ಪಿ.ಎಮ್. ಸ್ವ-ನಿಧಿ: ಬೀದಿ ಬದಿ ವ್ಯಾಪಾರಿಗಳಿಗೆ ಶಾಸಕ ಕತ್ತಿ ಬೋರ್ಡಗಳ ವಿತರಣೆ
ಸಂಕೇಶ್ವರ 11: ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಯೋಜನೆಯಡಿಯಲ್ಲಿ ಒಟ್ಟು 432 ಗುರಿಗಳಿದ್ದು, ಅದರಲ್ಲಿ 354 ಬೀದಿ ಬದಿ ವ್ಯಾಪಾರಿಗಳಿಗೆ ಬ್ಯಾಂಕಿನಿಂದ ಶೇ.7 ಬಡ್ಡಿ ಸಹಾಯಧನದಿಂದ 10,000 ರೂಪಾಯಿಗಳನ್ನು ಮಂಜೂರಾತಿ ಮಾಡಿದೆ ಎಂದು ಹುಕ್ಕೇರಿ ಮತಕ್ಷೇತ್ರದ ಶಾಸಕ ನೀಖೀಲ ಉಮೇಶ ಕತ್ತಿ ಹೇಳಿದರು.
ಬೀದಿ ಬದಿ ವ್ಯಾಪಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಸಾಲದ ಸಂದಾಯ ಮಾಡುವ ಅವಧಿ ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಒಂದು ವರ್ಷದ ಅವಧಿಯೊಳಗಾಗಿ ಬೀದಿ ಬದಿ ವ್ಯಾಪಾರಿಗಳು ಸಾಲ ಪಡೆದ ಹಣವನ್ನು ಹಿಂದಿರುಗಿಸಿದ್ದಲ್ಲಿ 2 ನೇ ಹಂತದ ಸಾಲ ರೂ. 20,000 134 ವ್ಯಾಪಾರಸ್ಥರಿಗೆ ಮಂಜೂರಾತಿ ನೀಡಲಾಗಿದೆ ಹಾಗೂ ಇದರ ಮರಳಿ ತುಂಬುವ ಅವಧಿ ಒಂದೂವರೆ ವರ್ಷ ಇದ್ದು, ಇದರಲ್ಲಿ ಬೀದಿ ಬದಿ ವ್ಯಾಪಾರಿಗಳು ಪ್ರಾಮಾಣಿಕವಾಗಿ ಪಡೆದುಕೊಂಡ ಸಾಲವನ್ನು ಮರುಪಾವತಿಸಿದರೆ, ಮೂರನೇ ಹಂತದ ಸಾಲ 50,000 ರೂಪಾಯಿಗಳು 16 ಜನರಿಗೆ ಮೂರು ವರ್ಷದ ಅವಧಿಯ ವರೆಗೆ ಸಾಲ ಭರಣಾ ಮಾಡಬೇಕೆಂದು ಹೇಳಿದರು.
ಪ್ರಧಾನ ಮಂತ್ರಿ ಸ್ವಾಸ್ಥ್ಯ ಬೀಮಾ ಯೋಜನೆಯ ಲಾಭವನ್ನು ಮತ್ತು ಜೀವನ ಜ್ಯೋತಿ ಯೋಜನೆ, ಶ್ರಮಧನ ಯೋಜನೆ, ಈ ಯೋಜನೆಗಳನ್ನು ತಾವು ಸರಿಯಾಗಿ ಬಳಸಿಕೊಂಡು ತಮ್ಮ ಕುಟುಂಬ ನಿರ್ವಹಣೆ ಮಾಡಬೇಕೆಂದು ಶಾಸಕ ಕತ್ತಿ ಇವರು ಬೀದಿ ವ್ಯಾಪಾರಿಗಳಿಗೆ ಹೇಳಿದರು.
ಸಮಾರಂಭದಲ್ಲಿ ಪುರಸಭೆಯ ಸದಸ್ಯ ನಂದು ಮುಡಸಿ, ಇವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆಯು ಸಹ ಪುರಸಭೆ ಭವನದಲ್ಲಿ ನಡೆಯಿತು. ಸಾರ್ವಜನಿಕರಿಗೆ ಸರಿಯಾಗಿ ಬೇಗನೆ ಮನೆ ಉತಾರಗಳನ್ನು ನೀಡುವುದರಲ್ಲಿ ಪುರಸಭೆಯ ಅಧಿಕಾರಿಗಳ ಭ್ರಷ್ಟಾಚಾರಗಳನ್ನು ಎಳೆಎಳೆಯಾಗಿ ಬಿಡಿಸಿ ಶಾಸಕರ ಮುಂದೆ ಸಂಕೇಶ್ವರ ಜನತೆಯ ಕಾರ್ಯಗಳನ್ನು ಅವರ ಮುಂದೆ ಇಟ್ಟು ಅಧಿಕಾರಿಗಳ ಮೇಲೆ ಹರಿಹಾಯ್ದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಪುರಸಭೆಯ ಸದಸ್ಯರಿಗೆ ಕವಡೆ ಕಾಸಿನ ಕಿಮ್ಮತ್ತವಿಲ್ಲವೆಂದು ಮುಡಸಿಯವರು ಶಾಸಕರ ಮುಂದೆ ಜನತೆಯ ಅಳಲನ್ನು ತೋಡಿಕೊಂಡರು, ಪುರಸಭೆಯ ಮುಖ್ಯಾಧಿಕಾರಿ ಪ್ರಕಾಶ ಮಠದ ಇವರು ಬೆಳಗಿನ ಜಾವದಲ್ಲಿ ನಗರದ ಸ್ವಚ್ಛತೆಯ ಬಗ್ಗೆ ಕುಡಿಯುವ ನೀರಿನ ಬಗ್ಗೆ ತಾವು ನಗರದಲ್ಲಿ ಸುತ್ತಾಡಬೇಕೆಂದು ಇನ್ನೊರ್ವ ಸದಸ್ಯ ಸುನೀಲ ಅಣ್ಣಸಾಹೇಬ ಪರ್ವತರಾವ ಇವರು ಸಹ ಅಧಿಕಾರಿಗಳ ನಿರ್ಲಕ್ಷತನ ಧೋರಣೆಯಿಂದ ಜನತೆಯ ಮನೆ ಉತಾರಗಳು ಮನೆ ಕರಗಳು, ಸರಿಯಾಗಿ ಅಧಿಕಾರಿಗಳು ಜನತೆಯೊಂದಿಗೆ ಸಹಕರಿಸುತ್ತಿಲ್ಲವೆಂದು ಅವರು ಸಹ ಶಾಸಕರ ಮುಂದೆ ಪುರಸಭೆಯ ಎಲ್ಲ ಸದಸ್ಯರು ಬೊಬ್ಬೆ ಹೊಡೆದರು ಸಹ ಕ್ಯಾರೆ ಅನ್ನುವುದಿಲ್ಲವೆಂದು ಖಡಾ ಖಂಡಿತವಾಗಿ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಶಾಸಕರ ಮುಂದೆ ತೋಡಿಕೊಂಡರು.
ಇನ್ನು ಮುಂದೆ 20 ದಿನಗಳಲ್ಲಿ ನಗರದ ಸ್ವಚ್ಛತೆಯಾಗಲಿ, ಜನತೆಯ ಸೇವೆಯನ್ನು ಬೇಗನೆ ಮಾಡಿಕೊಳ್ಳದೇ ಇದ್ದಲ್ಲಿ ತಮ್ಮ ಮೇಲೆ ನಿರ್ದಾಕ್ಷಿಣ ಕ್ರಮ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ತಮ್ಮ ಬಗ್ಗೆ ದೂರು ನೀಡಲಾಗುವುದು ಎಂದು ಎಲ್ಲ ಸದಸ್ಯರಿಗೆ ಹೇಳಿದರು.
ನಗರದ ಮಾಜಿ ಪುರಸಭೆಯ ಅಧ್ಯಕ್ಷ ಗಣ್ಯ ವ್ಯಕ್ತಿ ಅಪ್ಪಾಸಾಹೇಬ ಶಿರಕೋಳಿ, ಇವರ ಮಾರ್ಗದರ್ಶನದಲ್ಲಿ ಸಭೆಯು ಜರುಗಿತು. ಸಭೆಯಲ್ಲಿ ಪುರಸಭೆ ಸದಸ್ಯರಾದ ವಿನೋದ ನಾಯಿಕ, ಸಂಜಯ ಶಿರಕೋಳಿ, ರೋಹನ ನೇಸರಿ ಪಿಂಟೂ ಪರೀಟ, ಮೊದಲಾದವರು ಉಪಸ್ಥಿತರಿದ್ದರು.