ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ವಿತರಣೆ
ಬೈಲಹೊಂಗಲ 30: ಪಟ್ಟಣದ ಆಯ್‍ಎಂಎ ಹಾಲನಲ್ಲಿ ರೋಟರಿ ಸಂಸ್ಥೆ ಹಾಗೂ ಇನ್ನರ್‍ವ್ಹೀಲ್ ಕ್ಲಬ್ ಇವುರುಗಳ ಸಂಯುಕ್ತ ಆಶ್ರಯದಲ್ಲಿ ರೋಟರಿಯ ಎಂಎಚ್‍ಎಂ ಪ್ರಾಜೆಕ್ಟ್ ಅಡಿಯಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡಗಳನ್ನು ವಿತರಿಸಲಾಯಿತು.ರೋಟರಿ ಜಿಲ್ಲಾ ಪ್ರಾಂತ್ಯಪಾಲ ಸಂಗ್ರಾಮ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೈಲಹೊಂಗಲ ತಾಲೂಕಿನಲ್ಲಿ ರೋಟರಿ ಸಂಸ್ಥೆಯ ಮಾಡಿದ ಜನಪರ ಕಾರ್ಯಕ್ರಗಳನ್ನು ಮೆಚ್ಚಿಕೊಂಡರು. ಪಟ್ಟಣದಲ್ಲಿ ಬ್ಲಡ್ ಬ್ಯಾಂಕ್ ಆರಂಭಿಸುವ ಅಗತ್ಯತೆ ಇದ್ದು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಜಿಲ್ಲಾ ರೋಟರಿ ಮನೋಜ ಸುತಾರ, ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ಡಾ. ವಿದ್ಯಾ ಗದಗ, ಸುಜಾತ ಮಹಾಲೆ, ಡಾ ರಾಜೇಶ್ವರಿ ಕುಲಕರ್ಣಿ, ರೋಟರಿ ಸದಸ್ಯರಾದ ನಾರಾಯಣ ಫಾಸಲಕರ, ಸುರೇಶ ಉಡುಪಿ, ಪ್ರಮೋದಕುಮಾರ ವಕ್ಕುಂದಮಠ, ಡಾ.ಮಹಾಂತೇಶ ಕಳ್ಳಿಬಡ್ಡಿ, ಮಹೇಶ ಬೆಲ್ಲದ, ಮಹಾಂತೇಶ ಬಡಸ. ಡಾ ಮನೋಜ ಘಾಣೇಕರ, ಡಾ. ಸಂಗೊಳ್ಳಿ, ಸುನಿಲ ಪಾಟೀಲ, ಬೊಮ್ಮ ನಾಯಕ ಪಾಟೀಲ, ಡಾ.ಸಿ ಬಿ ಗಣಾಚಾರಿ, ಡಾ. ನಾಗರಾಜ ಹಲಸಗಿ ಹಾಗೂ ರೋಟರಿ ಮತ್ತು ಇನ್ನರವ್ಹೀಲ್ ಕ್ಲಬ್ ಸದಸ್ಯರು ಇದ್ದರು.ರೋಟರಿ ಅಧ್ಯಕ್ಷ ಡಾಕ್ಟರ್ ಮಹಾಂತೇಶ್ ಗದಗ ಸ್ವಾಗತಿಸಿದರು. ರಾಜ ಮೆಟಗುಡ್ಡ ಪರಿಚಯಿಸಿದರು. ಶಿವಶಂಕರ ತಟವಟಿ ವಂದಿಸಿದರು. ಸಂಜಯ ಮಹಾಲೆ ನಿರೂಪಿಸಿದರು.