ಹೊಸಪೇಟೆ

ಸರಸ್ವತಿ ದೇವಿಯ ಪೂಜೆ ಕಾರ್ಯಕ್ರಮ

ಸರಸ್ವತಿ  ದೇವಿಯ ಪೂಜೆ  ಕಾರ್ಯಕ್ರಮ


ಹೊಸಪೇಟೆ: ಇಂದು ವಿಜಯನಗರ ಕ್ಷೇತ್ರದ ಚಿತ್ತವಾಡ್ಗಿಯಲ್ಲಿರುವ ಆಕಾಶ್ ಪದವಿಪೂರ್ವ ಕಾಲೇಜಿನಲ್ಲಿ ನಲ್ಲಿ ಇಂದು ವಸಂತ ಪಂಚಮಿಯ ಪ್ರಯುಕ್ತ ಸರಸ್ವತಿ  ದೇವಿಯ ಪೂಜೆ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ನಿಟ್ಟಿನಲ್ಲಿ   ಆಕಾಶ್ ಪದವಿಪೂರ್ವ  ಕಾಲೇಜಿನ ಆಡಳಿತ ಮಂಡಳಿಗೆ ಬೆಸ್ಟ್‌ ಎಂಪ್ಲಾಯ್ ಅವಾರ್ಡನ್ನು ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳಿಗೆ ನೀಡುವುದರ ಜೊತೆಗೆ ದ್ವಾರಕಾ ವಿದ್ಯಾರ್ಥಿವೇತನದ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.ಈ ಸಮಾರಂಭದಲ್ಲಿ  ಆಕಾಶ್ ಪದವಿ ಪೂರ್ವ ಕಾಲೇಜ್ ನ  ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಹೆಚ್‌.ಎನ್ ಮಹಮ್ಮದ್ ಇಮಾಮ್ ನಿಯಾಜಿರವರು ದ್ವಾರಕಾ ವಿದ್ಯಾರ್ಥಿವೇತನದ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ಹಾಗು ಆಕಾಶ್ ಪದವಿ ಪೂರ್ವ ಕಾಲೇಜಿನ ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದವರಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಜೆ.ಇ.ಇ. ಹಾಗೂ ನೀಟ್ ನಲ್ಲಿ  ಖಚಿಟಿಞಟಿರ ಬರುವ ಉದ್ದೇಶದಿಂದ ಹಾಗೂ ಉನ್ನತ ಶಿಕ್ಷಣ ಪಡೆಯಬೇಕೆಂಬ ಹಂಬಲದಿಂದ ಬೆಂಗಳೂರು, ಧಾರವಾಡ, ಮೈಸೂರು, ಮಂಗಳೂರು ಹೀಗೆ ಮುಂತಾದ ಪ್ರದೇಶಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಿ ತನು ಮನ ಧನವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ .ಆದ್ದರಿಂದ ನಮ್ಮ ಈ ಭಾಗದ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಉತ್ತಮ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶದಿಂದ ಈ ನಮ್ಮ  ಶಿಕ್ಷಣ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದೇವೆಂದರು.ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರ ವಿಚಾರದಲ್ಲಿ ಯಾವುದೇ ಕಾಂಪ್ರಮೈಸ್ ಇರುವುದಿಲ್ಲ. ಶಿಕ್ಷಕರಿಗೆ ತಮ್ಮ ಬೋಧನಾ ನೈಪುಣ್ಯತೆಯೇ ಅವರ ಆಯ್ಕೆಯ  ಮಾನದಂಡವಾಗಿರುತ್ತದೆ. ಇದರೊಂದಿಗೆ  ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದೇ ಸಂಸ್ಥೆಯ ಉದ್ದೇಶವಾಗಿದೆ ಎಂದರು.ಜತೆಗೆ ಮಕ್ಕಳನ್ನು ಉದ್ಧೇಶಿಸಿ    ಸಾಧಿಸಬೇಕು ಎಂಬ ಛಲವೊಂದಿದ್ದರೆ ಅಸಾಧ್ಯ ಎನ್ನುವುದು ಯಾವುದೂ ಇಲ್ಲ.   ಛಲದೊಂದಿಗೆ ವಿದ್ಯಾಭ್ಯಾಸ ನಡೆಸಿ ಗುರಿ ಮುಟ್ಟಿದರೆ ಮಾತ್ರ ತಂದೆತಾಯಿಗಳಿಗೆ, ಶಿಕ್ಷಕರಿಗೆ ಗೌರವ ತರಬಹುದಾಗಿದೆ ಎಂದರು . ಕೊನೆಯದಾಗಿ  ನಮ್ಮ ಶಿಕ್ಷಣ ಸಂಸ್ಥೆಯನ್ನು ನಡೆಸಲು ಹಗಲಿರುಳೆನ್ನದೆ ಶ್ರಮಿಸುತ್ತಿರುವ ಎಲ್ಲಾ ಆಡಳಿತ ಸಿಬ್ಬಂದಿಗಳಿಗೂ ಅನಂತ ಕೃತಜ್ಞತೆಗಳನ್ನು ತಿಳಿಸಿ ಶಾಲು ಹೊದಿಸಿ ಸನ್ಮಾನಿಸಿದರು.ಈ ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿಗಳಾಗಿರುವ ಎನ್ ಶಾಕೀರಾ ಬೇಗಂ , ಸಿಇಒ ಗಳಾದ ವೆಂಕಟೇಶ್ವರನ್ ಅಯ್ಯರ್, ಪ್ರಾಂಶುಪಾಲರಾಗಿರುವ ಮಹೇಶ್ವರ ಚೌಧರಿ,  ಸಂಯೋಜಕರಾಗಿರುವ ಹೆಚ್ ಸಂಪದ, ಪ್ರಭಾರಿ ಪ್ರಾಚಾರ್ಯರಾದ ಅಬ್ದುಲ್ಲಾ ಖಾನ್, ಉಪನ್ಯಾಸಕರುಗಳಾದ ವಾಸುದೇವ ಭಟ್, ರಾಘವೇಂದ್ರ ರಾವ್, ರಾಜೇಶ್ ಶೆಟ್ಟಿ , ರಾಮಕೃಷ್ಣ , ಶಿಕ್ಷಕರಾದ ಆಸ್ಮಾ ಬಾನು, ನಾಗಪ್ರಭ, ಕ್ಷಮಾ ಕಿಶೋರ್, ಜ್ಯೋತಿ, ಶ್ರೀಲಕ್ಷ್ಮಿ, ಯಮುನಾ, ರಶ್ಮಿ, ಪ್ರಿಯಾಂಕ, ಶಾಲಿನಿ, ಶೋಭಾ ಭೋದಕೇತರ ಸಿಬ್ಬಂದಿಗಳಾದ ರಘುನಾಥ್ , ದತ್ತಾತ್ರೆಯ, ಹುಲಿಗೆಮ್ಮ, ಜಫ್ರುಲ್ಲಾ ಖಾನ್, ಬದ್ರಿನಾಥ್,ರಾಜು, ನೇತ್ರಾವತಿ  ಹಾಗು ನೂರಾರು ಮಕ್ಕಳು, ಪಾಲಕರು ಪೋಷಕರು, ಶಾಲೆಯ ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ