ರಾಷ್ಟ್ರೀಯ

ಶಿವಸೇನೆಯ ಮುಖ್ಯ ವಕ್ತಾರರಾಗಿ ಸಂಜಯ್‌ ರಾವತ್‌ ನೇಮಕ

ಶಿವಸೇನೆಯ ಮುಖ್ಯ ವಕ್ತಾರರಾಗಿ ಸಂಜಯ್‌ ರಾವತ್‌ ನೇಮಕ

ಮುಂಬೈ, ಸೆಪ್ಟೆಂಬರ್ 8: ಶಿವಸೇನೆಯ ನೂತನ ಮುಖ್ಯ ವಕ್ತಾರರಾಗಿ ರಾಜ್ಯಸಭಾ ಸದಸ್ಯ ಸಂಜಯ್‌ ರಾವತ್‌ ಅವರನ್ನು ನೇಮಿಸಿ ಪಕ್ಷ ಆದೇಶ ಹೊರಡಿಸಿದೆ. 

ಜೊತೆಗೆ, ಲೋಕಸಭಾ ಸದಸ್ಯರಾದ ಅರವಿಂದ ಸಾವಂತ್‌ ಮತ್ತು ಧೈರ್ಯಶೀಲ್‌ ಮಾನೆ, ರಾಜ್ಯಸಭಾ ಸದಸ್ಯರಾದ ಪ್ರಿಯಾಂಕಾ ಚತುರ್ವೇದಿ, ಮಹಾರಾಷ್ಟ್ರ ಸಚಿವರಾದ ಉದಯ್‌ ಸಾಮಂತ್‌, ಅನಿಲ್‌ ಪರಬ್‌, ಗುಲಾಬ್‌ರಾವ್‌ ಪಾಟೀಲ್‌, ಶಾಸಕರಾದ ಸುನೀಲ್‌ ಪ್ರಭು ಮತ್ತು ಪ್ರತಾಪ್‌ ಸರ್ನಾಯಕ್‌, ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್‌ ಮತ್ತು ಹಿರಿಯ ನಾಯಕ ನೀಲ್‌ ಗೋಹ್ರೆ ಅವರನ್ನು ಕೂಡ ಪಕ್ಷದ ವಕ್ತಾರರನ್ನಾಗಿ ನೇಮಿಸಲಾಗಿದೆ.

ಸುದ್ದಿ ಓದಿ