ರಾಣೆಬೆನ್ನೂರ

ಸದ್ಭಾವನಾ ಪ್ರಶಸ್ತಿ ಪ್ರದಾನ-ಧರ್ಮ ಸಭೆ-ಜ್ಞಾನ ಲಕ್ಷ ದೀಪೋತ್ಸವ

ಸದ್ಭಾವನಾ ಪ್ರಶಸ್ತಿ ಪ್ರದಾನ-ಧರ್ಮ ಸಭೆ-ಜ್ಞಾನ ಲಕ್ಷ ದೀಪೋತ್ಸವ

ರಾಣೇಬೆನ್ನೂರ 30: ನಗರದ ಹೊರವಲಯದಲ್ಲಿರುವ ಹಿರೇಮಠದ ಶನೈಶ್ಚರ ಸ್ವಾಮಿ ಮಂದಿರದ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಾಗೂ ಪ್ರದೇಶಾಭಿವೃದ್ದಿಗಾಗಿ ನಿರಂತರ 384 ದಿನಗಳ ಕಾಲ ನಡೆಯುತ್ತಿರುವ ವಿವಿಧ ಧಾರ್ಮಿಕ ಹಾಗೂ ಪೂಜಾ ಕಾರ್ಯಕ್ರಮದ 9ನೇ ವರ್ಷದ ಶನೈಶ್ಚರ ಸ್ವಾಮಿಯ ವಾರ್ಷಿಕೋತ್ಸವದ  ಅಂಗವಾಗಿ ನ.29 ರಿಂದ ಡಿ.4 ರವರೆಗೆ ವೈವಿಧ್ಯಮಯ ಹಾಗೂ ವಿವಿಧ ಪೂಜಾ ಹಾಗೂ ಧಾರ್ಮಿಕ ಮತ್ತಿತರ ಕಾರ್ಯಕ್ರಮಗಳು ಜರುಗಲಿದ್ದು, ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ಇಡೀ ರಾಷ್ಟ್ರದಲ್ಲಿಯೇ ಪ್ರಥಮವಾಗಿದೆ ಎಂದು ತಿಳಿಸಲು ಹೆಮ್ಮೆ ಎನಿಸುತ್ತದೆ ಎಂದು ಶನೈಶ್ಚರ ಮಂದಿರದ ಶಿವಯೋಗಿ ಶಿವಚಾರ್ಯ ಸ್ವಾಮಿಗಳು ಹೇಳಿದರು.  

ಅವರು  ರವಿವಾರ ಮಂದಿರದಲ್ಲಿ ಏರ್ಪ್ ಸಿದ್ದ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಶನೈಶ್ಚರ ಮಂದಿರದಲ್ಲಿ ಪ್ರತಿದಿನ ಮಹಾಮೃತ್ಯುಂಜಯ ಜಪ, ಯಾಗ, ದುರ್ಗಾ ಜಪ, ಹವನ ಮತ್ತು ದೀಪದುರ್ಗಾ ನಮಸ್ಕಾರ ಪೂಜೆ ನಡೆಯುತ್ತಿದ್ದು, ಮಂಗಲೋತ್ಸವ ದಿನದಂದು ರೈತ ಚೈತನ್ಯ ಜ್ಯೋತಿ ಯಾತ್ರೆ, ಸಾವಯವ ಕೃಷಿ ಮೇಳ, ಯೋಧ ನಮನ, ಕ್ಷೀರ ಕುಂಭೋತ್ಸವ, ಭದ್ರಕಾಳಿ ಸಮೇತ ವೀರಭದ್ರೇಶ್ವರ ಕಲ್ಯಾಣ ಮಹೋತ್ಸವ, 384 ಬಾಗೀನ ಸಮರೆ​‍್ಣ, 64 ಮಂಟಪ ಪೂಜೆ ಜ್ಞಾನ ಲಕ್ಷ ದೀಪೋತ್ಸವ ಮತ್ತು ಮನುಕುಲ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಪ್ರದಾನ, ಬೆಳಕಿನ ಧರ್ಮ ಸಮಾರಂಭ ಹಾಗೂ ಮಾತೃ ಸಮಾವೇಶವು ನಡೆಯಲಿದೆ ಎಂದರು.  

ನ.29 ರಂದು ಕುದರಿಹಾಳ ಗ್ರಾಮದ ತುಂಗಭದ್ರ ನದಿಯಲ್ಲಿ ಗಂಗಾಪೂಜೆಯ ಮೂಲಕ ಪೂರ್ಣ ಕುಂಭದೊಂದಿಗೆ ಪಾದಯಾತ್ರೆ ಮೂಲಕ ಮಂದಿರಕ್ಕೆ ಆಗಮಿಸುವುದು. ಮಧ್ಯಾಹ್ನ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ಸಾನಿಧ್ಯವನ್ನು ಕೂಡಲದ ಗುರು ಮಹೇಶ್ವರ ಸ್ವಾಮೀಜಿ, ಮಹಾಂತ ಸ್ವಾಮಿಗಳು ತಿಪ್ಪಾಯಿಕೊಪ್ಪ, ನಂಜುಂಡ ಪಂಡಿತಾರಾಧ್ಯ ಸ್ವಾಮಿಗಳು, ಹೇರೂರ ಇವರು ವಹಿಸುವರು. ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ಕಾರ್ಯಕ್ರಮ ಉದ್ಘಾಟಿಸುವರು ಎಂದರು. ಮುಖ್ಯ ಅತಿಥಿಗಳಾಗಿ ಎಸ್ಪಿ ಹನುಮಂತರಾಯ, ತಹಸೀಲ್ದಾರ ಶಂಕರ್ ಜಿ.ಎಸ್, ಸ್ವಾ.ಕ.ರ.ವೇ. ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ತಾ. ವೈದ್ಯಾಧಿಕಾರಿ ಡಾ.ಸಂತೋಷಕುಮಾರ ಜಿ., ಪೌರಾಯುಕ್ತ ರವಿಕುಮಾರ, ಬಿಇಓ ಗುರುಪ್ರಸಾದ, ಶ್ರೀ.ಕ್ಷೇ.ಧ.ಗ್ರಾ.ಯೋ. ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ, ಗ್ರಾಮೀಣ ಸಿಪಿಐ ಶ್ರೀಶೈಲ ಚೌಗಲಾ, ನಗರ ಸಿಪಿಐ ಎಂ.ಬಿ.ಗೌಡಪ್ಪಗೌಡ್ರ, ತಾ.ಪಂ.ಕಾ.ನಿ. ಅಧಿಕಾರಿ ಟಿ.ಆರ್‌.ಮಲ್ಲಾಡದ ಆಗಮಿಸುವರು. 

 ನ.30 ರಂದು ಬೆಳಗ್ಗೆ 10ಕ್ಕೆ ಕೋಟೆ ವೀರಭದ್ರೇಶ್ವರ ದೇವಸ್ಥಾನದಿಂದ ಗುಗ್ಗಳ ಉತ್ಸವ, ಮಧ್ಯಾಹ್ನ 12ಕ್ಕೆ ಪುರವಂತಿಕೆ ಮೇಳ ಅನಂತರ ವೀರಭದ್ರೇಶ್ವರ ಸ್ವಾಮಿಯ ಕಲ್ಯಾಣ ಮಹೋತ್ಸವ ಜರುಗುವದು. ಮಧ್ಯಾಹ್ನ 3ಕ್ಕೆ ಧರ್ಮಸಭೆಯ ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯರು, ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು, ಸಂಗೊಳ್ಳಿ, ಅಬಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮಿಗಳು, ಹಾವೇರಿ, ಜಗದೀಶ್ವರ ಸ್ವಾಮಿಗಳು, ಕೊಡಿಯಾಲ ಹೊಸಪೇಟೆ, ಸದ್ಗುರು ಶಿವಯೋಗಿ ಹಾಲಸ್ವಾಮಿಗಳು, ನಚ್ಚವ್ವನಹಳ್ಳಿ ಇವರು ಸಾನಿಧ್ಯ ವಹಿಸುವರು.   ನೆಗಳೂರಿನ ಗುರುಶಾಂತ ಶಿವಯೋಗಿ ಸ್ವಾಮೀಜಿಗಳು ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸದಾಶಿವ ಉಪ್ಪಿನ, ಬಾಬಣ್ಣ ಶೆಟ್ಟರ, ಮಹಾರುದ್ರ​‍್ಪ ಇಟಗಿ, ಚಂದ್ರಣ್ಣ ಜಂಬಿಗಿ, ಎಂ.ಎಸ್‌.ಅರಕೇರಿ, ಈರಣ್ಣ ಬೇತೂರ, ಸಿದ್ದಪ್ಪ ಅಂಬಲಿ, ಹಾಲೇಶಪ್ಪ ಗೌಳಿ, ಈರಣ್ಣ ಮಾಕನೂರ, ಈಶ್ವರ ಚಿನ್ನಿಕಟ್ಟಿ, ಬಿ.ವಿ.ರೊಡ್ಡನವರ, ಬಿದ್ದಾಡೆಪ್ಪ ಚಕ್ರಸಾಲಿ, ಚಂದ್ರಣ್ಣ ರಾಮಾಳದ, ಶೇಖಪ್ಪ ಜಡಮಲಿ, ಸೋಮಣ್ಣ ಹಿರೇಬಿದರಿ, ಎಂ.ಕೆ.ರಂಗನವರ ಮುಂತಾದವರು ಆಗಮಿಸುವರು. 

 ಡಿ. 1 ರಂದು ಬೆಳಿಗ್ಗೆ ಗೋಮಂಗಳ ಯಾತ್ರೆ ಹಾಗೂ ರೈತ ಚೈತನ್ಯ ಜ್ಯೋತಿ ಯಾತ್ರೆಯು ನಗರದ ಕೆಇಬಿ ಗಣೇಶ ದೇವಸ್ಥಾನದಿಂದ ಆರಂಭಗೊಳ್ಳುವುದು. ಮಧ್ಯಾಹ್ನ 3ಕ್ಕೆ ಸಾವಯವ ಕೃಷಿ ಮೇಳ ಉದ್ಘಾಟನೆ, 63 ರೈತರಿಗೆ ಪ್ರಶಸ್ತಿ ಸಮಾರಂಭ ಜರುಗಲಿದೆ. ಇದೇ ಸಂದರ್ಭದಲ್ಲಿ ಅನ್ನದಾತ ಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಸಾವಯುವ ಕೃಷಿ ಮಿಷನ್ನಿನ ರಾಜ್ಯಾಧ್ಯಕ್ಷ ಎ.ಎಸ್‌.ಆನಂದ ಕಾರ್ಯಕ್ರಮ ಉದ್ಘಾಟಿಸುವರು. ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳು, ನರಸೀಪುರ, ಮುರುಘರಾಜೇಂದ್ರ ಸ್ವಾಮಿಗಳು, ಮಡ್ಲೂರ, ಚಂದ್ರಶೇಖರ ಸ್ವಾಮಿಗಳು, ಅಕ್ಕಿಆಲೂರ ಇವರು ಸಾನಿಧ್ಯ ವಹಿಸುವರು. 

ಡಿ.2 ರಂದು ಮಧ್ಯಾಹ್ನ 3 ಗಂಟೆಗೆ ದಾಖಲೆಯ 384 ದಿನಗಳ ಮಹಾಮಂಡಲೋತ್ಸವ ಸಮಾರೋಪ ಹಾಗೂ ಯೋಧ ನಮನ ಮತ್ತು ಷಷ್ಠಿ ಪೂರ್ತಿ ಗೌರವ ಸಮಾರಂಭವು ಹುಬ್ಬಳ್ಳಿ ಮೂರು ಸಾವಿರ ಮಠದ ಗುರುರಾಜೇಂದ್ರ ಮಹಾಸ್ವಾಮಿಗಳ ಮತ್ತು ಚಿತ್ರದುರ್ಗದ ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಮುರುಘಾಶರಣರು, ರೇಣುಕ ಶಿವಾಚಾರ್ಯ ಸ್ವಾಮಿಗಳು, ಬಾಳೆಹೊನ್ನೂರ, ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು, ದಿವ್ಯ ಸಾನಿಧ್ಯ ವಹಿಸುವರು. ಅಧ್ಯಕ್ಷತೆಯನ್ನು ಕರಿವೃಷಭ ಶಿವಯೋಗಿ ಸ್ವಾಮಿಗಳು, ನೊಣವಿನಕೆರೆ ಇವರು ವಹಿಸುವರು. ಶಾಸಕ ಅರುಣಕುಮಾರ ಪೂಜಾರ ಕಾರ್ಯಕ್ರಮ ಉದ್ಘಾಟಿಸುವರು. ಅನಂತರ ಬಾಲವಾಗ್ಮಿ ಹಾರಿಕಾ ಮಂಜುನಾಥ್ ಇವರಿಂದ ಉಪನ್ಯಾಸ ಕಾರ್ಯಕ್ರಮ ಜರುಗಲಿವೆ. 

ಡಿ. 3 ರಂದು ಮಧ್ಯಾಹ್ನ 3 ಗಂಟೆಗೆ ಉಜ್ಜೈಯಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸಿದ್ದಾಂತ ಶಿಖಾಮಣಿ, ಪ್ರವಚನ ಮಂಗಲೋತ್ಸವ ಮತ್ತು ಮಾತೃ ಸಂಗಮ ಸಮಾವೇಶವು ಜರುಗಲಿವೆ. ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಬೆಂಗಳೂರ, ಮಲಯಶಾಂತಮುನಿ ಶಿವಾಚಾರ್ಯ ಸ್ವಾಮಿಗಳು, ಶಿವಗಂಗೆ, ಸೂರೇಶ್ವರ ಶಿವಾಚಾರ್ಯ ಸ್ವಾಮಿಗಳು, ಕುರಗೋಡ, ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ಕಡಕೋಳ ಇವರು ಉಪಸ್ಥಿತರಿರುವರು. ವೀರಶೈವ ಮಹಾಸಭೆಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಅರುಣಾದೇವಿ ಯಡಿಯೂರ​‍್ಪ ಕಾರ್ಯಕ್ರಮ ಉದ್ಘಾಟಿಸುವರು. ಉದ್ಯಮಿ ವೇದಮಾತಾ ಇಂದುಕಲಾ ಟಿ.ಎಸ್‌. ಇವರಿಗೆ ಮಾತೃ ದೀಪ್ತಿ ಪ್ರಶಸ್ತಿ ಪ್ರದಾನ ನಡೆಯಲಿದೆ.  

ಕಾರ್ಯಕ್ರಮದ ಅಂತಿಮ ದಿನವಾದ ಡಿ. 4 ರಂದು ಶ್ರೀಮದ್ ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರ ಸಾನಿಧ್ಯದಲ್ಲಿ ಕಾರ್ಯಕ್ರಮದ ಪೂರ್ಣ ಮಂಗಲೋತ್ಸವ ಮನುಕುಲ ಸದ್ಭಾವನಾ ಬೆಳಕಿನ ಧರ್ಮ ಸಮಾರಂಭವು ನಡೆಯಲಿದೆ. ಅಧ್ಯಕ್ಷತೆಯನ್ನು ಡಾ. ಜಯಶಿದ್ದೇಶ್ವರ ಸ್ವಾಮಿಗಳು, ಸೊಲ್ಲಾಪುರ ವಹಿಸುವರು. ರೇವಣಶಿದ್ದೇಶ್ವರ ಸ್ವಾಮಿಗಳು, ಬಂಕಾಪುರ, ವಿಮಲರೇಣುಕ ವೀರಮುಕ್ತಿಮನಿ ಸ್ವಾಮಿಗಳು, ಬೆಂಗಳೂರ, ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಹುಕ್ಕೇರಿ ಇವರುಗಳು ಉಪಸ್ಥಿತರಿರುವರು. ಸುಪ್ರಿಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ವಿ.ಗೋಪಾಲಗೌಡ ಕಾರ್ಯಕ್ರಮ ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರ​‍್ಪನವರಿಗೆ ಮನುಕುಲ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಎಸ್‌.ಎಸ್‌.ರಾಮಲಿಂಗಣ್ಣನವರಿಗೆ ಗೌರವ ಸತ್ಕಾರ ಮಾಡಲಾಗುವುದು ಎಂದು ಶ್ರೀಗಳು ವಿವರಿಸಿದರು. 

ಸುದ್ದಿಗೋಷ್ಠಿಯಲ್ಲಿ  ಹೇರೂರಿನ ಗುಬ್ಬಿ ನಂಜುಂಡ ಪಂಡಿತಾರಾಧ್ಯ ಸ್ವಾಮಿಗಳು, ಕೂಡಲದ ಗುರುಮಹೇಶ್ವರ ಶಿವಾಚಾರ್ಯರು, ಸ್ವಾಗತ ಸಮಿತಿಯ ಅಧ್ಯಕ್ಷ ಎಸ್‌.ಎಸ್‌.ರಾಮಲಿಂಗಣ್ಣನವರ, ಗ್ರಾಮೀಣ ಅಧ್ಯಕ್ಷ ಬಸವರಾಜ ಸವಣೂರು, ಸಿದ್ದಪ್ಪ ಚಿಕ್ಕಬಿದರಿ, ಕೊಟ್ರೇಶ್ ದಾವಣಗೇರಿ, ಸ್ವಾಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ಕೋಟ್ರೇಶಪ್ಪ ಎಮ್ಮಿ ಸೇರಿದಂತೆ ಮತ್ತಿತರರು ಇದ್ದರು. 


ಸುದ್ದಿ ಓದಿ