ಸಿಂಧಗಿ

ಸಂಗೀತ ರಸಮಂಜರಿ ಕಾರ್ಯಕ್ರಮ

ಸಂಗೀತ ರಸಮಂಜರಿ ಕಾರ್ಯಕ್ರಮ

ಸಿಂದಗಿ; ಕಲೆ ಎಂಬವುದು ಯಾರೋಬ್ಬರ ಸೋತ್ತಲ್ಲ ಎಂದು ಯೂಟ್ಯೂಬ್  ಕಲಾವಿದ ಚಂದಕಾಂತ ಬುದಿಹಾಳ ಹೇಳಿದರು.

ಸಿಂದಗಿ ತಾಲೂಕಿನ ಹಂದಿಗಿನೂರ ಗ್ರಾಮದಲ್ಲಿ ನಡೆದ ನಟಕೇಸರಿ ಹಂದಿಗಿನೂರ ಸಿದ್ದರಾಮಪ್ಪ. ಹಾಗೂ  ಕನ್ನಡದ  ಗಾನಗಾರುಡಿಗ ಘಝಲ್ ಗಾಯಕ ರವಿ ಹಂದಿಗಿನೂರ ಇವರ ಸ್ಮರಣಾರ್ಥ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿ ಮಾತನಾಡಿದವರು. 

ನಾನು ಯೂಟ್ಯೂಬ್ ದಲ್ಲಿ ಬರುವ ಕಾರ್ಯಕ್ರಮವನ್ನು ನೋಡುತ್ತೀದ್ದೆ. ಆಗ  ನನ್ನ ಮನದಲ್ಲಿ ಆಲೋಚನೆ ಬಂತು ನಾನು ಯಾಕೆ ಈ ತರದ ನಗೆಚಟಾಕಿಯ ಕಾರ್ಯಕ್ರಮವನ್ನು ಮಾಡಬಾರದು ಎಂದು ಮಾಡಿದೆ ಅದಕ್ಕೆ ಅಭಿಮಾನಿಗಳು ನನಗೆ ಜೊತೆಯಾಗಿ ಉತ್ಸಾಹವನ್ನು ತುಂಬಿದರು. ಅದೇ ಉತ್ಸಾಹ ಇಂದು ನನ್ನು ಇಂತಹ ಕಲಾವಿದರ ಊರಲ್ಲಿ ಸನ್ಮಾನವನ್ನು ಮಾಡಿಸಿಕೊಳ್ಳವ ಭಾಗ್ಯ ಬಂದಿದೆ ಎಂದು ಹರ್ಷವ್ಯೆಕ್ತಪಡಿಸಿದರು. ಸನ್ಮಾನದಲ್ಲಿ ಸಿಂದಗಿಯ ವಿಯಕುಮಾರ.ಪತ್ತಾರ, ರಾಂಪುರದ ಹೈದರ ಚಟ್ಟರಕಿ,ಮುರಡಿಯ ಮೌನೇಶ ಬಡಿಗೇರ ವೇದಿಕೆಯ ಮೇಲಿದ್ದರು 

ಸುದ್ದಿ ಓದಿ