ಮನರಂಜನೆ

ಕಿಕ್-2 ದಲ್ಲಿ ಸಲ್ಮಾನ್- ಜಾಕ್ವೆಲಿನ್ ನಟನೆ

ಕಿಕ್-2 ದಲ್ಲಿ ಸಲ್ಮಾನ್- ಜಾಕ್ವೆಲಿನ್ ನಟನೆ

ಮುಂಬೈ, ಆಗಸ್ಟ್ 12: ಬಾಲಿವುಡ್ ನಟಿ ಮತ್ತು ಮಾಜಿ ಮಿಸ್ ಶ್ರೀಲಂಕಾ ಜಾಕ್ವೆಲಿನ್ ಫೆರ್ನಾಂಡೆಜ್ ಸೂಪರ್ ಹಿಟ್ ಚಿತ್ರ 'ಕಿಕ್' ನ ಮುಂದುವರೆದ ಭಾಗದಲ್ಲಿ ಕೆಲಸ ಮಾಡಲಿದ್ದಾರೆ. 

ಜಾಕ್ವೆಲಿನ್ ಫನರ್ಾಂಡಿಸ್ ಆಗಸ್ಟ್ 11 ರಂದು ಜನ್ಮದಿನವನ್ನು ಆಚರಿಸಿಕೊಂಡರು. ಈ ವಿಶೇಷ ಸಂದರ್ಭದಲ್ಲಿ, ಚಲನಚಿತ್ರ ನಿಮರ್ಾಪಕ ಸಾಜಿದ್ ನಾಡಿಯಾಡ್ವಾಲಾ ಅವರಿಂದ ಜಾಕ್ವೆಲಿನ್ ಅವರಿಗೆ ದೊಡ್ಡಡ ಅಚ್ಚರಿ ಕಾದಿತ್ತು. ಕಿಕ್ 2 ಚಿತ್ರದಲ್ಲಿ ಸಲ್ಮಾನ್ ಖಾನ್ ಎದುರು ಜಾಕ್ವೆಲಿನ್ ನಟಿಸಲು ಸಹಿ ಹಾಕಿದ್ದಾರೆ. 

ಈ ಮಾಹಿತಿಯನ್ನು ಸಾಜಿದ್ ನಾಡಿಯಾಡ್ವಾಲಾ ಮೊಮ್ಮಗನ ಟ್ವಿಟ್ಟರ್ ಖಾತೆಯೊಂದಿಗೆ ಹಂಚಿಕೊಂಡಿದ್ದಾರೆ. "ಜಾಕ್ವೆಲಿನ್ ಫನರ್ಾಂಡಿಸ್ ಅವರ ಜನ್ಮದಿನದಂದು ಸಾಜಿದ್ ನಾಡಿಯಾಡ್ವಾಲಾ ಅವರು ಕಿಕ್ 2 ಚಿತ್ರಕಥೆಯನ್ನು ಮುಂಜಾನೆ 4 ಗಂಟೆಗೆ ಮುಗಿಸಿದ್ದು ತುಂಬಾ ಖುಷಿ ನೀಡಿದೆ" ಎಂದು ಟ್ವೀಟ್ ನಲ್ಲಿ ಬರೆಯಲಾಗಿದೆ. ವದರ್ಾ ನಾಡಿಯಾಡ್ವಾಲಾ, ಈ ದೊಡ್ಡ ಸುದ್ದಿಗೆ ಧನ್ಯವಾದಗಳು. ಸಲ್ಮಾನ್ ಮತ್ತು ಜಾಕ್ವೆಲಿನ್ ಒಟ್ಟಿಗೆ ನೋಡಲು ಅಭಿಮಾನಿಗಳು ಹಾಗೂ ನಮ್ಮ ಕುಟುಂಬ ಸಹ ಕಾತುರವಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜಾಕ್ವೆಲಿನ್ ಕಿಕ್ ಆರಂಭಕ್ಕಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.  

2014 ರಲ್ಲಿ ಬಿಡುಗಡೆಯಾದ 'ಕಿಕ್' ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಜಾಕ್ವೆಲಿನ್ ಫನರ್ಾಂಡೀಸ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಸಾಜಿದ್ ನಾಡಿಯಾಡ್ವಾಲಾ ನಿದರ್ೆಶನದ ಚಿತ್ರದಲ್ಲಿ ರಂದೀಪ್ ಹೂಡಾ ಕೂಡ ಕಾಣಿಸಿಕೊಂಡಿದ್ದಾರೆ. ಈ ಚಿತ್ರದೊಂದಿಗೆ ನಿದರ್ೆಶಕರಾಗಿ ಸಾಜಿದ್ ತಮ್ಮ ಇನ್ನಿಂಗ್ಸ್ ಪ್ರಾರಂಭಿಸಿದರು.  

 

ಸುದ್ದಿ ಓದಿ