ಚಿಕ್ಕೋಡಿ

ಬಡ ಜನರ ಅರ್ಥಿಕ ಅಭಿವೃದ್ಧಿಗೆ ಪತ್ತಿನ ಸಂಘಗಳು ಪೂರಕ: ಕಿರಣ್ ಕೋರೆ

ಬಡ ಜನರ ಅರ್ಥಿಕ ಅಭಿವೃದ್ಧಿಗೆ ಪತ್ತಿನ ಸಂಘಗಳು ಪೂರಕ: ಕಿರಣ್ ಕೋರೆ

ಮಾಂಜರಿ 02: ಗ್ರಾಮೀಣ ಭಾಗದ ಬಡ ಜನರ ಅರ್ಥಿಕ ಪರಿಸ್ಥಿತಿ ಸುಧಾರಣೆಗೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪೂರಕವಾಗಿವೆ ಎಂದು ಚಿಕ್ಕೋಡಿ  ತಾಲೂಕಿನ ಅಂಕಲಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕಿರಣ್ ಕೋರೆ ಹೇಳಿದರು. 

 ಅವರು ಇಂದು ಅಂಕಲಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಡಿವಿಡಂಟ್ ವಿತರಣೆ ಮಾಡಿ ಮಾತನಾಡಿದರು. ಸಹಕಾರ ಸಂಘಗಳಲ್ಲಿ ಸುಲಭ ಸಾಲದ ಸೌಲಭ್ಯ ಇರುತ್ತದೆ. ಇದು ಬಡ ಜನರಿಗೆ ಹೆಚ್ಚು ಅನುಕೂಲಕರವಾಗಿರುತ್ತದೆ. ಬೀದಿಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಸ್ಥರು, ಬಡ ಜನರಿಗೆ ಸಾಲ ಸೌಲಭ್ಯ ಕಲ್ಪಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಅವರು ಹೇಳಿದರು. 

ಸಂಘದ ಉಪಾಧ್ಯಕ್ಷ ಮಹಾಂತೇಶ್ ಡಂಗ ನಿರ್ದೇಶಕರಾದ ಚನ್ನಗೌಡ ಪಾಟೀಲ್, ಶಿವಗೌಡ ಪಾಟೀಲ್, ಬಾಲಚಂದ್ರ ತಳಕೇರಿ, ಗಜಾನನ ಗುಂಡಕಲ್ಲೆ, ಪಿಂಟು ಹಿರೆಕುರುಬರ, ಅಶೋಕ್ ಶಿತೊಳೆ, ರಾಜು  ಬುಬನಾಳೆ,  ಸಂತೋಷ್ ಲೋಕರೇ,  ಸಂತೋಷ್ ಮಗದುಮ್ ಹಾಗೂ ಇನ್ನಿತರರು ಹಾಜರಿದ್ದರು. ಸಂಸ್ಥೆಯ ಕಾರ್ಯದರ್ಶಿ ಗೀರೀಶ್ ಪಾಟೀಲ್ ಸ್ವಾಗತಿಸಿದರು. ಅಪ್ಪಯ್ಯ ಖಟಾವೆ ವಂದಿಸಿದರು. 


ಸುದ್ದಿ ಓದಿ