2ನೇ ಮಗುವಿನ ನಿರೀಕ್ಷೆಯಲ್ಲಿ ಸೈಫ್ ಕರೀನಾ ದಂಪತಿ?
ಮುಂಬೈ, ಆಗಸ್ಟ್ 12: ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ದಂಪತಿ ಸುರ್ಪ್ರೈಸ್ ಸ್ಸುದ್ದಿಯೊಂದನ್ನು ನೀಡಿದ್ದು, ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿರುವ ಸೂಚನೆ ನೀಡಿದ್ದಾರೆ.
ನಮ್ಮ ಕುಟುಂಬಕ್ಕೆ ಮತ್ತೊಂದು ಸೇರ್ಪಡೆ ನಿರೀಕ್ಷೆಯಿದೆ ಎಂದು ಘೋಷಿಸಲು ನಾವು ತುಂಬಾ ಸಂತೋಷಪಟ್ಟಿದ್ದೇವೆ!! ಪ್ರೀತಿ ಮತ್ತು ಬೆಂಬಲಕ್ಕಾಗಿ ನಮ್ಮ ಎಲ್ಲ ಹಿತೈಷಿಗಳಿಗೆ ಧನ್ಯವಾದಗಳು " ಎಂದು ದಂಪತಿ ತಿಳಿಸಿದ್ದಾರೆ.
2012ರಲ್ಲಿ ಸೈಫ್ ಅಲಿ ಖಾನ್ ಜೊತೆ ವಿವಾಹವಾಗಿದ್ದ ಕರೀನಾ ಕಪೂರ್, 2016ರಲ್ಲಿ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದರು. ಗಂಡು ಮಗುವಿಗೆ ತೈಮೂರ್ ಅಲಿ ಖಾನ್ ಎಂದು ನಾಮಕರಣ ಸಹ ಮಾಡಿದ್ದರು
ಇಷ್ಟು ದಿನ ಲಾಕ್ಡೌನ್ ಇದ್ದ ಕಾರಣ ಶೂಟಿಂಗ್, ಸಿನಿಮಾ ಹಾಗೂ ಇನ್ನಿತರ ಯಾವುದೇ ಕಾರ್ಯಕ್ರಮಗಳು ಇರಲಿಲ್ಲ. ಪತಿ ಸೈಫ್ ಹಾಗೂ ಮಗ ತೈಮೂರ್ ಜೊತೆ ಕಾಲ ಕಳೆಯುತ್ತಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಈ ಕುರಿತು ಹೊಸ ಹೊಸ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದರು. ಪ್ರಸ್ತುತ, ಅಮೀರ್ ಖಾನ್ ಜೊತೆ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಕರೀನಾ ನಟಿಸಿದ್ದು, ಚಿತ್ರೀಕರಣ ಸಹ ಮುಗಿದಿದೆ. ಇದಾದ ಬಳಿಕ, ಯಾವುದೇ ಹೊಸ ಸಿನಿಮಾಗೆ ಸಹಿ ಹಾಕಿಲ್ಲ.