ಎಲಬುರ್ಗ

ಭೂ ತಾಯಿಗೆ ಚರಗ ಚೆಲ್ಲಿ ಸಂಭ್ರಮಿಸಿದ ರೈತರು

ಭೂ ತಾಯಿಗೆ ಚರಗ ಚೆಲ್ಲಿ ಸಂಭ್ರಮಿಸಿದ ರೈತರು

ಯಲಬುರ್ಗಾ 13: ಪಟ್ಟಣ ಸೇರಿದಂತೆ ತಾಲೂಕಿನ ನಾನಾ ಕಡೆ ಬುಧವಾರ ಎಳ್ಳು ಅಮಾವಾಸ್ಯೆ ನಿಮಿತ್ತ ರೈತರು ತಮ್ಮ ಹೊಲಗಳಲ್ಲಿ ಚರಗವನ್ನು ಚೆಲ್ಲುತ್ತಾ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು.

ಪಟ್ಟಣದ ರೈತ ಈಶಪ್ಪ ಸ್ಟಾಂಪಿನವರು ತಮ್ಮ ಕುಟುಂಬ ಸಮೇತ ಹೊಲಗಳಿಗೆ ಹೋಗಿ ತಮ್ಮ ಹೊಲದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಎಳ್ಳು ಅಮಾವಾಸ್ಯೆ ಹಬ್ಬವನ್ನು ಸಂಭ್ರಮಿಸಿದರು.

ಕೋವಿಡ್ ನಂತರ ಮೊದಲ ಬಾರಿಗೆ ಸಾಮೂಹಿಕವಾಗಿ ಸೇರಿದ ಕುಟುಂಬಗಳು

ಎಳ್ಳು ಅಮಾವಾಸ್ಯೆಯ ಪ್ರಯುಕ್ತ ಗ್ರಾಮೀಣ ಭಾಗದ ರೈತರು ಕುಟುಂಬದ ಸದಸ್ಯರೊಂದಿಗೆ ತಮ್ಮ ಹೊಲಗಳಿಗೆ ತೆರಳಿ ಭೂದೇವಿಗೆ ವಿಶೇμÀ ಪೂಜೆ ಸಲ್ಲಿಸಿದರೆ, ನಗರ ಪ್ರದೇಶದ ಜನ ಸಮೀಪದ ತೋಟ ಹಾಗೂ ಉದ್ಯಾನಗಳಿಗೆ ತೆರಳಿ ಕುಟುಂಬದ ಸದಸ್ಯರೊಂದಿಗೆ ಸಾಮೂಹಿಕ ಭೋಜನ ಮಾಡಿದರು.

ರೈತರು ಹೊಲದಲ್ಲಿ ಜೋಳದ ಕಣಿಕೆಯಿಂದ ಕೊಂಪೆ ಸಿದ್ಧಪಡಿಸಿ ಅದರ ಒಳಗೆ ಪಾಂಡವರ ಪ್ರತಿಮೆಗಳ ರೂಪದಲ್ಲಿ ಐದು ಕಲ್ಲುಗಳನ್ನು ಇಟ್ಟು ಅರಿಷಿಣ ಕುಂಕುಮ ಹಾಗೂ ವಿಭೂತಿ ಬಳಿದು ಆರತಿ ಬೆಳಗಿದರು.

ಮನೆಯಿಂದ ತಂದಿದ್ದ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ರುಚ್ಚಿಕಟ್ಟಾದ ಪಲ್ಯೆ, ಶೇಂಗಾ-ಎಳ್ಳಿನ ಹೋಳಿಗೆ ಅನ್ನ ಹಾಗೂ ಕಡುಬು ದೇವರ ಮುಂದೆ ಇಟ್ಟು ನೈವೇದ್ಯ ಮಾಡಿ ಭಕ್ತಿಭಾವದಿಂದ  ಬರುವ ದಿನಗಳಲ್ಲಿ ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆ ಬೆಳೆಯುವಂತೆ ಕರುಣಿಸು ಎಂದು ದೇವರಲ್ಲಿ ಪ್ರಾರ್ಥಿಸಿದರು.

ನಂತರ ಮನೆಯಿಂದ ತಂದಿದ್ದ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಕಾಳು ಪಲ್ಯೆ, ಶೇಂಗಾ-ಎಳ್ಳಿನ ಹೋಳಿಗೆ, ಸೊಂಡಗಿ, ನಾನಾ ತರಕಾರಿ ಸೊಪ್ಪುಗಳು, ಎಣೆಗಾಯಿ ಪಲ್ಯೆ, ಬದನೆಕಾಯಿ, ಕಡ್ಲಿಬೇಳೆ, ಕಟ್ಟಿನ ಸಾರು ಮಾಡಿದ ಅಡುಗೆಯನ್ನು ಹೊಲದಲ್ಲಿ ಒಟ್ಟಾರೆ ಕುಟುಂಬದ ಸದಸ್ಯರು ಕುಳಿತು  ಸೇವಿಸಿದರು. ಅನೇಕ ಕುಟುಂಬಗಳ ಸದಸ್ಯರು ದಿನವಿಡೀ ಹೊಲದಲ್ಲೇ ಸಮಯ ಕಳೆದರು. ಹಿರಿಯರು ಮರದ ಕೆಳಗೆ ಕುಳಿತು ವಿಶ್ರಾಂತಿ ಪಡೆದರು. ಯುವಕರು ಅಲ್ಲಲ್ಲಿ ಬೆಳೆದಿದ್ದ ಹಸಿ ಕಡಲೆ ಗಿಡಗಳನ್ನು ಕಿತ್ತುಕೊಂಡು ಬಂದು ಗುಂಪಿನಲ್ಲಿ ಕುಳಿತು ಕಡಲೆ ಸವಿ ಸವಿದರು. ಕೆಲವರು ಚಕ್ಕಡಿಗಳಲ್ಲೇ ತೋಟಕ್ಕೆ ಬಂದು ಮತ್ತೆ ಸಂಜೆ ಮನೆಗೆ ಮರಳಿದರು.

ಸುದ್ದಿ ಓದಿ