ರಾಣೆಬೆನ್ನೂರ

ರಾಣೇಬೆನ್ನೂರಲ್ಲಿ ಸಾಧನಾ ಸಮಾವೇಶ-ಒಕ್ಕೂಟಗಳ ಸೇವಾ ದೀಕ್ಷಾ ಕಾರ್ಯಕ್ರಮ

ರಾಣೇಬೆನ್ನೂರಲ್ಲಿ ಸಾಧನಾ ಸಮಾವೇಶ-ಒಕ್ಕೂಟಗಳ ಸೇವಾ ದೀಕ್ಷಾ ಕಾರ್ಯಕ್ರಮ

ರಾಣೇಬೆನ್ನೂರು:ಡಿ24 ಜೀವನ ನಿರ್ವಹಣೆಗೆ ಹಣ ಬೇಕು ಹಣವಿಲ್ಲದೆ ಯಾವುದನ್ನು ಸಾಧಿಸಲು ಸಾಧ್ಯವಾಗಲಾರದು. ದಾನ ಧರ್ಮದಿಂದ ಶಾಶ್ವತ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎನ್ನುವ ದೂರ ದೃಷ್ಟಿಯ ಮನೋಭೂಮಿಕೆ ಯುಳ್ಳ ಡಾ ವೀರೇಂದ್ರ ಹೆಗ್ಗಡೆ ಅವರು, ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಂಘಗಳನ್ನು ರಚಿಸಿ, ಅವರ ಮೂಲಕ ಆರ್ಥಿಕ ಭದ್ರತೆಯನ್ನು ಮತ್ತು ಜೀವನ ಬದುಕನ್ನು ಕಟ್ಟಿಕೊಟ್ಟಿದ್ದಾರೆ ಎಂದು ಪುಟ್ಟಯ್ಯನ ವಿರಕ್ತ ಮಠದ  ಗುರು ಬಸವ ಸ್ವಾಮೀಜಿ ನುಡಿದರು.  

ಶನಿವಾರ ಸಿದ್ದೇಶ್ವರ ನಗರದ ಕಾಕಿ ಜನಸೇವಾ  ಗಣೇಶೋತ್ಸವ ಮಂಟಪದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ. ಟ್ರಸ್ಟ್‌ ಆಯೋಜಿಸಿದ್ದ ಮಾರುತಿ ನಗರ ವಲಯ ಮಟ್ಟದ ಸಾಧನ ಸಮಾವೇಶ ಒಕ್ಕೂಟಗಳ ಸೇವಾ ದೀಕ್ಷ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. 

 ಧರ್ಮ ಕ್ಷೇತ್ರದಲ್ಲಿ ಯಾವುದೇ ಜಾತಿ ಮತ ಭಿನ್ನ ಭೇದ ಇಲ್ಲದೆ ಧರ್ಮ ಸೇವಾ ಕಾರ್ಯಗಳ ಮೂಲಕ, ಧರ್ಮಾಧಿಕಾರಿಗಳು  ಮಹಿಳೆಯರ ಬದುಕನ್ನು ಆರ್ಥಿಕವಾಗಿ ಸ್ವಾವಲಂಬನೆಗೊಳಿಸಿ, ದೇಶದಲ್ಲಿಯೇ ಮಾದರಿ ರಾಜ್ಯವನ್ನಾಗಿ ಮಾಡುವಲ್ಲಿ ಮುಂದಾಗಿರುವ ಅವರ ಈ ಸೇವಾ ಕಾರ್ಯ ಅತ್ಯಂತ ಸ್ಲಾಘನೀಯ ವಾಗಿದೆ ಎಂದರು. ಸಮಾರಂಭ ಉದ್ಘಾಟಿಸಿದ ಶಾಸಕ ಅರುಣ  ಕುಮಾರ್ ಪೂಜಾರ್ ಅವರು, ಧರ್ಮಾಧಿಕಾರಿಗಳ ಸಾಮಾಜಿಕ ಸೇವ ಕಾರ್ಯಗಳನ್ನು ಗುರುತಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು, ಡಾ ವೀರೇಂದ್ರ ಹೆಗ್ಗಡೆಯವರಿಗೆ ರಾಜ್ಯಸಭಾ ಸದಸ್ಯತ್ವ ನೀಡಿ ಗೌರವಿಸಿದ್ದಾರೆ, ಅವರ ಈ ಸಾಮಾಜಿಕ ಸೇವಾ ಕಾರ್ಯಗಳು ಸರ್ಕಾರಗಳಿಗೆ ಮಾದರಿಯಾಗಿವೆ ಎಂದರು. 

 ಪ್ರಾಸ್ಥಾವಿಕವಾಗಿ ಮಾತನಾಡಿದ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಅವರು,  1982 ರಲ್ಲಿ ರೈತರು ಹಾಗೂ ಮಹಿಳೆಯರ ಸಬಲೀಕರಣದ ಮುಂದಾಲೋಚನೆಯಿಂದ ಆರಂಭಿಸಿದ ಈ ಯೋಜನೆ ಇದಾಗಿದೆ. ರಾಜ್ಯದಲ್ಲಿ 6.03 ಲಕ್ಷ ಸ್ವಸಹಾಯ ಸಂಘಗಳಿದ್ದು, ಇದರಲ್ಲಿ 49 ಲಕ್ಷ ಸದಸ್ಯರು ಇದ್ದಾರೆ  ರಾಷ್ಟ್ರಿಕೃತ ಬ್ಯಾಂಕ್ನ  ಮೂಲಕ ಸದಸ್ಯರ ಅಭಿವೃದ್ದಿಗೆ ಪ್ರಗತಿನಿಧಿ ಒದಗಿಸಲಾಗುತ್ತಿದ್ದು, ಕೇವಲ ಆರ್ಥಿಕ ಚಟುವಟಿಕೆ ಗಳಿಗಷ್ಟೆ ಸೀಮಿತವಾಗದೆ,ಸಾಮಾಜಿಕ ಆಗೂಹೋಗುಗಳಿಗೂ ಯೋಜನೆ ಸ್ಪಂದಿಸುತ್ತಿದೆ. ಗ್ರಾಮ ನೈರ್ಮಲ್ಯ, ಶೌಚಾಲಯದ ಮಹತ್ವ,ಸಾಂಕ್ರಾಮಿಕ ರೋಗಗಳ ಬಗ್ಗೆ ಸಮುದಾಯ ಜಾಗೃತಿ ಮೂಡಿಸುವಲ್ಲಿಯೂ ಶ್ರಮ ವಹಿಸುತ್ತಿದೆ ಎಂದರು. 

6205 ಸಾಮಾನ್ಯ ಸೇವಾ ಕೇಂದ್ರದ ಮೂಲಕ ಸರ್ಕಾರದ ಸೌಲಬ್ಯಗಳನ್ನು ಜನರಿಗೆ ಮುಟ್ಟಿಸಲು ತೆರೆಯಲಾಗಿದ್ದು, ಅಲ್ಪ ಸಮಯದಲ್ಲಿ 1 ಕೋಟಿ ಸೇವೆಗಳನ್ನು ಜನರಿಗೆ ತಲುಪಿಸಲಾಗಿದೆ ಎಂದರು.ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ  ಸಂಸ್ಥಾಪಕ  ಪ್ರಕಾಶ ಎಸ್‌. ಬುರಡಿಕಟ್ಟಿ, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ ನಿರ್ದೇಶಕಿ ಶ್ರೀಮತಿ ಭಾರತಿ ಜಂಬಗಿ, ನಗರ ಯೋಜನಾ ಪ್ರಾಧಿಕಾರದ  ಅಧ್ಯಕ್ಷ ಶಿವಕುಮಾರ್ ನರಸಗೊಂಡರ, ಸ್ವಾಕರವೇ ಅಧ್ಯಕ್ಷ  ನಿತ್ಯಾನಂದ ಕುಂದಾಪುರ, ಉಪಾಧ್ಯಕ್ಷ ಕೊಟ್ರೇಶಪ್ಪ ಎಮ್ಮಿ, ನಗರಸಭಾ ಸದಸ್ಯ  ಶೇಖಪ್ಪ ಹೊಸಗೌಡ್ರ, ಸೇರಿದಂತೆ ಮತ್ತಿತರೆ ಗಣ್ಯರು  ಉಪಸ್ಥಿತರಿದ್ದರು.  ಒಕ್ಕೂಟದ ಸದಸ್ಯರು ಪ್ರಾರ್ಥಿಸಿದರು,. ಜಗದೀಶ್ ಸ್ವಾಗತಿಸಿದರು. ಯೋಜನಾಧಿಕಾರಿ ಸತೀಶ್ ಶೇಟ್  ವರದಿ ವಾಚಿಸಿದರು. ಲಕ್ಷ್ಮಿ ನಿರೂಪಿಸಿ, ವಂದಿಸಿದರು 


ಸುದ್ದಿ ಓದಿ