ಧಾರವಾಡ - ಹುಬ್ಬಳ್ಳಿ

ಧಾರವಾಡ ಜಿಲ್ಲಾ ಅಧ್ಯಕ್ಷರಾಗಿ ಸಹದೇವಪ್ಪ ಮಾಳಗಿ ನೇಮಕ

ಧಾರವಾಡ ಜಿಲ್ಲಾ ಅಧ್ಯಕ್ಷರಾಗಿ ಸಹದೇವಪ್ಪ ಮಾಳಗಿ ನೇಮಕ

ಲೋಕದರ್ಶನ ವರದಿ 

  ಹುಬ್ಬಳ್ಳಿ 3:   ಮಾದಾರ ಚೆನ್ನಯ್ಯ ಸೇವಾ ಸಮಿತಿ, ಕರ್ನಾಟಕ ರಾಜ್ಯ ಸಮಿತಿಯ ಧಾರವಾಡ ಜಿಲ್ಲಾ ನೂತನ ಅಧ್ಯಕ್ಷರಾಗಿ ಸಹದೇವಪ್ಪ ಮಾಳಗಿ ಅವರನ್ನು ನೇಮಕ ಮಾಡಲಾಗಿದೆ. ಪರಮ ಪೂಜ್ಯ ಡಾ. ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಯವರು, ಪೀಠಾಧ್ಯಕ್ಷರು, ಶಿವಶರಣ ಮಾದಾರ ಚನ್ನಯ್ಯ ಗುರುಪೀಠ, ಚಿತ್ರದುರ್ಗ, ಅವರ ಪಾವನ ಮಾರ್ಗದರ್ಶನ ಹಾಗೂ ದಿವ್ಯ ಆಶೀರ್ವಾದದೊಂದಿಗೆ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಸೇವಾ ಸಮಿತಿಯ ರಾಜ್ಯಾಧ್ಯಕ್ಷರಾದ ಹೂಡಿ ಮಂಜುನಾಥ ಅವರ ಅನುಮೋದನೆಯ ಮೇರೆಗೆ ಈ ನೇಮಕಾತಿ ನಡೆದಿದ್ದು, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕೊಂಡಪಲ್ಲಿ ಅವರು ನೇಮಕಾತಿ ಆದೇಶ ಪ್ರಕಟಿಸಿದ್ದಾರೆ.  

ಧಾರವಾಡ ಜಿಲ್ಲೆಯಲ್ಲಿ ಸಮಿತಿಯ ಸಂಘಟನೆಯನ್ನು ತಾಲೂಕು, ವಿಧಾನಸಭಾ ಕ್ಷೇತ್ರ ಹಾಗೂ ಗ್ರಾಮ ಮಟ್ಟದಲ್ಲಿ ಬಲಪಡಿಸುವುದು, ಯುವಕರು ಮತ್ತು ವಿದ್ಯಾರ್ಥಿಗಳನ್ನು ಸಂಘಟನೆಯ ಮುಖ್ಯವಾಹಿನಿಗೆ ತರುವುದು ಹಾಗೂ ಶೈಕ್ಷಣಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಪೂರಕವಾದ ಸಮಾಜಮುಖಿ ಚಟುವಟಿಕೆಗಳನ್ನು ವಿಸ್ತರಿಸುವ ಜವಾಬ್ದಾರಿಯನ್ನು ಸಹದೇವಪ್ಪ ಮಾಳಗಿ ಅವರಿಗೆ ವಹಿಸಲಾಗಿದೆ. ರಾಜ್ಯ ಸಮಿತಿಯ ಮಾರ್ಗದರ್ಶನ ಹಾಗೂ ಸಂಘಟನೆಯ ನಿಯಮಾವಳಿಗಳಿಗೆ ಅನುಗುಣವಾಗಿ ನಿಷ್ಠೆ, ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸಿ, ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ರಾಜ್ಯ ಸಮಿತಿ ಆಶಿಸಿದೆ. 


ಸುದ್ದಿ ಓದಿ