ಇಂಡಿ

ಶಿಕ್ಷಕ ಸಂತೋಷ ಗೆ ಸರ್ವೋದಯ ರತ್ನ ಪ್ರಶಸ್ತಿಯ

ಶಿಕ್ಷಕ ಸಂತೋಷ ಗೆ ಸರ್ವೋದಯ ರತ್ನ ಪ್ರಶಸ್ತಿಯ

ಶಿಕ್ಷಕ ಸಂತೋಷ ಗೆ ಸರ್ವೋದಯ ರತ್ನ ಪ್ರಶಸ್ತಿಯ  

ಇಂಡಿ 15: ಅನಿಕೇತನ ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿ ಸಂಘದ ವತಿಯಿಂದ ಇಂಡಿ ತಾಲೂಕಿನ ಹೊರ್ತಿ ಗ್ರಾಮದಲ್ಲಿ ಗುರುವಾರ ಜರುಗಿದ ಸರ್ವೋದಯ ಸಾಹಿತ್ಯ ಸಂಭ್ರಮ-2024 ರ ಅಡಿಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಗುರುನಮನ ಸಮಾರಂಭದಲ್ಲಿ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯ ಇಂಗ್ಲೀಷ್ ಶಿಕ್ಷಕ ಸಂತೋಷ ಬಂಡೆ ಅವರಿಗೆ ಸರ್ವೋದಯ ರತ್ನ ಪ್ರಶಸ್ತಿಯನ್ನು ಸಂಸ್ಥೆಯ ಅಧ್ಯಕ್ಷ ಆರ್ ಎಸ್ ಪೂಜಾರಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ತದ್ದೇವಾಡಿಯ ಮಹಾಂತೇಶ ಹಿರೇಮಠ ಸ್ವಾಮಿಗಳು, ಮೈಸೂರಿನ ಆಧ್ಯಾತ್ಮಿಕ ಚಿಂತಕ ಶಂಕರ ದೇವನೂರು, ಸಂಸ್ಥೆಯ ಅಧ್ಯಕ್ಷೆ ಶಾಂತಾಬಾಯಿ ಪೂಜಾರಿ, ಚಡಚಣ ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹುನೂರ, ಶಾಂತೇಶ್ವರ ಸಹಕಾರಿ ಸಂಸ್ಥೆಯ ಸಂಸ್ಥಾಪಕ ಉಪಾಧ್ಯಕ್ಷರಾದ ಶ್ರೀಮಂತ ಇಂಡಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ