ಧಾರವಾಡ - ಹುಬ್ಬಳ್ಳಿ

ಲಲಿತ ಪ್ರಬಂಧಗಳು ಓದುಗರ ಮನಸ್ಸಿಗೆ ಆಹ್ಲಾದದ ಅನುಭವ ನೀಡುತ್ತವೆ

ಲಲಿತ ಪ್ರಬಂಧಗಳು ಓದುಗರ ಮನಸ್ಸಿಗೆ ಆಹ್ಲಾದದ ಅನುಭವ ನೀಡುತ್ತವೆ


ಧಾರವಾಡ 03 :  ಲಲಿತ ಪ್ರಬಂಧಗಳು ಓದುಗರ ಮನಸ್ಸಿನ ಮೇಲೆ ಆಹ್ಲಾದದ ಅನುಭವ ನೀಡುತ್ತವೆ. ಅವು ಹಾಸ್ಯಕಷ್ಟೆ  ಸೀಮಿತವಲ,್ಲ ಬದುಕಿನ ಕಟುಸತ್ಯಗಳನ್ನು ಅತ್ಯಂತ ಸರಳವಾಗಿ, ರಂಜನೀಯವಾಗಿ ವಿವರಿಸುವ ಅಗಾಧ ಶಕ್ತಿಯನ್ನು ಹೊಂದಿವೆ ಎಂದು ಮೇಜರ ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು.  

ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, ಅಥಣಿಯ ವಿಮೋಚನಾ ಪ್ರಕಾಶನ ಸಹಯೋಗದಲ್ಲಿ ಆಯೋಜಿಸಿದ್ದ ವೆಂಕಟೇಶ ಮಾಚಕನೂರ ಅವರ  ಪ್ರಬಂಧ ಸಂಕಲನ ‘ನಿರಾವರಣ’ ಲಲಿತ ಪ್ರಬಂಧ ಲೋಕಾರೆ​‍್ಣ ಸಮಾರಂಭದಲ್ಲಿ ಕೃತಿ ಬಿಡುಗಡೆ ಮಾಡಿ ಮಾತನಾಡಿದರು. 

ಕನ್ನಡ ಸಾಹಿತ್ಯದಲ್ಲಿ ಲಲಿತ ಪ್ರಬಂಧಗಳಿಗೆ ವಿಶಿಷ್ಟ ಸ್ಥಾನವಿದೆ. ಗೊರೂರು, ಎ.ಎನ್‌. ಮೂರ್ತಿರಾಯ, ನಾ. ಕಸ್ತೂರಿ, ಬೇಂದ್ರೆ ಅವರಂತಹ ಮೇರು ಸಾಹಿತಿಗಳು ಲಲಿತ ಪ್ರಬಂಧ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ವೆಂಕಟೇಶ ಮಾಚಕನೂರ ಅವರ ‘ನಿರಾವರಣ’ ಕೃತಿ 20 ಸುಲಲಿತ ಪ್ರಬಂಧಗಳನ್ನು ಹೊಂದಿದ್ದು, ಓದುಗರ ಮೇಲೆ ಅಚ್ಚಳಿಯದ ಪ್ರಭಾವ ಬೀರುವಂತವುಗಳಾಗಿವೆ.  ಅವೆಲ್ಲಾ ವಾಸ್ತವತೆಗೆ ತೀರಾ ಹತ್ತಿರವಾಗಿವೆ. ಧಾರವಾಡದ ಎಮ್ಮೆಗಳು, ಕ್ಯೂ ಪ್ಲೀಜ, ಗುದ್ಧಿ ಕಟ್ಟುವುದು ಮುಂತಾದವುಗಳು ಮನೋಜ್ಞವಾಗಿ ಮೂಡಿ ಬಂದಿವೆ.

ಜೀವನದ ಚಿಕ್ಕ ಚಿಕ್ಕ ಘಟನೆಗಳನ್ನು ವೆಂಕಟೇಶ ಮಾಚಕನೂರ ಅವರು ತಮ್ಮ ‘ನಿರಾವರಣ’ ಕೃತಿಯಲ್ಲಿ ಸೆರೆಹಿಡಿದಿದ್ದಾರೆ. ತಪಸ್ಸು ಲಲಿತ ಪ್ರಬಂಧ ಅತ್ಯುತ್ತಮವಾಗಿದೆ. ಎಲ್ಲಾ ಪ್ರಬಂಧಗಳಲ್ಲಿ ಉತ್ತರ ಕರ್ನಾಟಕದ ಆಡು ಭಾಷೆಯನ್ನು ಬಳಕೆ ಮಾಡಿರುವುದು ವಿಶೇಷವಾಗಿದೆ. ಭಾಷಾಸೊಗಡು ಸಹ ಅದ್ಭುತವಾಗಿದೆ ಎಂದು ಹೇಳಿದರು. 

ಸಿದ್ಧರಾಮ ಮನಹಳ್ಳಿ ಕೃತಿ ಪರಿಚಯಿಸಿ ಮಾತನಾಡಿ, ವೆಂಕಟೇಶ ಮಾಚಕನೂರ ಅವರ ‘ನಿರಾವರಣ’ ಲಲಿತ ಪ್ರಬಂಧ ವೈವಿಧ್ಯಮಯ ವಿಷಯ ಒಳಗೊಂಡಿದೆ. ಅವು ಜೀವನಾನುಭವ, ವೈಚಾರಿಕ ಚಿಂತನೆಯ ಹಿನ್ನೆಲೆಯನ್ನೊಳಗೊಂಡಿವೆ ಮತ್ತು ಸಮಾಜಕ್ಕೊಂದು ಒಳ್ಳೆಯ ಸಂದೇಶ ನೀಡುತ್ತವೆ. ‘ಗುರುಬ್ರಹ್ಮ’ ಎಂಬ ಲೇಖನ ಶಿಕ್ಷಕರ ಇಂದಿನ ವೃತ್ತಿ ಸಂಕೀರ್ಣ ಸ್ಥಿತಿ ಕುರಿತು ಮನೋಜ್ಞವಾಗಿ ಮೂಡಿ ಬಂದಿದೆ.

ವೆಂಕಟೇಶ ಮಾಚಕನೂರ ಶಿಕ್ಷಣ ಇಲಾಖೆಯಲ್ಲಿ ಆಯುಕ್ತರಾಗಿದ್ದಾಗ  ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಪುಸ್ತಕ ಓದುವ ಸಂಸ್ಕೃತಿ ಬೆಳೆಸಲು  ವಿನೂತನ ಪ್ರಯೋಗಗಳನ್ನು ಮಾಡಿದ್ದಾರೆ ಎಂದು ಹೇಳಿದರು. 

ಕೃತಿಯ ಲೇಖಕರಾದ ವೆಂಕಟೇಶ ಮಾಚಕನೂರ ಅವರು ಮಾತನಾಡಿ, ಇದು ನನ್ನ 4ನೇ ಪ್ರಬಂಧ ಸಂಕಲನವಾಗಿದೆ. ಪುಸ್ತಕ ಓದುವ ಸಂಸ್ಕೃತಿ ಬೆಳೆಯಬೇಕು. ವಿದ್ಯಾರ್ಥಿಗಳು ಜಾಲತಾಣಗಳ ದಾಸರಾಗದೇ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕೆಂದು  ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಅಥಣಿ ವಿಮೋಚನಾ ಸಂಸ್ಥೆ ಅಧ್ಯಕ್ಷ ಬಿ.ಎಲ್‌. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳನ್ನು ಇಂದು  ಸಾಹಿತ್ಯ ಓದುವತ್ತ ಆಕರ್ಷಿಸಬೇಕಿದೆ. ಮಾಚಕನೂರು ಅವರು ಈ ಕೃತಿಯ ಲೇಖನಗಳು ಸಮಾಜ ಪರಿವರ್ತನೆ ತರಬಲ್ಲವುಗಳಾಗಿವೆ ಎಂದರು. 

ಶಂಕರ ಹಲಗತ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಎಸ್‌.ಜಿ. ಸುಬ್ಬಾಪೂರಮಠ ವಂದಿಸಿದರು. ಸೋಮಶೇಖರ ದೇವಲಾಪೂರ ಪ್ರಾರ್ಥಿಸಿದರರು. 

ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ. ಡಾ. ಧನವಂತ ಹಾಜವಗೋಳ ಹಾಗೂ ಶ್ರೀನಿವಾಸ ವಾಡಪ್ಪಿ. ಅನುರಾಧಾ ವಸ್ತ್ರದ. ಶಾಂತಲಾ ಮಾಚಕನೂರ. ಆರ್‌.ಜಿ. ತಿಮ್ಮಾಪೂರ. ಜಿ.ಸಿ. ತಲ್ಲೂರ. ಆರ್‌.ಎಸ್‌. ಮುಳ್ಳೂರ. ಡಾ. ಗುರುನಾಥ ಹೂಗಾರ. ವಿ.ಎಲ್‌. ಪಾಟೀಲ. ಡಾ. ದುರ್ಗಾದಾಸ. ಎಸ್‌. ವಿ. ಪಾಟೀಲ. ಎ.ಎಸ್‌. ಕಾಡದೇವರಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು. 


ಸುದ್ದಿ ಓದಿ