆ. ಇವರ ಕಾರ್ಯ ಕಾರ್ಯ ಶ್ಲಾಘನೀಯ ಎಂದರು. 

ಸವದತ್ತಿಯ ಉಪ ವಲಯ ಅರಣೈಆಧಿಕಾರಿ  ಎಸ್ ಬಿ ಬಿಜಗುಪ್ಪಿ ಮಾತನಾಡಿ ಇಂದಿನ ದಿನಗಳಲ್ಲಿ ನಗರೀಕರಣದ ಪ್ರಭಾವದಿಂದ ಪರಿಸರ ನಾಶವಾಗುತ್ತಿದೆ. ನೈಸರ್ಗಿಕ ಸಂಕುಲಗಳಿಗೆ ಆಪತ್ತು ಬಂದಿದೆ. ಹೀಗಾಗಿ ವಿದ್ಯಾರ್ಥಿಗಳು ರೈತರು, ನಾಗರಿಕರು ಹಾಗೂ ಶಾಲೆಗಳಲ್ಲಿ, ತಮ್ಮ ಮನೆಯ ಅಂಗಳ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. 

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಾಯ್ ವಾಯ್ ಕಾಳಪ್ಪನವರ, ಲಕ್ಷ್ಮೀ ಹೂಲಿ, ಅಧೀಕ್ಷಕ ಅರವಿಂದ ಮಳಗೆ, ಅಭಿಯಂತರ ಎಮ್ ವ್ಹಿ ಮೂಳ್ಳೂರ, ಡಿ ಆರ್ ಚವ್ಹಾಣ, ಆರ್ ಎಚ್ ಸವದತ್ತಿ, ರಾಜು ಬೆಳವಡಿ, ರಾಜಶೇಖರ ನಿಡೂಣಿ, ಸಿ ಎ ಮುರಗೊಡ, ಎಮ್ ಜಿ ಮಹಾಂತ, ನಿವೃತ್ತ ಅರಣ್ಯಾಧಿಕಾರಿ, ಸಿ ಬಿ ಆಯಟ್ಟಿ ವಿಜಯಲಕ್ಷೀ ಬರಡಗಿ, ಪಂಡಿತ ಪಿ ರಾಜಶೇಖರಯ್ಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತು ದೇವಸ್ಥಾನ ಸಿಬ್ಬಂದಿ ಇದ್ದರು. 


ಸುದ್ದಿ ಓದಿ