ಸೌಂದತ್ತಿ

ಶಶಿಕಲಾ ಮಾಳಿ ನೇತ್ರ, ದೇಹ ದಾನ

ಶಶಿಕಲಾ ಮಾಳಿ ನೇತ್ರ, ದೇಹ ದಾನ

ಸವದತ್ತಿ 02: ಪಟ್ಟಣದ ನಿವೃತ್ತ ಮುಖ್ಯೋಪಾಧ್ಯಯ ಶಶಿಕಲಾ ತಿಪ್ಪಣ್ಣ ಮಾಳಿ (75) ಇವರು ಶುಕ್ರವಾರದಂದು ನಿಧನರಾಗಿದ್ದು, ಇವರ ಅಂತಿಮ ಇಚ್ಚೆಯಂತೆ ಮಕ್ಕಳಾದ ಡಾ.ಅರುಣ ಮಾಳಿಯವರು ತಮ್ಮ ತಾಯಿಯ ದೇಹವನ್ನು ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್‌ವತಿಯಿಂದ ಬೆಳಗಾವಿಯ ಕೆ.ಎಲ್‌.ಇ ಬಿ.ಎಮ್‌.ಕಂಕಣವಾಡಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಾನ ಮಾಡುವ ಮೂಲಕ ಸಾರ್ಥಕತೆಯನ್ನು ಮೆರೆದಿದ್ದಾರೆ. 

ದೇಹದಾನದ ಜೊತೆಗೆ ಇವರ ಎರಡು ನೇತ್ರಗಳನ್ನು ಕೆ.ಎಲ್‌.ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ನೇತ್ರ ಬಂಢಾರಕ್ಕೆ ದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗುವ ಕಾರ್ಯವನ್ನು ಒಬ್ಬ ನಿವೃತ ಶಿಕ್ಷಕಿಯರು ನಿಧನದ ನಂತರ ಮಾಡಿರುವದು ಸಮಾಜಕ್ಕೆ ಮಾದರಿಯಾಗಿದೆ. 

ಮೃತರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳಿದ್ದು, ಶುಕ್ರವಾರ ಬೆಳಗ್ಗೆ ಸಾರ್ವಜನಿಕರಿಗೆ ಮೃತರ ಅಂತಿಮ ದರ್ಶನದ ನಂತರ ಡಾ.ಮಹಾಂತೇಶ ರಾಮಣ್ಣವರ ನೇತೃತ್ವದ ತಂಡದವರ ಮೂಲಕ ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್‌ಗೆ ಮೃತ ದೇಹವನ್ನು ಹಸ್ತಾಂತರ ಮಾಡಲಾಯಿತು. 


ಸುದ್ದಿ ಓದಿ