ಧರ್ಮಸ್ಥಳ ಸಂಸ್ಥೆಯಿಂದ ಸಾಧನಾ ಸಮಾವೇಶ
ರಾಣೆಬೆನ್ನೂರು 11: ನಗರದ ಜಗದ್ಗುರು ಪಂಚಾಚಾರ್ಯ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯಿಂದ ಒಕ್ಕೂಟಗಳ ಸಾಧನಾ ಸಮಾವೇಶಕಾರ್ಯಕ್ರಮ ನಡೆಸಲಾಯಿತು. ಗಚ್ಚಿನಮಠ ಮದ್ದರಕಿ ಹಿರೇಮಠದಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಉದ್ಘಾಟನೆ ಮಾಡಿ ಧರ್ಮಸ್ಥಳ ಸಂಸ್ಥೆಯ ವತಿಯಿಂದ ಮಹಿಳೆಯರಿಗೆ ಸ್ವಂತದುಡಿಮೆಗೆ ಅನುಕೂಲವಾಗುವಂತೆ ಅನೇಕ ಯೋಜನೆಗಳನ್ನು ಮಾಡಿಕೊಡುತ್ತಿದೆ.ಮದುವೆಯಾಗಿಗಂಡನ ಮನೆಗೆ ಬಂದಿರುವ ಹೆಣ್ಣುಮಕ್ಕಳು ಮನೆಯಲ್ಲಿಯೇ ಇರಬೇಕಿತ್ತು. ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದಅಂತಹ ಹೆಣ್ಣುಮಕ್ಕಳ ಸ್ವಾವಲಂಬಿಗಳಾಗಿ ಬದುಕಲು ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ಸಂಘದ ಸದಸ್ಯರ ಮಕ್ಕಳಿಗೆ ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕಾಗಿ ಸುಜ್ಞಾನನಿಧಿ ಶಿಷ್ಯವೇತನ, ನಿರ್ಗತಿಕ ಕುಟುಂಬಗಳಿಗೆ ಮಾಶಾಸನ, ಕೆರೆಯ ಪುನಶ್ಚೇತನ ಕೆಲಸ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಸಂಸ್ಥೆ ವತಿಯಿಂದ ನಡೆಯುತ್ತಿದ್ದು, ಬ್ಯಾಂಕ್ ಮುಖೇನ ಮಹಿಳೆಯರಿಗೆ ಸಾಲ ಕೊಡುವುದರಿಂದ ಸರಿಯಾದ ಸಮಯಕ್ಕೆ ಹಿಂದಿರುಗಿಸುತ್ತಿದ್ದಾರೆ ಹಾಗೇಯೇ ಆ ಹಣದಿಂದತಮ್ಮಉತ್ತಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಸಂಸ್ಥೆಯು ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೆನೆ ಎಂದು ನುಡಿದರು.
ಯೋಜನೆಯಜಿಲ್ಲಾ ನಿರ್ದೇಶಕರಾದ ನಾಗರಾಜ ಶೆಟ್ಟಿತಾಲೂಕಿನಲ್ಲಿ 3881 ತಂಡಗಳಿದ್ದು, ಪ್ರಸ್ತುತ ವರ್ಷದಲ್ಲಿ 3.12 ಕೋಟಿ ಲಾಭಾಂಶವನ್ನು ಸಂಘದ ಸದಸ್ಯರಿಗೆ ವಿತರಣೆ ಮಾಡಲಾಗಿದೆ. 100 ರೂ. ಮೌಲ್ಯದಲ್ಲಿ ವಾರ್ಷಿಕ 20000 ರೂ. ಆರೋಗ್ಯ ವಿಮೆಯನ್ನು ಸಂಘದ ಸದಸ್ಯೆ ಹಾಗೂ ಅವರ ವಿನಿಯೋಗದಾರರಿಗೆ ಪ್ರಸ್ತುತ ವರ್ಷದಲ್ಲಿಆರಂಭ ಮಾಡಲಾಗುತ್ತಿದೆ.ತಾಲೂಕಿನ ಒಕ್ಕೂಟಗಳು ಉತ್ತಮರೀತಿಯಲ್ಲಿಕಾರ್ಯ ನಿರ್ವಹಿಸುತ್ತಿವೆ ಎಂದರು. ಮುಖ್ಯ ಅಥಿತಿಗಳಾಗಿ ರುಕ್ಮಿಣಿ ಸಾಹುಕಾರ ವನಿತಾಗುತ್ತಲ, ಸಂತೋಷ ಪಾಟೀಲ, ನಿತ್ಯಾನಂದ ಕುಂದಾಪುರ, ಚನ್ನಬಸಪ್ಪಜಂಬಗಿ, ಪ್ರಭುಲಿಂಗಯ್ಯಕರ್ಜಗಿಮಠಇವರು ಉಪಸ್ಥಿತರಿದ್ದರು. ಉತ್ತಮ ಸಾಧನೆ ಮಾಡಿದ ಒಕ್ಕೂಟಗಳಿಗೆ ಅಭಿನಂದನಾ ಪತ್ರ, ಲಾಭಾಂಶ ವಿತರಣೆ, ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ತಾಲೂಕಾಯೋಜನಾಧಿಕಾರಿ ಸತೀಶ್ ಶೇಟ್ ಪ್ರಾಸ್ತಾವಿಕ ಮಾತನಾಡಿದರು. ಮೇಲ್ವೀಚಾರಕ ತಿಮ್ಮಪ್ಪ ನಿರೂಪಿಸಿದರು. ರವಿ ಸ್ವಾಗತಿಸಿದರು.