ಸತ್ತಿಗೇರಿ ಗ್ರಾಮ ಪಂಚಾಯತ ಬಿಜೆಪಿ ಮಡಿಲಿಗೆ
ಸವದತ್ತಿ 30: ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದ ಸತ್ತಿಗೇರಿ ಗ್ರಾಂ.ಪಂ ಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಎರಡೂ ಸ್ಥಾನಗಳು ಬಿಜೆಪಿ ಮಡಿಲಿಗೆ ಸೇರಿದ್ದು, ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸವದತ್ತಿಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮುಖಂಡ ವಿರುಪಾಕ್ಷ ಮಾಮನಿ ಸತ್ಕರಿಸಿ ಗೌರವಿಸಿದರು. ಅಧ್ಯಕ್ಷರಾಗಿ ಬಿಜೆಪಿಯ ಬಂಗಾರೆವ್ವ ಮಾದರ ಹಾಗೂ ಉಪಾಧ್ಯಕ್ಷರಾಗಿ ಗುರು ವಾಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗೌಡಪ್ಪ ಸವದತ್ತಿ, ಬಸವರಾಜ ನಾರಗುಣ್ಣವರ, ಸುರೇಶ ನಂದಿ, ರಾಜೇಶ್ವರಿ ಮಾಕಾಳಿ, ಲಕ್ಷ್ಮೀಬಾಯಿ ಪೂಜೇರ, ಕಸ್ತೂರೆವ್ವ ಪಟ್ಟಣಶೆಟ್ಟಿ, ಬಸವರಾಜ ಮಾದರ, ಮಲ್ಲವ್ವ ಶಿದ್ರಾಮಪ್ಪಗೋಳ, ರೇಣುಕಾ ಪಾಟೀಲ, ಈರಣ್ಣ ಚಂದರಗಿ, ಈರಣ್ಣ ಹೊಸಮನಿ, ಮಹಾಂತೇಶ ಗೋಡಿ, ಬಸನಗೌಡ ಪಾಟೀಲ, ಹಣಮಂತ ನರೇರ, ಯಲ್ಲಪ್ಪ ಪಟ್ಟೆಪ್ಪನ್ನವರ, ಹನಮಂತ ಕಳಸಪ್ಪನವರ, ಫಕ್ಕೀರ್ಪ ಮಾದನ್ನವರ, ನಿಂಗಪ್ಪ ವಗ್ಗರ, ಯಮನಪ್ಪ ಮಾದರ, ಭೀಮಶಿ ಪಾಟೀಲ, ರಾಜು ನಿಡವಣಿ, ಸುನೀಲ ಮಾಮನಿ, ರಾಜು ಲಮಾಣಿ ಸೇರಿದಂತೆ ಬಿಜೆಪಿಯ ಕಾರ್ಯಕರ್ತರು ಉಪಸ್ಥಿತರಿದ್ದರು.