ಸದಾಶಿವ ಆಯೋಗದ ವರದಿ ಅವೈಜ್ಞಾನಿಕ: ಭೂವಿ ಸಮಾಜದಿಂದ ಸರ್ಕಾರಕ್ಕೆ ಮನವಿ
ಲೋಕದರ್ಶನ ವರದಿ
ರಾಣೇಬೆನ್ನೂರು 05: ಅವೈಜ್ಞಾನಿಕ ಸಂವಿಧಾನ ವಿರೋಧಿ ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಜಾರಿಗೂಳಿಸಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಕೂಡಲೇ ರದ್ದು ಪಡಿಸಲು ಮುಂದಾಗಬೇಕೆಂದು ಆಗ್ರಹಿಸಿ ಭೂವಿ ಸಮಾಜದ ಮುಖಂಡರು ತಹಸೀಲ್ದಾರ ಮೂಲಕ ರಾಜ್ಯ ಸರ್ಕಾರದ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಸೋಮವಾರ ಕಛೇರಿ ಆವರಣದಲ್ಲಿ ಜಮಾಯಿಸಿದ ತಾಲೂಕು ಮತ್ತು ನಗರದ ಭೂವಿ ಸಮಾಜದ ಮುಖಂಡರು ಮತ್ತು ಸಂಘಟನೆಯ ಕಾರ್ಯಕರ್ತರು ಒಕ್ಕೂರಲ ಆಗ್ರಹಿಸಿ ಸಮಾಜವು ರಾಜ್ಯದಲ್ಲಿ 45 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅತೀ ಹಿಂದುಳಿದ ಸಮಾಜ ಇದಾಗಿದೆ ಎಂದು ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಿರುವ ತಾಲೂಕಾ ಅಧ್ಯಕ್ಷ ಮಂಜಪ್ಪ ವಡ್ಡರ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗವು 101 ಸಮುದಾಯ ಹೂಂದಿದೆ ಆದರೆ ಸದಾ ಶಿವ ಆಯೋಗದ ವರದಿಯಲ್ಲ ಭೂವಿ, ಲಂಬಾಣಿ, ಕೂರಚ, ಕೂರಮ ಮತ್ತು ಕಿಳ್ಳಿಕ್ಯಾತರ ಈ 5 ಸಮುದಾಯವನ್ನು ಕೈ ಬೀಡಬೇಕೆಂದು ಸಲ್ಲಿಸಿರುವ ವರದಿಯು ಅವೈಜ್ಷಾನಿಕ ಮತ್ತು ಅಪೂರ್ಣವಾಗಿದೆ ಯಥಾವತ್ತಾಗಿ ಈ ಸಮುದಾಯವನ್ನು ಪಟ್ಟಿಯಲ್ಲಿ ಮುಂದುವರೆಸಬೇಕೆಂದು ಆಗ್ರಹಿಸಿದರು.
ಭೂವಿ ಸಮಾಜವು ಗತ ಇತಿಹಾಸ ಕಾಲದಿಂದಲೂ ಕಲ್ಲು ವಡೆಯುವುದು, ಕಾಲುವೆ, ಕೆರೆ, ಕಟ್ಟೆ, ಮುಂತಾದ ಶ್ರಮದಾಯಕ ವೃತ್ತಿಯನ್ನು ಅವಲಂಭಿಸಿ ಬದುಕಿನ ಬಂಡಿ ಸಾಗಿಸಲು ಊರಿಂದ ಊರಿಗೆ ಗುಳೆ ಹೂಗುವ ಪದ್ದತಿ ಇಂದಿಗೂ ಮುಂದುವರೆದಿದೆ. ಈ ಸಮುದಾಯವು ಶೋಷಿತ ಸಮುದಾಯವಾಗಿದ್ದು ಸದಾಶಿವ ಆಯೀಗ ವರದಿಯಂತೆ ಜಾರಿಯಾದರೆ ಭೂವಿ ಸೇರಿದಂತೆ ಮತ್ತಿತರೆ ಈ 4 ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಆದ್ದರಿಂದ ವರದಿ ರದ್ದು ಪಡಿಸಿ ಮುಂದು ವರೆಸಬೇಕೆಂದು ಆಗ್ರಹಿಸಿದರು. ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ಜಗದೀಶ ಕೆರೋಡಿ, ಹನುಮಂತಪ್ಪ ವಡ್ಡರ, ವೆಂಕಪ್ಪ ಅನ್ಸಾಪುರ, ಶಿವಾನಂದ ವಡ್ಡರ, ರಂಗಪ್ಪ ವಡ್ಡರ, ವೆಂಕಟೇಶ ದೂಡ್ಡಮನಿ, ರವಿ ಕೆರೋಡಿ, ಬಸವರಾಜ ದೇವರಹಳ್ಳಿ, ನಾಗರಾಜ ದೂಡ್ಡಮನಿ, ಶಿವಾನಂದ ದೂಡ್ಡಮನಿ ಸೇರಿದಂತೆ ಮತ್ತಿತರ ಗಣ್ಯರು ಸಮಾಜದ ಮುಖಂಡರು ಪಾಲ್ಗೊಂಡಿದ್ದರು.