ಸಂಕೇಶ್ವರ

ಸಂಕೇಶ್ವರ ಪುರಸಭೆ ಮಾಜಿ ಅಧ್ಯಕ್ಷೆ ನಿರ್ಮಲಾ ನಷ್ಟೀ ವಿಧಿವಶ

ಸಂಕೇಶ್ವರ ಪುರಸಭೆ ಮಾಜಿ ಅಧ್ಯಕ್ಷೆ ನಿರ್ಮಲಾ ನಷ್ಟೀ ವಿಧಿವಶ

ಸಂಕೇಶ್ವರ 17: ಮಾಜಿ ಪುರಸಭೆ ಅಧ್ಯಕ್ಷೆ ಹಾಗೂ ನಗರದ ಪಾಟೀಲ ಗಲ್ಲಿಯ ನಿವಾಸಿಯಾಗಿದ್ದ ನಿರ್ಮಲಾ ದುಂಡಪ್ಪಾ ನಷ್ಠಿ (87) ಅವರು ದಿ. 16ರಂದು ರಾತ್ರಿ 9 ಗಂಟೆಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. 

ಮೃತರು ಹಾಲಿ ಪುರಸಭೆ ಸದಸ್ಯ ಸಂಜಯ ನಷ್ಟೀ ಅವರ ತಾಯಿಯಾಗಿದ್ದರು. ಮೃತರಿಗೆ ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗ ಹೊಂದಿದ್ದಾರೆ. ಮೃತರ ಅಂತ್ಯಕ್ರಿಯೆಯು ನಗರದ ರುದ್ರಭೂಮಿಯಲ್ಲಿ ಗುರುವಾರ ಮಧ್ಯಾಹ್ನ ನೆರವೇರಿತು. 


ಸುದ್ದಿ ಓದಿ